Friday, November 14, 2008


ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು !

33 comments:

  1. ಯಾರ ಪುಟ್ಟಿಯಿವಳು? ತುಂಬಾ ಮುದ್ದಾಗಿದ್ದಾಳೆ. ಅರಿಯದ ಕಂದನ ಸುಖ ನಿದ್ರೆಯ ಮುದ್ರೆ ತುಂಬಾ ಚೆನ್ನಾಗಿದೆ :)

    ReplyDelete
  2. @ತೇಜಸ್ವಿನಿ
    ನಮಸ್ಕಾರ.ಇದು ಪುಟ್ಟಿಯಲ್ಲ,ಪುಟ್ಟ. ಮೊನ್ನೆ ತಾನೇ ಎರಡನೇ ಹುಟ್ಟುಹಬ್ಬ ಆಚರಿಸಿಕೊಂಡ ’ ಬತ್ತದತೊರೆ’ಯ ಪುಟ್ಟ ಝರಿ (ನನ್ನ ಮೊಮ್ಮಗ!)

    ReplyDelete
  3. ಚಂದ್ರಕಾಂತ ಅವರೆ,

    ಕ್ಷಮಿಸಿ ತಿಳಿಯಲಿಲ್ಲ. ನಿಮ್ಮ ಮೊಮ್ಮಗನಿಗೆ ನನ್ನ ಶುಭಾಶಯಗಳನ್ನು ತಿಳಿಸಿ. ಒಳಿತಾಗಲಿ.

    ಈ ವಯಸ್ಸಿನಲ್ಲೂ ನಿಮ್ಮೊಳಗಿರುವ ಜೀವನೋತ್ಸಾಹ, ಸಾಹಿತ್ಯಾಸಕ್ತಿ, ಬರವಣಿಗೆಗಳನ್ನು ನೋಡಿ ತುಂಬಾ ಪ್ರೇರಿತಳಾಗಿರುವೆ. ತುಂಬಾ ಸಂತೋಷವಾಯಿತು. ಹೀಗೇ ನಮಗೆಲ್ಲಾ ಸ್ಫೂರ್ತಿ ನೀಡುತ್ತಿರಿ.

    ReplyDelete
  4. @ ತೇಜಸ್ವಿನಿ
    ನೀವು ಯಾಕೆ ಕ್ಷಮೆ ಕೇಳಬೇಕು !!?
    ನೀವು ಪ್ರೀತಿಯಿಂದ ತಿಳಿಸಿದ ನಿಮ್ಮ ಶುಭ ಹಾರೈಕೆಗಳು ಈಗಾಗಲೇ ಅವನಿಗೆ ತಲುಪಿತು.

    ನಿಜಕ್ಕೂ ನನಗೆ ನಿಮ್ಮನೆಲ್ಲಾ ನೋಡುತಿದ್ದರೆ ತುಂಬಾ ಖುಶಿಯಾಗುತ್ತೆ. ಈ ಬ್ಲಾಗ್ ಪ್ರಪಂಚಕ್ಕೆ ಬರುವ ಮುಂಚೆ ತುಂಬಾ ಸಂಕೋಚವಿತ್ತು. ನಿಮ್ಮೆಲ್ಲರ- ಸಂವಹನ- ವಿಭಾಗದವರು- ಪರಿಚಯ ಆದಮೇಲೆ ಉತ್ಸಾಹ ಜಾಸ್ತಿ ಬಂದಿದೆ.

    ಹೀಗೇ ನಿಮ್ಮ ಪ್ರತಿಕ್ರಿಯೆಗಳು ಬರುತ್ತಿರಲಿ

    ReplyDelete
  5. ಈ ಪ್ರಪಂಚದ ಯಾವುದೆ ಜಂಜಡವಿಲ್ಲದೆ... ಮಲಗಿರುವ.. ಮುಗ್ಧ ಮಗುವಿನ ಅಂದದ ಫೋಟೊ ತುಂಬಾ ತುಂಬಾ ಚಂದವಾಗಿ ಬಂದಿದೆ...!! ಮಗು ಕೂಡ ಅಂದವಾಗಿದೆ..(ದ್ರಷ್ಟಿ ಯಾದೀತು..!!) ನಿಮ್ಮಾಲ್ಲಿ ಒಬ್ಬ ಫೊಟೊಗ್ರಾಫರ್ ಕೂಡ ಇದ್ದಾನೆಂತಾಯಿತು.. ಇನ್ನಷ್ಟು ಫೊಟೊ ಹಾಕಿರಿ..
    thanks...

    ReplyDelete
  6. ಫೋಟೋ ತುಂಬಾ ಚೆನ್ನಾಗಿದೆ. ಇವನ ತಾಯಿ ಬರೆದ ಚಿತ್ರವಿದೆ ಅಂತ ಒಂದು ಸಾರಿ ಹೇಳಿದ ನೆನಪು, ಅದನ್ನೂ ಹಾಕಬೇಕಿತ್ತು!

    ReplyDelete
  7. @ ಸಿಮೆಂಟ್ ಮರಳಿನ ನಡುವೆ..

    ನಿಜ ಮಗು ನೋಡಲು ದೃಷ್ಟಿ ತಾಕುವಂತಿದೆ. ಆದರೆ ನನ್ನ ಸೊಸೆಗೆ ಅದರ ಅರ್ಥವೇ ಗೊತ್ತಿಲ್ಲ ಬಿಡಿ. ಅಂದಹಾಗೆ ಈ ಸುಂದರ ಚಿತ್ರ ತೆಗೆದವಳು ನಾನಲ್ಲ. ನನ್ನ ಸೊಸೆ ವಾನ್ .

    @ ಮುತ್ತುಮಣಿ

    ನೀನು ಹೇಳಿದ್ದು ಸರಿ. ನನ್ನ ಸೊಸೆ ವಾನ್ ಬರೆದ ಚಿತ್ರ ಹಾಗು ಅದರ ರೂಪದರ್ಶಿ ಚಾಯಾಚಿತ್ರವನ್ನೂ ಸಧ್ಯದಲ್ಲಿಯೇ ಹಾಕುತ್ತೇನೆ.

    ReplyDelete
  8. ಚಂದ್ರಕಾಂತ ಅವರೆ,

    ನೀವು ವೃತ್ತಿಯಲ್ಲಿ ಪ್ರಾಧ್ಯಾಪಕಿಯೆಂದು ತಿಳಿದು ತುಂಬಾ ಸಂತೋಷವಾಯಿತು. ನೀವು ಯಾವ ವಿಷ್ಯವನ್ನು ಕಲಿಸುತ್ತೀದ್ದೀರೆಂದು ತಿಳಿಯಬಹುದೇ? ನನ್ನ ತಂದೆಯವರಾದ ಡಾ.ಜಿ.ಎನ್.ಭಟ್ ಅವರು ಕೂಡಾ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದಾರೆ (ಸಂಸ್ಕೃತ ವಿಭಾಗದ ಮುಖ್ಯಸ್ಥರು). ನಾನು ಓದಿರುವುದೂ ಬಿ.ಎಸ್ಸಿ. ಹಾಗೂ ಎಂ.ಎ.... ತುಂಬಾ ಸಂತೋಷವಾಯಿತು ನಿಮ್ಮ Occupation ತಿಳಿದು :)

    ReplyDelete
  9. ಪ್ರೀತಿಯ ತೇಜಸ್ವಿನಿ
    ನಾನು ಅಜ್ಜಿ ಅಂದ ಕೂಡಲೇ ತುಂಬಾ ಗೌರವ ಕೊಡುತ್ತಿದ್ದೀರೇನೋ ಅನಿಸುತ್ತಿದೆ:))

    ಇರಲಿ. ನಾನು ಕನ್ನಡ ಉಪನ್ಯಾಸಕಿ.ನೀವು ಸಂಸ್ಕೃತ ಪ್ರಾಧ್ಯಾಪಕರ ಮಗಳು ಎಂದು ಕೇಳಿ ಸಂತಸವಾಯಿತು. ಹಾಗೂ ನೀವೂ ಎಂ.ಎ.,ಎಂದಿರುವಿರಿ. ಯಾವ ವಿಷಯ ಸಂಸ್ಕೃತವೇ ?

    ಇನ್ನೊಂದು ವಿಷಯ ಹೇಳಲೆ ? ಮುತ್ತುಮಣಿ ಎಂಬ ಹೆಸರಿನಲ್ಲಿ ಬ್ಲಾಗಿಸುತ್ತಿರುವ ಹೇಮಾ ನನ್ನ ವಿದ್ಯಾರ್ಥಿನಿ. ನಿಜ ಹೇಳಬೇಕೆಂದರೆ ನನಗೆ ಬ್ಲಾಗ್ ಮಾಡಲು ಪ್ರೋತ್ಸಾಹಿಸಿದ್ದೇ ಹೇಮಾ!

    ನಿಮ್ಮ ಪರಿಚಯವಾದದ್ದು ನನಗೆ ತುಂಬಾ ಸಂತಸದ ವಿಚಾರ.ನೀವು ಇರುವುದೂ ಮಂಗಳೂರಿನಲ್ಲಾ?ನಿಮ್ಮ ಬ್ಲಾಗ್ ಗೆ ಕೊಟ್ಟಿರುವ ಕಣ್ಣುಗಳು ಬಹಳ ಅರ್ಥಪೂರ್ಣವಾಗಿವೆ.

    ReplyDelete
  10. ಚಂದ್ರಕಾಂತ ಅವರೆ,

    ಖಂಡಿತ ನಿಮ್ಮ ವಯಸ್ಸನ್ನು ಮಾತ್ರ ನೋಡಿ ನಿಮಗೆ ಗೌರವ ಕೊಡುತ್ತಿಲ್ಲ.. ನಿಮ್ಮ ಬರವಣಿಗೆಯ ಶೈಲಿ, ಗ್ರಾಹ್ಯಿಕೆ, ಇತರರಿಗೆ ನೀವು ಕೊಡುವ ಗೌರವ, ಆತ್ಮೀಯತೆ ಪ್ರೀತಿ- ಇವುಗಳನ್ನೆಲ್ಲಾ ನೋಡಿ ತುಂಬಾ ಗೌರವಿಸುತ್ತಿದ್ದೇನೆ :)

    ತುಂಬಾ ಸಂತೋಷ. ನಾನು ಎಂ.ಎ. ಮಾಡಿದ್ದೂ ಕನ್ನಡ ಸಾಹಿತ್ಯದಲ್ಲಿಯೇ :) ಮದುವೆಯ ನಂತರ ನಾನು ಬೆಂಗಳೂರಿನಲ್ಲಿದ್ದೇನೆ. ಪುಟ್ಟ ಮಗಳಿದ್ದಾಳೆ.. ಹಾಗಾಗಿ ಧಾರಾವಹಿಗಳನ್ನು ನೋಡಲು ಸಮಯಾವಕಾಶ ಸಾಲದು. ಆದರೆ ಉತ್ತಮ ಪ್ರೋಗ್ರಾಂ ಗಳನ್ನು ತಪ್ಪದೇ ವೀಕ್ಷಿಸುತ್ತೇನೆ.

    ನಿಮ್ಮ ಅಭ್ಯಂತರವಿಲ್ಲದಿದ್ದರೆ ನಿಮ್ಮ ಮೈಲ್ ವಿಳಾಸವನ್ನು ನನಗೆ ಮೈಲ್ ಮಾಡಿ. ಒಳ್ಳೆಯ ವಿಷಯಗಳಿದ್ದರೆ ಪರಸ್ಪರ ವಿನಿಮಯಿಸಿಕೊಳ್ಳಲು ಸುಲಭವಾಗುವುದು. ನನ್ನ ಮೈಲ್ ವಿಳಾಸ ಬ್ಲಾಗ್‌ಪ್ರೊಫೈಲ್‌ನಲ್ಲಿದೆ.

    ನನ್ನ ತಂದೆ ಸದಾ ಗುರು-ಶಿಷ್ಯರ ಸಂಬಂಧದ ಕುರಿತು ಹೇಳುತ್ತಿದ್ದರು ... ಉತ್ತಮ ಗುರು ಹಾಗೂ ವಿಧ್ಯಾರ್ಥಿ ಇಬ್ಬರೂ ಸಿಗುವುದು ಪೂರ್ವ ಪುಣ್ಯವೆಂದು. ಇಲ್ಲಿ ಓರ್ವ ಉತ್ತಮ ಗುರುವಿಗೆ ಉತ್ತಮ ವಿಧ್ಯಾರ್ಥಿನಿ ದೊರೆತು ಆ ಮೂಲಕ ಬತ್ತದ ತೊರೆಯ ಉಗಮಕ್ಕೆ ಕಾರಣವಾದದ್ದು ಮತ್ತೂ ಸಂತೋಷ.

    "ಅದು ಮಾನಸದೊಳಗಿನ ಕಣ್ಣು :)"

    ReplyDelete
  11. ಈಗಾಗಲೇ ನನ್ನ ಉತ್ತರ ನೋಡಿರುತ್ತಿರುವಿರಿ ಅಲ್ಲವೇ ?

    ReplyDelete
  12. @ ತೇಜಸ್ವಿನಿ

    ನನ್ನನ್ನು ಉತ್ತಮ ಗುರು ಎಂದು ಸ್ವೀಕರಿಸಿರುವುದಕ್ಕೆ ಧನ್ಯವಾದಗಳು.ಆದರೆ ಈಗಲೇ ನಾನು ಗುರುವಿನ ಕೆಲಸ ಮಾಡಲೇ ?
    ವಿದ್ಯಾರ್ಥಿ - ಸರಿಯಾದ ಪ್ರಯೋಗ( ವಿಧ್ಯಾರ್ಥಿ ಅಲ್ಲ) :))ಗುರುವಾಗ ಯಾಕೆ ಸ್ವೀಕರಿಸಿದೆನೋ ಎಂದುಕೊಳ್ಳಬೇಡಿ ಮತ್ತೆ.!

    ReplyDelete
  13. @ ತೇಜಸ್ವಿನಿ

    ನೋಡಿದಿರಾ ನಾನೇ ತಪ್ಪು ಮಾಡಿರುವೆ. ಗುರುವಾಗ ಅಲ್ಲ ಗುರುವಾಗಿ .ಇದಕ್ಕೇ ಬೂಮರ್‍ಯಾಂಗ್ ಅನ್ನುತ್ತಾರಲ್ಲ!!

    ReplyDelete
  14. ಖಂಡಿತ ನಾನು ಗುರುವಾಗಿ ನಿಮ್ಮನ್ನು ಸ್ವೀಕರಿಸಿ ತಪ್ಪುಮಾಡಿಲ್ಲ. ಸಂಸ್ಕೃತದಲ್ಲೊಂದು ಸುಭಾಷಿತವಿದೆ. "ಆನೋ ಭದ್ರಾ ಕೃತವೋ ಯಂತು ವಿಶ್ವತಃ" ಎಂದು. ಅಂದರೆ ಉತ್ತಮ ವಿಷಯಗಳು ಎಲ್ಲಿಂದಲೇ ಬರಲಿ ನಮ್ಮ ಬಳಿ ಹರಿದು ಬರಲಿ ಎಂಬರ್ಥ. ಹಾಗಾಗಿ ತಪ್ಪು ಆಗಿದ್ದರೆ ತಿದ್ದುವ ಹಕ್ಕು ಎಲ್ಲರಿಗೂ ಇದೆ. ತಿದ್ದಿಕೊಳ್ಳುವ ಮನಸ್ಸೂ ಎಲ್ಲರಿಗೂ ಇದ್ದರೆ ಮತ್ತೂ ಚೆನ್ನ. ಹಾಗಾಗಿ ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಗುರುಗಳು ಹಾಗೂ ವಿದ್ಯಾರ್ಥಿಗಳೇ :)

    ನನ್ನಿಂದಾದ ತಪ್ಪು ಬರಹದಲ್ಲಿ ಟೈಪ್ ಮಾಡುವಾಗ ಉಂಟಾಗಿದ್ದು. ತಪ್ಪು ತಪ್ಪೇ. ಸರಿಪಡಿಸಿದ್ದಕ್ಕೆ ಧನ್ಯವಾದಗಳು. ಹೀಗೇ ತಿದ್ದುತ್ತಿರಿ.

    ನಿಮ್ಮ ಉತ್ತರ ದೊರಕಿದೆ. ತುಂಬಾ ಸಂತೋಷವಾಯಿತು.

    ReplyDelete
  15. ಚಂದ್ರಕಾಂತರವರಿಗೆ,
    ನಾನು ಪುಟ್ಟಿ ಅನ್ನಲು ಹೊರಟಿದ್ದೆ:( ನಿಮ್ಮ ಮುದ್ದು ಮೊಮ್ಮಗನಿಗೆ ತಡವಾಗಿ ಹುಟ್ಟುಹಬ್ಬದ ಶುಭಾಶಯಗಳು.ಮಕ್ಕಳು ನಿದ್ದೆ ಮಾಡುವಾಗ ನೋಡ್ತಾನೆ ಇರ್ಬೇಕು ಅನಿಸುತ್ತೆ. ನಾನು ನಿಮ್ಮನ್ನು English ಉಪನ್ಯಾಸಕಿ ಅಂತಲೂ ತೇಜಸ್ವಿನಿಯವರನ್ನು ಕನ್ನಡ ಉಪನ್ಯಾಸಕಿ ಅಂತಲೂ ಭಾವಿಸಿದ್ದೆ:)(ದಯವಿಟ್ಟು ಕಾರಣ ಕೇಳಬೇಡಿ,ನನಗೂ ಗೊತ್ತಿಲ್ಲ:) ತಡವಾಗಿ ಬಂದಿದ್ದು ಒಳ್ಳೆಯದೇ ಆಯ್ತು.

    ReplyDelete
  16. @ಭಾರ್ಗವಿ

    ನಿಜ ಹೇಳ್ತೀನಿ ನಾನು ಇಂಗ್ಲೀಷ್ ನಲ್ಲಿ ತುಂಬಾ slowನಾನು ತೆಜಸ್ವಿನಿಯವರನ್ನು ಸಂಸ್ಕೃತ ಉಪನ್ಯಾಸಕಿ ಎಂದುಕೊಂಡಿದ್ದೆ.
    ನಿಮ್ಮ ಬ್ಲಾಗ್ ನಲ್ಲಿರುವ ಪದ್ಯ ಯಾರದ್ದು ಎಂದು ತಿಳಿಯಲು ಪ್ರಯತ್ನಿಸುತ್ತಿರುವೆ. ಆದರೂ ಆಗುತ್ತಿಲ್ಲ.

    ನಿಮ್ಮ ಶುಭಾಶಯಗಳು ನಮ್ಮ ಪುಟ್ಟನಿಗೆ ತಲುಪಿಸಿದೆ. ಅವನಿರುವುದು ಮೆಲ್ಬರ್ನ್ ನಲ್ಲಿ.

    ReplyDelete
  17. ದೃಷ್ಟಿ ತೆಗೆಯಿರಿ ನಿಮ್ಮ ಮೊಮ್ಮಗನಿಗೆ.. ನನ್ನದೇ ದೃಷ್ಟಿ ತಾಗೀತು!! ಬಹು ಮುದ್ದಾಗಿದೆ!!

    ReplyDelete
  18. @ಪರಿಸರಪ್ರೇಮಿ

    ಫೋಟೋ ಮೆಚ್ಚಿಕೊಂಡದ್ದಕ್ಕೆ ಧನ್ಯವಾದಗಳು. ಮಗುವಿನ ತಾಯಿ ತಂದೆಯರಿಗೆ ದೃಷ್ಟಿಯ ಬಗ್ಗೆ ನಂಬಿಕೆಯಿಲ್ಲದುದರಿಂದ ಅದರ ಯೋಚನೆಯಿಲ್ಲ ಬಿಡಿ !!

    ReplyDelete
  19. ಚಂದ್ರಕಾಂತರವರೆ,
    ನೀವು ನಿಜಹೇಳ್ತಿದೀನಿ ಅಂತ ಇಂಗ್ಲಿಷಲ್ಲಿ ಸ್ಲೋ ಅಂತ ಸುಳ್ಳು ಹೇಳ್ತಿದೀರಲ್ಲ:-). ಒಂದು ವಾರದಲ್ಲಿ ಹೇಳುವೆ ಯಾಕೆ ಅಂತ. ಮೊಮ್ಮಗ ಮೆಲ್ಬರ್ನ್ ಲ್ಲಿರೋದು ಅಂದ್ರಿ, ಆಸ್ಟ್ರೇಲಿಯಾ ತಾನೆ? ದಾರಿ ದೂರವಾದ್ರೂ ಹೃದಯಕ್ಕೆ ಹತ್ತಿರದಲ್ಲಿರ್ತೀರ ಬಿಡಿ. ನಿಮ್ಮ ಮನಸ್ಸಿನಲ್ಲಿಯೇ ದೃಷ್ಟಿ ತೆಗೆದು ಬಿಡಿ:).ಕವನದ ಬಗ್ಗೆ ಹುಡುಕಾಟ ನಡೆಸಿದ್ದೀರಿ,ನಾನು ಪ್ರಯತ್ನಿಸುತ್ತಲೇ ಇರುವೆ.ಇಲ್ಲೀವರೆಗೆ ನೋ ಲಕ್.ಧನ್ಯವಾದಗಳು.

    ReplyDelete
  20. ನಿಜ್ವಾಗ್ಲೂ, ಫೋಟೋ ಗೆ ನಾನೆ ದೃಷ್ಟಿ ತೆಗೆದುಬಿಟ್ಟೆ ! ಅಷ್ಟು ಕ್ಯೂಟ್ ಆಗಿದಾನೆ ನಿಮ್ಮ ಮೊಮ್ಮಗ!

    ReplyDelete
  21. @ ಭಾರ್ಗವಿ

    ನಾನೂ ದೃಷ್ಟಿ ತೆಗೆದೆ. ನೀವು ಹೇಳಿದಂತೆ ಅವರು ದೂರದಲ್ಲಿದ್ದರೂ ಹೃದಯಕ್ಕೆ ಹತ್ತಿರವಾಗಿದ್ದಾರೆ. Thanks to Internet ಪ್ರತಿದಿನ ಸ್ವಲ್ಪ ಹೊತ್ತು chat ಮಾಡುತ್ತಾ webcamನಲ್ಲಿ ಈ ಪುಟ್ಟಪೋರನನ್ನು ನೋಡುತ್ತಾ ದೂರ ಕಡಿಮೆ ಮಾಡಿಕೊಳ್ಳುತ್ತಿರುತ್ತೇನೆ

    ReplyDelete
  22. @ ಲಕ್ಷ್ಮಿ

    ನಮಗೂ ಸೇರಿಸಿ ದೃಷ್ಟಿ ತೆಗೆದೆ ಎಂದು ನಾ ಹೇಳಿದ್ದು. ನನ್ನ ಮೊಮ್ಮಗ ಕ್ಯೂಟ್ ಎಂದಿದ್ದಕ್ಕೆ ಧನ್ಯವಾದಗಲು. ಅವನು ನಿಜಕ್ಕೂ ಕ್ಯೂಟ್ !

    ReplyDelete
  23. hello madam...
    bahala dinagalinda yenu barediralilla, ivathu nimma chendada mommagana photo nodi ondu chendada idea holithu :)...padya barediddene , nodi madam.....

    ReplyDelete
  24. @ ಗೀತಾ

    ಅನೇಕ ದಿನಗಳ ನಂತರ ನನ್ನ ಮೊಮ್ಮಗ ನಿನ್ನನ್ನು ಬರೆಯಲು ಪ್ರೇರೇರಿಸಿದ್ದು ಸಂತಸದ ವಿಚಾರ. ಕವನ ಓದಿದೆ. ನಿನ್ನ ಕವನದ ಶೀರ್ಷಿಕೆ ಓದಿ ಆಶ್ಚರ್ಯವಾಯಿತು. ಏಕೆ ಗೊತ್ತೇ / ನಾನವನನ್ನು ಕರೆಯುವುದೇ ಪ್ರಿನ್ಸ್ ಎಂದು.ನಿನ್ನ ಕಲ್ಪನೆ ಅತ್ಯದ್ಭುತವಾಗಿದೆ. ಅಲ್ಲಿಯೂ ಕಮೆಂಟಿಸಿದ್ದೇನೆ.

    ReplyDelete
  25. thank you madam...

    kavanada poorthi credit kanasu kanutha malagiruva "prince"ge sallabeku .. :)

    ReplyDelete
  26. @ ಗೀತಾ
    ನಮ್ಮ ಪುಟ್ಟಪೋರ ನಿನಗೆ Thanks ಹೇಳುತ್ತಿದ್ದಾನೆ.ಧನ್ಯವಾದಗಳು

    ReplyDelete
  27. ಚಂದ್ರಕಾಂತರವರೆ ,
    ಒಂದು ವಾರ ಆಯ್ತು ಆದ್ರೂ ನನಗೆ Monk who sold his ferrari ಅರ್ಧ ಮಾತ್ರ ಓದಲು ಆಗಿದ್ದು.ನಾನು ತುಂಬಾ slow ಅಂದುಕೊಳ್ತಿದ್ದೆ ,ಈಗ ತುಂಬಾ ತುಂಬಾ ತುಂಬಾ slow ಅಂತ ಚೇಂಜ್ ಮಾಡಿಕೊಂಡೆ:-).ಆ ಪುಸ್ತಕ ಓದಲು ಸ್ಪೂರ್ತಿ ಕೊಟ್ಟ ನಿಮಗೆ ಅನಂತ ಧನ್ಯವಾದಗಳು(ಮನೇಲಿ ವರ್ಷಗಳಿಂದ ಈ ಪುಸ್ತಕ ಇದ್ದರೂ ನನ್ನವರು ಹಲವು ಸಲ ಹೇಳಿದರೂ ಓದಿರಲಿಲ್ಲ:-(.)

    ReplyDelete
  28. @ ಭಾರ್ಗವಿ ಅವರಿಗೆ

    ನಿಮ್ಮನ್ನು ನೀವು ಓದುವುದರಲ್ಲಿ ತುಂಬಾ ನಿಧಾನ ಎಂದು ದೂಷಿಸಿಕೊಳ್ಳಬೇಡಿ. ಯಾಕೆಂದರೆ ಆ ಪುಸ್ತಕ ಪ್ರಾರಂಭದಲ್ಲಿ ಸರಾಗವಾಗಿ ಓದಿಸಿಕೊಂಡು ಹೋದರೂ ಕಡೆಯಲ್ಲಿ ಮುಂದೆ ಸಾಗುವುದು ನಿಧಾನ ಹಾಗೂ ಅಲ್ಲಿಯ ವಿಷಯಗಳನ್ನು ಮನನ ಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ.

    ಅಂದ ಹಾಗೆ Mitch ALbom ನ For One More Day ಓದಿದ್ದೀರಾ ? ಇಲ್ಲದಿದ್ದರೆ ಓದಿ. ಮನಸ್ಸನ್ನು ಆಳಕ್ಕೆ ತಟ್ಟುವ ಪುಸ್ತಕ ಅದು. ಈಗ ತಾನೆ ನೀವು ನಿಮ್ಮ ಬ್ಲಾಗ್ ನಲ್ಲಿ ಹಾಕಿರುವ ಕುವೆಂಪು ಮನೆ ನೋಡಿದೆ. ಅಲ್ಲಿಯೇ ಬರೆಯುತ್ತೇನೆ.

    ReplyDelete
  29. @ ಭಾರ್ಗವಿ

    "ಒಂದು ವಾರ ಆದಮೇಲೆ ನನ್ನ ಇಂಗ್ಲೀಷ್ ಬಗ್ಗೆ ಹೇಳ್ತೀನಿ "ಅಂದಿದ್ದು ಯಾಕೆ ಅಂತ ಈಗ ನನ್ನ ಮೊದ್ದು ತಲೆಗೆ flash ಆಯಿತು. ನಾನು ಓದಿದ ಇಂಗ್ಲೀಷ್ ಪುಸ್ತಕಗಳ ಪಟ್ಟಿಯನ್ನು ನೋಡಿ ಅಲ್ಲವೇ :))

    ReplyDelete
  30. ಚಂದ್ರಕಾಂತ ಅವರೇ,

    ಹೆಚ್.ಎಸ್.ವೆಂಕಟೇಶ್ ಮೂರ್ತಿಯವರ ಹೊಸ ಕವನ ಸಂಕಲನದಲ್ಲಿ ಓಂದು ಸಾಲಿದೆ..

    ಸಕ್ಕರೆಪಾಕದಲ್ಲಿ ಮುಳುಗಿರುವ ಜಾಮೂನು;
    ನಿದ್ದೆ ಮಾಡುತ್ತಿರುವ ಮುದ್ದು ಮಗಳು..

    ಮೊಮ್ಮಗನನ್ನು ನೋಡುತ್ತಿದ್ದಂತೆ ಈ ಸಾಲು ನೆನಪಾಯ್ತು.

    "ಸವಿನಿದ್ದೆಯಲಿ ಅದ್ದಿರುವ
    ಮುದ್ದುಮಗುವಿನ ಮೊಗವನು
    ಕದ್ದು ನೋಡುತ ಸವಿಯುವುದನು
    ಪದದಲ್ಲಿ ಸೆರೆಹಿಡಿಯಲಾದೀತೇ?"

    ReplyDelete
  31. @ ರಂಜಿತ್ ಅವರಿಗೆ

    ಇದೇ ಮೊದಲ ಬಾರಿ ನನ್ನ ಬ್ಲಾಗ್ ಗೆ ಭೇಟಿ ಕೊಟ್ಟಿರುವಿರಿ ಅನಿಸುತ್ತದೆ. ನನ್ನ ಬ್ಲಾಗ್ ಗೆ ಹಾರ್ದಿಕ ಸ್ವಾಗತ

    ನೀವು quote ಮಾಡಿರುವ ಎಚ್.ಎಸ್.ವಿ.ಯವರ ಕವನದ ಸಾಲುಗಳು ನಿಜಕ್ಕೂ ನಮ್ಮ ಮುದ್ದು ಮೊಮ್ಮಗನ ಚಿತ್ರಕ್ಕೆ ತುಂಬಾ ಚೆನ್ನಾಗಿ ಹೊಂದುತ್ತದೆ.

    ಧನ್ಯವಾದಗಳು

    ReplyDelete
  32. ಮೇಡಮ್,

    ಮಗುವಿನ ನಿದ್ರೆಯ ಚಿತ್ರವೇ ಒಂದು ಕವನದಂತಿದೆ. ಅದರ ಮೇಲೊಂದು ಅದ್ಬುತ ಕವನ ಬರೆಯಬಹುದು. ಮೇಲಿನ ಶೀರ್ಷಿಕೆ ಕೂಡ ತಕ್ಕ ಜುಗಲ್‌ಬಂಧಿಯಾಗಿದೆ....

    ReplyDelete
  33. @ಶಿವು ಅವರಿಗೆ

    ಅಂತೂ ಹೇಳಿದಂತೆ ನನ್ನ ಒಂದೊಂದೇ ಪೋಸ್ಟ್ ಗಳನ್ನು ಓದಿ ಪ್ರತಿಕ್ರಿಯಿಸುತ್ತಿರುವಿರಿ. ಧನ್ಯವಾದಗಳು. ಸಾಧ್ಯವಾದರೆ ‘ ಪ್ರೇಮ ಹೃದಯದ ಭಾಷೆ" ಓದಿ. ನನಗೆ ಬಹಳ ಇಷ್ಟವಾದದ್ದು ಅದು.ನಿಮ್ಮ ಬ್ಲಾಗ್ ಗೆ ಶೀಘ್ರ ಭೇಟಿ ಕೊಡುವೆ.

    ReplyDelete