Sunday, November 23, 2008

ಕ್ಯಾಮರಾ ಕಣ್ಣಲ್ಲಿ......




ಕುಂಚದಲ್ಲಿ ಮೂಡಿಬಂದ ಕಂದ - ೧




ಕುಂಚದಲ್ಲಿ
ಮೂಡಿಬಂದ ಕಂದ - ೨

15 comments:

  1. ಚಂದ್ರಕಾಂತರವರೆ...
    ಫೋಟೊ, ಮತ್ತು ಕುಂಚದ ಕೆಲಸ ಏರಡೂ ತುಂಬಾ ಚೆನ್ನಾಗಿ ಬಂದಿದೆ. ಪುಟ್ಟ ಪಾಪುವಿನ ಭಾವನೆ ಹಾಗೂ ಕಣ್ಣಿನ ಹೊಳಪು, ಇವೆರಡನ್ನು ಕುಂಚದಲ್ಲಿ ಸೆರೆ ಹಿಡಿಯುವದು ಸುಲಭದ ಮಾತಲ್ಲ.. ಅದ್ಭುತ ವಾಗಿದೆ.
    ಏನಾದರೂ ಸ್ವಲ್ಪ ಬರೆದಿದ್ದರೆ ಇನ್ನೂ ಮಜ ಬರುತಿತ್ತು.
    ಮೊಮ್ಮಗ ತಾನೆ? ಕಲಾವಿದರಿಗೂ, ಛಾಯಾಗ್ರಾಹಕರಿಗೂ ಅಭಿನಂದನೆಗಳು...(ಯಾರೆಂದು ತಿಳಿಸಿ)

    ReplyDelete
  2. ಅಬ್ಬಾ! ಅದ್ಭುತ ಕಲೆ! ಅದೇಷ್ಟು ಚೆನ್ನಾಗಿ ಚಿತ್ರಿಸಿದ್ದಾರೆ..ನಿಮ್ಮ ಸೊಸೆ ಬಿಡಿಸಿದ್ದೇ? ಫೋಟೋಗಿಂತಲೂ ಬಿಡಿಸಿದ ಚಿತ್ರವೇ ಮತ್ತೂ ನೈಜವಾಗಿ ಕಾಣಿಸುತ್ತದೆ. ಮುದ್ದಾದ ಮಗುವಿಗೆ ಮುದ್ದಾದ ಚಿತ್ರ :)

    ReplyDelete
  3. ಚಂದ್ರಕಾಂತ,
    ಮಗುವಿನ ಮುಗ್ಧ ಹಾಗೂ ಬೆರಗಿನ ಭಾವನೆಯನ್ನು ಫೋಟೋದಲ್ಲಿ ಹಾಗೂ ಕುಂಚದಲ್ಲಿ ಅನನ್ಯವಾಗಿ ಮೂಡಿಸಿದ್ದೀರಲ್ಲ!

    ReplyDelete
  4. The old astronomer gazed through his powerful telescope straining his feeble eyes. He checked & rechecked the galaxy he was studying. He clutched the star cluster map he had drawn over the years with trembling hands & counted the stars again. His calculations were clear, his light years were right……...but……...where did the two stars go???!!!............

    He felt someone tugging his pants. He turned back & looked down with eyebrows raised in question.

    “My Mother plucked them………….. to paint my eyes” said the toddler & gave a toothless grin!!!!!!!

    ReplyDelete
  5. ಒಂದಕ್ಕಿಂತ ಒಂದು ಸುಂದರವಾಗಿದೆ!

    ಫೋಟೋ ಬ್ಲಾಗಿಗೆ ಹಾಕುವಾಗ ತೊಂದರೆಯೇನೂ ಆಗಲಿಲ್ಲವೇ?
    (ಸಾರಿ ಇಂತಹ ಬೋರಿಂಗ್ ವಿಷ್ಯ ಕೇಳಿದ್ದಕ್ಕೆ, ಹೇಗೆ ಮಾಡೋದು ಅಂತ ಅಷ್ಟೆ)

    ReplyDelete
  6. @ ಸಿಮೆಂಟು ಮರಳಿನ ಮಧ್ಯೆ...

    ಫೋಟೋ ಮತ್ತು ಚಿತ್ರ ಎರಡೂ ಮೆಚ್ಚುಗೆಯಾಗಿದ್ದಕ್ಕೆ ಧನ್ಯವಾದಗಳು. ಸ್ವತಃ ಛಾಯಾಗ್ರಾಹಕರಾಗಿರುವುದರಿಂದ ನಿಮ್ಮ ಮಾತಿಗೆ ಹೆಚ್ಚಿನ ತೂಕವಿದೆ.

    ಹೌದು, ಅವನು ನನ್ನ ಮೊಮ್ಮಗ.

    ಛಾಯಾಗ್ರಹಣೆ ಮತ್ತು ಕುಂಚದ ಚಿತ್ರ ( ಅದು ತೈಲವರ್ಣ ಚಿತ್ರ) ಇವೆರಡೂ ನನ್ನ ಸೊಸೆಯದೆ!

    @ ತೇಜಸ್ವಿನಿ

    ನೀವು ಹೇಳಿದಂತೆ ಅದು ಅದ್ಭುತ ಕಲೆಯೇ ಹೌದು. ನನಗೂ ಫೋಯೋಗಿಂತ ಚಿತ್ರವೇ ಹೆಚ್ಚು ಜೀವಕಳೆಯಿಂದ ಕೂಡಿದೆ ಅನ್ನಿಸಿತು. ಅದರಲ್ಲಿಯೋ ಅಪೂರ್ಣವಾದ ಚಿತ್ರ ನನಗೆ ಹೆಚ್ಚು ಇಷ್ಟವಾಯಿತು.

    @ sunaath

    ನಮಸ್ಕಾರ. ನಾನು ಮೇಲೆ ತಿಳಿಸಿದಂತೆ ಇವೆರಡೂ ನನ್ನ ಸೊಸೆಯ ಕೃತಿಗಳು. ಚಿತ್ರದಲ್ಲಿರುವವನು ನನ್ನ ಮೊಮ್ಮಗ

    @ ಗೀತಾ

    ನಿನ್ನ ಸುಂದರ ಕಲ್ಪನೆಯ ಮುಂದೆ ಮರುಮಾತಿಲ್ಲ. ನಿಜಕ್ಕೂ ಅವನ ಕಣ್ಣುಗಳು ನಕ್ಷತ್ರಗಳ ಹಾಗಿದೆ. ನಿನ್ನ ಈ ಕವನಕ್ಕೆ ನನ್ನ ಮೊಮ್ಮಗ ಮತ್ತೊಮ್ಮೆ ಸ್ಫೂರ್ತಿಯಾಗಿದ್ದಾನೆ!

    @ ಮುತ್ತುಮಣಿ

    ಚಿತ್ರ ಇಷ್ತವಾಗಿದ್ದಕ್ಕೆ ಧನ್ಯವಾದಗಲು.
    ನಿನ್ನ ಪ್ರಶ್ನೆ ನನಗೆ ಯಾವತ್ತೂ ಬೋರ್‍ ಆಗುವುದಿಲ್ಲ. ಎಷ್ಟೋ ಬಾರಿ ನಿನ್ನ ಪ್ರಶ್ನೆಯೇ ನನ್ನ ಪ್ರಶ್ನೆಯೂ ಆಗಿರುತ್ತೆ. ಇನ್ನು ಉತ್ತರದ ವಿಷಯಕ್ಕೆ ಬಂದರೆ ’ ನನಗೆ ಗೊತ್ತಿಲ್ಲ ’ ಇದನ್ನು ನನ್ನ ಮಗ ನಿತಾಂತ್ ಬ್ಲಾಗ್ ಗೆ ಹಾಕಿದ್ದು. ನಿಧಾನವಾಗಿ ನಾನೂ ಕಲಿಯುತ್ತೇನೆ.

    ReplyDelete
  7. ಚಂದ್ರಕಾಂತರವರೆ,
    ನಿಮ್ಮ ಮೊಮ್ಮಗನ ಫೋಟೋ ಮತ್ತು ಕುಂಚದ ಕಲೆ ನಿಜಕ್ಕೂ ಅದ್ಭುತವೇ, ಮಗುವಿನ ಮುಖದ ಹಾವ ಭಾವ ಕುಂಚದಲ್ಲಿ ತುಂಬಾ ಚೆನ್ನಾಗಿ ಅರಳಿ ಬಂದಿದೆ.

    ReplyDelete
  8. speechless ಆಗೋದೆ ನಾನು ಫೋಟೋ ಮತ್ತು ಪೈಯಿಂಟಿಂಗ್ ನೋಡಿ ! ಸಖತ್ ಕಲಾವಿದರು ನಿಮ್ಮ ಸೊಸೆ. ಅವರಿಗೆ ನನ್ನ ಅಭಿನಂದನೆಗಳನ್ನ ತಿಳಿಸಿಬಿಡಿ.

    ReplyDelete
  9. @ಭಾರ್ಗವಿ

    ನೀವು ಹೇಳಿದಂತೆ ಕುಂಚದಲ್ಲರಳಿರುವ ಚಿತ್ರಗಳಲ್ಲಿ ಜೀವಕಳೆ ಹೊರಹೊಮ್ಮಿದೆ. ಚಿತ್ರ ಮೆಚ್ಚಿಗೆಯಾಗಿದ್ದಕ್ಕೆ ಧನ್ಯವಾದಗಳು.

    @ ಲಕ್ಷ್ಮಿ

    ಹೌದು ಲಕ್ಷ್ಮಿ ನಾನೂ ಸಹ ಈ ಚಿತ್ರ ಮೊದಲ ಬಾರಿ ನೋಡಿದಾಗ ಮಾತಿಲ್ಲದವಳಾದೆ.ಇದುವರೆಗೂ ನನ್ನ ಸೊಸೆ ವಿವಿಧ ವನ್ಯ ಜೀವಿಗಳನ್ನು ಕುಂಚದಲ್ಲರಳಿಸುತ್ತಿದ್ದಳು. ಇದೇ ಮೊದಲ ಬಾರಿ ಮಗುವಿನ Portrait ಮಾಡಿರುವುದು. ನಿನ್ನ ಧನ್ಯವಾದಗಳು ಈಗಾಗಲೇ ಅವರಿಗೆ ( ಮಗ,ಸೊಸೆ,ಮೊಮ್ಮಗ ) ತಲುಪಿತು.

    ReplyDelete
  10. ನಮಸ್ತೆ,
    ಫೋಟೋ ಮತ್ತು ಚಿತ್ರಗಳನ್ನು ಹೊಗಳುವುದೋ ಮಗುವನ್ನು ಹೊಗಳುವುದೋ ತಿಳಿಯದಾಗಿದೆ. ದಯವಿಟ್ಟು ನಿಮ್ಮ ಸೊಸೆಗೆ ನನ್ನ ಬ್ಲಾಗ್ ತೋರಿಸಿ ಅದರಲ್ಲಿನ ಫೋಟೋಗಳಿಗೆ ಇನ್ನಷ್ಟು ಜೀವತುಂಬಲು(ಕುಂಚದಿಂದ) ಹೇಳಿ.

    ReplyDelete
  11. ಚಂದ್ರಕಾಂತ ಅವರೆ...
    ಚೆಲುಮೊಗದ ಮಗುವಿನ ಚಂದದ ಭಾವಕ್ಕೆ, ಆ ಚಿತ್ರಕ್ಕೆ, ಭಾವಗಳನ್ನು ಹಿಡಿದಿಟ್ಟುಕೊಂಡೇ ಅರಳಿದ ಚಂದದ ಜಲವರ್ಣಚಿತ್ರಕ್ಕೆ, ಇವನ್ನ ನಮ್ಮ ಮುಂದಿಟ್ಟ ನಿಮಗೆ ಹಾಗೂ ನಿಮ್ಮ ಸೊಸೆಯವರಿಗೆ
    ಧನ್ಯವಾದ.

    ReplyDelete
  12. @ಮಲ್ಲಿಕಾರ್ಜುನ ಮತ್ತು ಶಾಂತಲಾ ಅವರಿಗೆಧನ್ಯವಾದಗಳು.

    ReplyDelete
  13. ಚಂದ್ರಕಾಂತರವರೆ ,
    ಈ ತೈಲವರ್ಣ ಚಿತ್ರ ತುಂಬಾ ನೈಜವಾಗಿ ಬಂದಿದೆ. ಮತ್ತೆ ಮತ್ತೆ ನೋಡ್ಬೇಕು ಅನಿಸುತ್ತೆ.ಪಾಪುವಿಗೂ ,ಪಾಪುವಿನಮ್ಮಗೂ ,ಪಾಪುವಿನಜ್ಜಿಗೂ,ಸಹಾಯ ಮಾಡಿದ ಪಾಪುವಿನ ತಂದೆಗೂ ಧನ್ಯವಾದಗಳು.

    ReplyDelete
  14. @ ಭಾರ್ಗವಿ

    ಹೌದು ಆ ತೈಲ ಚಿತ್ರ ಬಹಳ ಮುದ್ದಾಗಿದೆ. ನೀವು ಧನ್ಯವಾದ ತಲುಪಿಸಬೇಕೆಂದು ಹೇಳಿರುವ ಪಟ್ಟಿ ಚೆನ್ನಾಗಿದೆ! ನನ್ನ ಮಗನನ್ನೂ ಅದರಲ್ಲಿ ಖಂಡಿತ ಸೇರಿಸಬೇಕು. ಏಕೆಂದರೆ ಅವನಿಗೆ ಚಿತ್ರಕಲೆ ಎಂದರೆ ತುಂಬಾ ಇಷ್ಟ.

    ReplyDelete
  15. ಮೇಡಮ್,
    ಫೋಟೊ ಮತ್ತು ಕುಂಚದ ಕೆಲಸ ತುಂಬಾ ಚೆನ್ನಾಗಿದೆ.! ನನಗೆ ನಿಮ್ಮ ಬ್ಲಾಗಿಗೆ ಬರಲು ಸಮಯಾವಕಾಸವಾಗಲಿಲ್ಲ. ಮುಂದೆ ನಿಮ್ಮೆಲ್ಲಾ ಲೇಖನಗಳನ್ನು ಓದುತ್ತೇನೆ.
    ಶಿವು.

    ReplyDelete