Sunday, September 14, 2008

ಅಣ್ಣ-ತಂಗಿಯರ ದಿನದ ನೆನಪಲ್ಲಿ

ಅಣ್ಣ ತಂಗಿಯರಿಗೊಂದು ದಿನ !!! ದಶಕಗಳ ಹಿಂದೆ ಯಾವುದೇ ದಿನವನ್ನು ಢಾಣಾ ಡಂಗೂರವಿಲ್ಲದೆ ಅವರವರ ಮನೆಗಳಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದರು. ಅದನ್ನು" ಇಂತಹ " ದಿನ ಎಂದೇನೂ ಲೇಬಲ್ ಹಚ್ಚುತ್ತಿರಲಿಲ್ಲ -ಆದರೆ. ಹಬ್ಬವೆಂದು ಆಚರಿಸುತ್ತಿದ್ದೆವು.ಶ್ರಾವಣ ಮಾಸದ ಐದನೇ ದಿನವೇ ( ಗರುಡ ಪಂಚಮಿ) ಅಣ್ಣ ತಂಗಿಯರ ಹಬ್ಬದ ದಿನ. ಇತ್ತೀಚೆಗೆ ಭಾರತದಾದ್ಯಂತ ರಾಖಿ ಹಬ್ಬ ಅಥವಾ ರಕ್ಷಾಬಂಧನವನ್ನೂ ಅಣ್ಣ ತಂಗಿಯರ ಹಬ್ಬವಾಗಿ ಆಚರಿಸುತ್ತಾರೆ.. ಇದು ಉತ್ತರ ಭಾರತದಿಂದ ಬಂದ ಆಚರಣೆ.

ನಾಲ್ಕು ದಶಕಗಳ ಹಿಂದೆ ನಾವೆಲ್ಲಾ ಪುಟ್ಟವರಾಗಿದ್ದಾಗ ನಮ್ಮ ಅಣ್ಣಂದಿರೊಂದಿಗೆ ಒಡನಾಡಿದ ದಿನಗಳನ್ನು ಒಮ್ಮೆ ಸ್ಮೃತಿಪಟಲದ ಮುಂದೆ ತಂದುಕೊಂಡಾಗ..

ಸರ್ಕಾರಿ ನೌಕರಿಯಲ್ಲಿದ್ದ ಅಪ್ಪ ಆ ಊರಿಗೆ ವರ್ಗವಾಗಿ ಬಂದಾಗ ನನಗೆ ಎಂಟು ಹಾಗೂ ನನ್ನಣ್ಣನಿಗೆ ಹತ್ತು ವರ್ಷ. ಹೊಸ ಶಾಲೆಗೆ ಮೊದಲಬಾರಿ ಹೋಗುವಾಗ ನನ್ನ ಅಣ್ಣ ನನಗೆ ಧೈರ್ಯ ತುಂಬಿದ ರೀತಿ ನೆನಸಿಕೊಂಡರೆ ಅಚ್ಚರಿ ಎನಿಸುತ್ತದೆ. ನಮ್ಮಿಬ್ಬರದೂ ಬೇರೆ ಬೇರೆ ಶಾಲೆಗಳು. ಎರಡು ಶಾಲೆಗಳ ನಡುವೆ ಹತ್ತು ಹದಿನೈದು ನಿಮಿಷದ ನಡಿಗೆಯ ಅಂತರ.ಮಧ್ಯಾನ್ಹ ಊಟದ ಬಿಡುವಿನಲ್ಲಿ ಯಾರೊಡನೆ ಊಟ ಮಾಡಲಿ? ಆ ಶಾಲೆಯಲ್ಲಿ ಯಾರೂ ಪರಿಚಿತರಿಲ್ಲವಲ್ಲ. ಎಂಬುದು ನನ್ನ ಚಿಂತೆ. ಅದಕ್ಕೆ ನನ್ನಣ್ಣ ಸೂಚಿಸಿದ ಪರಿಹಾರ- ಎರಡು ಶಾಲೆಗಳ ನಡುವಿರುವ ಒಂದು ದೊಡ್ಡ ಮರದ ಕಟ್ಟೆಯ ಮೇಲೆ ಕುಳಿತು ಊಟ ಮಾಡುವುದೆಂದು- ಇಬ್ಬರೂ ಮಧ್ಯಾನ್ಹದ ಬೆಲ್ ಆದ ಕೂಡಲೇ ಆ ಜಾಗದ ಬಳಿ ಬಂದು ಊಟ ಮುಗಿಸುತ್ತಿದ್ದೆವು. ಕಡೆಗೊಮ್ಮೆ ಇದನ್ನು ಪ್ರತಿದಿನ ಗಮನಿಸಿದ ನಮ್ಮ ಟೀಚರ್ ಕರೆದು ಹಾಗೆಲ್ಲಾ ಶಾಲೆಯಾಚೆ ಹೋಗಬಾರದೆಂದು ಹೇಳಿ ಇತರ ಮಕ್ಕಳೊಡನೆ ನಾನು ಬೆರೆಯುವಂತೆ ಮಾಡಿದ್ದರು. ಹೊಸ ಶಾಲೆ ನನಗೆಷ್ಟು ಭಯ ಹುಟ್ಟಿಸಿತ್ತೋ ಅವನಿಗೂ ಅವನ ಶಾಲೆ ಭಯ ಹುಟ್ಟಿಸಿತ್ತೆಂಬುವ ವಿಷಯ ದೊಡ್ಡವಳಾದ ಮೇಲೆಯೇ ನನಗೆ ನನಗೆ ತಿಳಿದದ್ದು.!!

ಎಂಟು ವರ್ಷಗಳ ನಂತರ ವಿದ್ಯಾಭ್ಯಾಸ ಮುಂದುವರೆಸಲು ನಾನು ಬೆಂಗಳೂರಿಗೆ ಬಂದಾಗ ನನಗಿಂತ ಒಂದು ವರ್ಷ ಮುಂಚೆ ಬಂದಿದ್ದ ಅದೇ ಅಣ್ಣ ಮತ್ತೆ ನನಗೆ ಧೈರ್ಯ ತುಂಬಿ ಹಾಸ್ಟೆಲ್, ಕಾಲೇಜ್ ಎಲ್ಲವನ್ನೂ ತೋರಿಸಿ ಬಸ್ ಪಾಸ್ ಮಾಡಿಸಿಕೊಟ್ಟು ಕಾಲೇಜಿನ ಮೊದಲ ದಿನ ತರಗತಿಯವರೆಗೂ ಕರೆದೊಯ್ದ.ಅಷ್ಟೇ ಅಲ್ಲ ಪ್ರತಿ ಬಾರಿಯೂ ಪರೀಕ್ಷೆ ಪ್ರಾರಂಭವಾಗುವ ಮೊದಲ ದಿನ ಬೆಸ್ಟ್ ಆಫ್ ಲಕ್ ಹೇಳಲು ಪರೀಕ್ಷಾ ಕೊಠಡಿಯ ಬಳಿ ಬರುವಾಗ ತಪ್ಪದೆ ಬಾದಾಮಿ ಹಲ್ವ ತರುತ್ತಿದ್ದ. ಆದ್ದರಿಂದಲೇ ಪರೀಕ್ಷೆಯ ದಿನ ನನ್ನ ಸುತ್ತ ಗೆಳತಿಯರ ಗುಂಪೇ ಇರುತ್ತಿತ್ತು. !!! ಅಣ್ಣನ ಇಂತಹ ವಾತ್ಸಲ್ಯ , ಪ್ರೋತ್ಸಾಹ ತಂಗಿಯರಿಗೆ ಎಷ್ಟೊಂದು ಹೆಮ್ಮೆ..

ನಮ್ಮ ಬಾಲ್ಯದಲ್ಲಿ ಪಂಚಮಿ ಹಬ್ಬದಂದು ಮನೆಯಲ್ಲಿರುವ ಅಣ್ಣ ತಂಗಿಯರಿಗೆಲ್ಲಾ ಸಂಭ್ರಮ. ಬೆಳಿಗ್ಗೆ ಸ್ನಾನ ಮಾಡಿ ಪೂಜೆಯಾದ ಮೇಲೆ ಅಣ್ಣ ತಮ್ಮಂದಿರೆಲ್ಲಾ ಸಾಲಾಗಿ ಮಣೆಯ ಮೇಲೆ ಕುಳಿತರೆ ಅಕ್ಕ ತಂಗಿಯರು ಅವರ ಬೆನ್ನಿಗೆ ಹಾಲು ಸವರಿ ತಣ್ಣಗೆ ಮಾಡುವ ಆ ವಿಶಿಷ್ಟ ಹಬ್ಬವನ್ನು ಎಂದಿಗೂ ಮರೆಯುವಂತಿಲ್ಲ.ಸೋದರಿಯರು ಸೋದರರಿಗೆ ಅಕ್ಷತೆ ಕೊಟ್ಟು ನಮಸ್ಕರಿಸಿದಾಗ, ಅಣ್ಣ ತಮ್ಮಂದಿರ ಕೈಯಿಂದ ಉಡುಗೊರೆ ಕೊಡಿಸುತ್ತಿದ್ದ ಸಂಪ್ರದಾಯ ಎಷ್ಟೊಂದು ಅರ್ಥಪೂರ್ಣ!! ಆ ರೀತಿ ಬೆಳೆದ ಸೋದರರಿಗೆ ತಮ್ಮ ಅಕ್ಕ ತಂಗಿಯರನ್ನು ನೋಡಿಕೊಳ್ಳಬೇಕಾದ್ದು ತಮ್ಮ ಜವಾಬ್ದಾರಿ ಎಂಬ ಅರ್ಥಪೂರ್ಣ ಸಂದೇಶ ಯಾವುದೇ ಅಬ್ಬರವಿಲ್ಲದೆ ರವಾನೆಯಾಗುತ್ತಿತ್ತು. ಹಾಗೆಯೇ ತಂದೆ ತಾಯಿಯರ ನಂತರ ಅಣ್ಣನ ಮನೆಯೇ ತವರು ಮನೆ ಎಂಬ ಭಾವ ಹೆಣ್ಣುಮಕ್ಕಳಲ್ಲಿ ಮೂಡುತ್ತಿತ್ತು. ಆ ಕಾಲದ ಪುಟ್ಟ ಮಕ್ಕಳು ಈಗ ಹಿರಿಯ ನಾಗರಿಕರಾದರೂ ಈಗಲೂ ಪಂಚಮಿ ಹಬ್ಬದ ದಿನ ಅದನ್ನು ಪರಿಪಾಲಿಸಿಕೊಂಡು ಬರುತ್ತಿದ್ದರೆ ಅಚ್ಚರಿ ಇಲ್ಲ. ಈಗಲೂ ಸಹ ದೂರದೂರುಗಳಲ್ಲಿರುವ ನನ್ನ ಅಕ್ಕ ತಂಗಿಯರು ನಮ್ಮ ಸಹೋದರರಿಗೆಲ್ಲಾ ಈ ಹಬ್ಬಕ್ಕೆ ಅಕ್ಷತೆಯನ್ನು ಪೋಸ್ಟ್ ಮೂಲಕ ಕಳಿಸಿ ಆಶೀರ್ವಾದ ಪಡೆಯುವ ಸಂಪ್ರದಾಯ ಉಳಿಸಿಕೊಂಡುಬಂದಿದ್ದಾರೆ.

ಆಗಿನ ಮಕ್ಕಳು " ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರೂ ಎಂದೆಂದೂ ... " ಎಂದೋ " ಏಕ್ ದೋ ತೀನ್ ಚಾರ್ ಭೈಯ್ಯಾ ಭೈಯ್ಯ ಹೋಷಿಯಾರ್ ... " ಎಂದು ಹಾಡಿಕೊಳ್ಳುತ್ತಾ ಬೆಳೆದವರು. ಆದರೆ ಈ ಕಾಲದ ಮಕ್ಕಳಿಗೆ ಬಾಂಧವ್ಯಗಳ ಅರ್ಥ ಹೇಗೆ ತಾನೇ ಆಗಲು ಸಾಧ್ಯ ? ಮನೆಯಲ್ಲಿ ಒಂದೋ ಎರಡೋ ಮಕ್ಕಳು. ಮನೆಯಲ್ಲಿರುವ ತಾಯಿ ತಂದೆಯರಿಗೆ ಮಕ್ಕಳ ಭವಿಷ್ಯ ರೂಪಿಸುವ ಅಗಾಧ ಜವಾಬ್ದಾರಿ !!!? ಅದಕ್ಕಾಗಿಯೇ ಹಗಲಿರುಳು ದುಡಿಯುವ ಅವರಿಗೆ ಮಕ್ಕಳೊಡನೆ ಮಾತನಾಡಲೂ ಪುರುಸೊತ್ತಿರುವುದಿಲ್ಲ.!!! ಇನ್ನು ಮಕ್ಕಳಿಗೋ ಒಂದು ಹೊರೆ ಹೋಮ್ ವರ್ಕ್, !! ಪ್ರಾಜೆಕ್ಟ್‍ವರ್ಕ್ ಇದರ ಮಧ್ಯೆ ಪ್ರೀತಿ, ಬಾಂಧವ್ಯ ಎಂಬ ಸೆಂಟಿಮೆಂಟ್‍ಗಳಿಗೆಲ್ಲಾ ಸಮಯವೆಲ್ಲಿ ? ಈಗ ಅನೇಕ ರೀತಿಯ ಬೆಲೆಬಾಳುವ ಆಟದ ಸಾಮಾನುಗಳಷ್ಟೇ ಏಕೆ ವಿದ್ಯುನ್ಮಾನ ಆಟಿಕೆಗಳನ್ನು ಹೊಂದಿದ್ದರೂ ಸೋದರ ಸೋದರಿಯ ಬಾಂಧವ್ಯ ನೀಡುವ ಸಂತೋಷವನ್ನು , ತಾಯಿತಂದೆಯರ ಟೆನ್ಷನ್‍ರಹಿತ ಪ್ರೀತಿಯ ಸಾಮೀಪ್ಯದ ಆನಂದವನ್ನೂ ಸವಿಯಲಾಗದ , ಪ್ರೀತಿಯ ಕೊರತೆಯಿಂದ ಬಳಲುತ್ತಿರುವ ಮಕ್ಕಳನ್ನು ಕಂಡರೆ ಅಯ್ಯೋ ಎನಿಸುತ್ತದೆ. ಬದುಕಿನ ದೊಡ್ಡ ದೊಡ್ಡ ಗುರಿಗಳ ಬೆನ್ನೇರಿ ಸವಾರಿ ಮಾಡುವವರಿಗೆ , ಉತ್ಕೃಷ್ಟವಾದ ಸಣ್ಣ ಸಣ್ಣ ಸಂತೋಷ ಕೊಡುವ ಗಳಿಗೆಗಳು ಮತ್ತೆಂದೂ ತಿರುಗಿ ಬರದಂತೆ ತಮ್ಮ ಕಾಲ ಬುಡದಲ್ಲಿಯೇ ಜಾರಿಹೋಗುತ್ತಿದ್ದರೆ ಅದರ ಪರಿವೆಯೇ ಇರುವುದಿಲ್ಲ.ಹಿಂದಿನ ತಲೆಮಾರಿನವರಿಗೆ ತಮ್ಮ ಇಳಿವಯಸ್ಸಿನಲ್ಲಿ ನೆನಪಿಸಿಕೊಳ್ಳಲು ಅನೇಕ ಸಿಹಿ ಕಹಿ ಘಟನೆಗಳಿವೆ. ಆದರೆ ಇಂದಿನ ಮಕ್ಕಳಿಗೆ ಭವಿಷ್ಯದಲ್ಲಿ ಯಾವ ಸುಂದರ ನೆನಪುಗಳಿರಲು ಸಾಧ್ಯ ?

9 comments:

  1. ಬಹಳ ಚೆನ್ನಾಗಿದೆ. ಮನಸ್ಸು ತುಂಬಿ ಬಂತು. ಅಬ್ಬರದ ಜೀವನದಲ್ಲಿ ಕೆಲವೊಮ್ಮೆ ಬಾಂಧವ್ಯ ಕಳಚಿಹೋದರೆ, ಕೆಲವೊಮ್ಮೆ ಅವೂ ಅಬ್ಬರವಾಗಿಬಿಡುವ ಸಾಧ್ಯತೆಗಳಿರುತ್ತದೆಯಲ್ಲವೆ? ಅಂದರೆ,ಮಕ್ಕಳ ಮೇಲೆ ಅತಿಯಾದ ನಿರೀಕ್ಷೆ ಹೀಗೆ...

    ನಿಮ್ಮ ಪ್ರತಿಯೊಂದು ಲೇಖನವನ್ನು ಓದಿದಾಗಲೂ, ಬ್ಲಾಗಿನ ಹೆಸರು ಮರುಕಳಿಸುತ್ತದೆ. :)

    ReplyDelete
  2. ನಿಮ್ಮ ಬ್ಲಾಗುಗಳಲ್ಲಿ ಒಂದು ವಿಷಯ ಗಮನಿಸಿದ್ದೇನೆ. ನೀವು ಇಂಗ್ಲೀಷಿನ ಪದಗಳನ್ನು ಇಂಗ್ಲೀಷಿನ ಅಕ್ಷರಗಳಲ್ಲೇ ಬರೆಯುತ್ತೀರಿ. ಆದರೆ, ಈ ಲೇಖನದಲ್ಲಿ ’ಸೆಂಟಿಮೆಂಟ್’ ಎನ್ನುವ ಪದವನ್ನು ಕನ್ನಡದಲ್ಲಿ ಬರೆದಿದ್ದೀರಿ. ಇದಕ್ಕೆ ಏನಾದರೂ ಕಾರಣವಿದೆಯೆ?

    ReplyDelete
  3. Dhanyavaadagalu. Ittichege kannada tantraamshagalu tumba kaikoduttive. Nudiyalli hege blogge post maaduvudu tilisi.

    nija. Bhaandhavya kalachidaagalE adannu banna katti thilisabEkaaguttade.

    nanna Blog hesaru saarthakavaagiddakke hemme enisuttade.

    ReplyDelete
  4. idenu tilisi endu barediruviralla? naanu hema! nanna blogina hesaru bere (maneyalli kareyuva hesarannu ittukondiddene)asthe.

    nudiyalli hakalu naanu prayatnisuttiddene. innu aagilla, bere blogigalu yaarannadaru keli noduttene.

    ReplyDelete
  5. Nanage gottu neenu Hema endu. aadaru .... Blog nalli Eke Ekavachana endu bahuvachana barede. Innu mele ekavachana gatti!

    Neenu Miss Etvge apply Maadiralillava ? AAga ninage suggest maadabekendukondidde,aadare aagale illa.

    ReplyDelete
  6. thumba chennagide madam, oduvaga heleya kappu-bilupu cinema nodida anubhava ayithu.
    eegina makkalige e habbagala parichaya illadiruvudu besarada vishaya...aadru preethi idde iruthade, iga annandiru thamma hosa video game annu thangige kottu khushi paduthane :)

    ReplyDelete
  7. Neevu helirodu nija. i kaaladharmakkanugunavaagi hindina a mugdhate iga illa. Jothege endo nadeda ghatanegalu aneka varshagala antharadalli sundaravaagi kaanutthave. Adannu hidididalu prayatnisiddene.

    ReplyDelete
  8. adu nija

    ...madam nannannu dayavittu ekavachanadalli sambodisi

    ReplyDelete
  9. Santoshadinda ninnannu ekavachanadalli sambodisuve.

    ReplyDelete