ಹೊಸ ಬಟ್ಟೆ ಧರಿಸಿ , ನಗೆಚೆಲ್ಲುತ್ತಾ ಸಂಭ್ರಮದಿಂದ ಮನೆಯೆಲ್ಲಾ ಓಡಾಡುತ್ತಿರುವ ಹತ್ತು ವರ್ಷದ ಆ ಬಾಲೆಯ ಚಿತ್ರ ಸುಮಾರು ಮೂವತ್ತು ವರ್ಷಗಳಿಂದ ಪ್ರತಿ ದೀಪಾವಳಿಯಂದು ಅವಳ ಕಣ್ಮುಂದೆ ತಪ್ಪದೆ ಮೂಡುತ್ತದೆ..ಆ ಬಾಲೆಯ ಹೆಸರು ಶಶಿ.ಆ ದಿನ ಅವಳು ಹುಟ್ಟಿದ ದಿನವೂ ಹೌದು...
ಹತ್ತು ವರ್ಷದ ಶಶಿಯ ಸಂಭ್ರಮಕ್ಕೆ ಮತ್ತೊಂದು ಕಾರಣವೂ ಇದೆ.ಪಟ್ಟಣದಲ್ಲಿ ಓದುತ್ತಿದ್ದ ಹಿರಿಯಣ್ಣ ಉತ್ತರ ಭಾರತ ಪ್ರವಾಸ ಮುಗಿಸಿಕೊಂಡು, ಊರಿಗೆ ಬಂದಿದ್ದಾನೆ. ಹಬ್ಬ ಮುಗಿಸಿಕೊಂಡು ಪಟ್ಟಣಕ್ಕೆ ಹಿಂತಿರುಗುವ ಕಾರ್ಯಕ್ರಮ ಅವನದು.ಮನೆಯವರಿಗೆಲ್ಲ ಸಿಹಿ ತಿನಿಸು, ಪುಟ್ಟ ತಂಗಿ ಶಶಿಗಾಗಿ ಬಣ್ಣದ ಮಣಿಸರ, ಹಾಗೂ ಬಳೆಗಳನ್ನು ತಂದಿದ್ದಾನೆ. ಅಪ್ಪ ತಂದಿರುವ ಮತಾಪು ,ಸುರ್ ಸುರ್ ಬತ್ತಿ, ಹೂವಿನ ಕುಂಡಗಳು,ಭೂಚಕ್ರ, ವಿಷ್ಣು ಚಕ್ರಗಳ ದೊಡ್ಡ ಬುಟ್ಟಿಯೇ ಮನೆಯಲ್ಲಿದೆ.ಉಹೂ, ಅವಳ ವಿಶೇಷ ಸಂಭ್ರಮಕ್ಕೆ ಇದು ಕಾರಣವಲ್ಲೇ ಅಲ್ಲ. ಇವೆಲ್ಲ ಪ್ರತಿ ದೀಪಾವಳಿಯಂದು ಇದ್ದದ್ಡೇ. ಆದರೆ ಅವಳ ಸಂಭ್ರಮಕ್ಕೆ ಅವಳೊಬ್ಬಳಿಗೇ ತಿಳಿದ ರಹಸ್ಯವೊಂದಿದೆ.
ಹಿಂದಿನ ದಿನ ಅಕಸ್ಮಾತ್ತಾಗಿ ಅಣ್ಣನ ಕೋಣೆಯ ಮುಂದೆ ಹೋಗುತ್ತಿದ್ದಾಗ ಕೋಣೆಯ ತುಂಬಾ ಚೆಲ್ಲಾಪಿಲ್ಲಿಯಾಗಿ ಹರಡಿದ್ದ ಅವನ ಸಾಮಾನುಗಳ ನಡುವೆ ಒಂದು ಸುಂದರವಾದ, ನುಣುಪಾದ, ವೆಲ್ವೆಟ್ಟಿನಷ್ಟೇ ಮೃದುವಾದ ಫಳ ಫಳ ಹೊಳೆಯುತ್ತಿರುವ ತಿಳಿಗುಲಾಬಿ ಬಣ್ಣದ ಫ್ರಾಕ್ ಶಶಿಯ ಕಣ್ಣಿಗೆ ಬಿತ್ತು. ಕುತೂಹಲ ತಡೆಯಲಾರದೆ ಹತ್ತಿರಹೋಗಿ ಕಣ್ಣರಳಿಸಿನೋಡುತ್ತಾಳೆ , ಅದು ತನಗಾಗಿ ಅಣ್ಣ ತಂದ ಹುಟ್ಟುಹಬ್ಬದ ಉಡುಗೊರೆ.! ಅದು ಸಾಮಾನ್ಯ ಫ್ರಾಕ್ ಆಗಿರಲಿಲ್ಲ, ತನ್ನ ತರಗತಿಯ ಅತ್ಯಂತ ಶ್ರೀಮಂತ ಹುಡುಗಿ ಮಾಲಿನಿ ಧರಿಸುವ ಡ್ರೆಸ್ ಗಳಿಗಿಂತ ಆಕರ್ಷಕವಾಗಿ ಕಾಣುತ್ತಿತ್ತು. ಶಶಿಯ ಮನಸ್ಸು ಸಂತಸದಲೆಯ ಮೇಲೆ ತೇಲಿತು. ಎಷ್ಟು ಒಳ್ಳೆಯ ಅಣ್ಣ! ಹುಟ್ಟುಹಬ್ಬಕ್ಕಾಗಿ ಇಷ್ಟು ಒಳ್ಳೆಯ ಉಡುಗೊರೆ ಇದುವರೆಗೆ ಸಿಕ್ಕಿರಲಿಲ್ಲ. ಓಡಿಹೋಗಿ ಅಮ್ಮನಿಗೆ ತಿಳಿಸಬೇಕು. ಆದರೆ ಕಾಲುಗಳು ಮುಂದೆ ಚಲಿಸಲಿಲ್ಲ. ಅಣ್ಣನಿಲ್ಲದಾಗ ಅವನ ಸಾಮಾನುಗಳನ್ನು ಸರಿಸಿನೋಡಿದೆನೆಂದರೆ ಅಮ್ಮ ಖಂಡಿತ ಬೈಯುತ್ತಾಳೆ. ಅಣ್ಣ ತನಗೆ ಕೊಡುವಾಗಲೆ ಎಲ್ಲರಿಗೂ ತಿಳಿಯಲೆಂದು ಸುಮ್ಮನಾದಳು.ಅಣ್ಣ ಏಕೆ ಇನ್ನೂ ಯಾರಿಗೂ ತೋರಿಸಿಲ್ಲ? ನಾಳೆ ಬೆಳಿಗ್ಗೆಯೇ ತೋರಿಸಬೇಕೆಂದಿರುವನೇನೋ?
ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನಾರಾಯಣರಾಯರ ಐದು ಜನ ಮಕ್ಕಳಲ್ಲಿ ಶಶಿಯೇ ಕೊನೆಯವಳು. ನಾಲ್ಕು ಜನ ಅಣ್ಣಂದಿರ ಮುದ್ದಿನ ತಂಗಿ. ಮನೆಯವರೆಲ್ಲರ ಕಣ್ಮಣಿ. ನಾರಾಯಣರಾಯರ ತಂದೆ, ತಾಯಿ ,ತಮ್ಮ,ತಂಗಿಯರೆಲ್ಲರೂ ಇದ್ದ ಈ ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿ ರಾಯರು. ಆದ್ದರಿಂದಲೇ ಸಹಜವಾಗಿಯೇ, ರಾಯರು ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರುತ್ತಿದ್ದರು. ಉಣ್ಣುವುದಕ್ಕೆ, ಉಡುವುದಕ್ಕೆ ಕೊರತೆ ಇಲ್ಲದಿದ್ದರೂ ಅನವಶ್ಯಕ ವೆಚ್ಚಗಳೆಲ್ಲಾ ಅವರ ಪಾಲಿಗೆ ದುಂದುವೆಚ್ಚಗಳೇ. ಇದರ ಬಿಸಿ ಮನೆಯಲ್ಲಿ ಎಲ್ಲರಿಗೂ ತಟ್ಟಿತ್ತು. ಆದರೆ ಯಾರೂ ಅದನ್ನು ಮಾತಿನಲ್ಲಿ ವ್ಯಕ್ತ ಪಡಿಸುವ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ. ಅಂತಹ ಅತೃಪ್ತ ಅನುಭವ ಪುಟ್ಟ ಶಶಿಗೂ ಇತ್ತು.
ಶಶಿಗೆ ಚಿಕ್ಕಂದಿನಿಂದಲೂ ಬಣ್ಣ ಬಣ್ಣದ ಉಡುಪುಗಳೆಂದರೆ ಪ್ರಾಣ. ಅದರಲ್ಲಿಯೂ ಮಾಲಿನಿ ಧರಿಸುವ ರೆಡಿಮೇಡ್ ಫ್ರಾಕುಗಳನ್ನು ನೋಡಿದಾಗಲೆಲ್ಲ ತನಗೂ ಅಂತಹ ಒಂದು ಫ್ರಾಕ್ ಬೇಕೆಂಬ ಆಸೆಯಾಗುತ್ತಿತ್ತು.ಅವರಮನೆಯಲ್ಲಿ ವರ್ಷಕ್ಕೆ ಮೂರು( ೩) ಬಾರಿ ಎಲ್ಲರಿಗೂ ಹೊಸಬಟ್ಟೆ ಸಿಗುತ್ತಿತ್ತು.ರಾಯರೇ ಅಂಗಡಿಯಿಂದ ಎಲ್ಲರಿಗೂ ಚೀಟಿ ಬಟ್ಟೆ ತರುತ್ತಿದ್ದರು. ಮನೆಗೇ ಒಬ್ಬ ದರ್ಜಿ ಬರುತ್ತಿದ್ದ. ಎಲ್ಲರ ಅಳತೆ ತೆಗೆದುಕೊಳ್ಳುತ್ತಿದ್ದ. ಎಲ್ಲರಿಗೂ ಅವರ ಅಳತೆಗಿಂತ ಒಂದೆರಡಿಂಚು ಸುತ್ತಳತೆ ಜಾಸ್ತಿ ಇರುವಂತೆ ಹೊಲಿಸುತ್ತಿದ್ದರು. ಅದಕ್ಕೆ ಅವರು ಕೊಡುತ್ತಿದ್ದ ಕಾರಣ ಬೆಳೆಯುವ ಮಕ್ಕಳಿಗೆ ಬಿಗಿಬಟ್ಟೆ ಹಾಕುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ! ತನಗಂತೂ ಯಾವಾಗಲೂ ಲಂಗ ರವಿಕೆಯನ್ನೇ ಹೊಲಿಸುತ್ತಿದ್ದರು. ಎರಡು ವರ್ಷದ ಹಿಂದೆ ಹೊಲಿಸಿದ ಫ್ರಾಕೇ ಕಡೆಯದು. ಬಟ್ಟೆ ಹೊಲಿಸುತ್ತಿದ್ದ ಪುರಾಣ ಅಲ್ಲಿಗೇ ಮುಗಿಯುತ್ತಿರಲಿಲ್ಲ.ದರ್ಜಿ ಬಟ್ಟೆಗಳನ್ನು ಹೊಲಿದು ಮನೆಗೆ ತಂದಾಗ ಖುದ್ದು ರಾಯರು ಒಂದೊಂದು ಬಟ್ಟೆಯ ಎಲ್ಲ ಹೊಲಿಗೆಗಳನ್ನೂ ಪರಿಶೀಲಿಸುತ್ತಿದ್ದರು . ಅವರ ಮನಸ್ಸಿಗೆ ಸರಿಯಿಲ್ಲ ಅನಿಸಿದರೆ ಮತ್ತೆ ಹಿಂತಿರುಗಿಸುತ್ತಿದ್ದರು. ಹೀಗಾಗಿ ಒಂದೆರಡು ಬಾರಿ ರಿಪೇರಿ ಬಟ್ಟೆಗಳನ್ನು ( ಬಹುಮಟ್ಟಿಗೆ ಹೊಲಿದ ಬಟ್ಟೆಗಳೆಲ್ಲ ಅದರಲ್ಲಿದ್ದವು !) ಮನೆಗೊಯ್ದ ದರ್ಜಿ ನಂತರ ಎಲ್ಲವನ್ನೂ ಅಚ್ಚುಕಟ್ಟಾಗಿ ಹೊಲಿದು ತರುತ್ತಿದ್ದ
ಈ ಹಿನ್ನೆಲೆಯಲ್ಲಿ ಶಶಿಗೆ ಅಣ್ಣ ತಂದ ಫ್ರಾಕ್ ದಿವ್ಯ ವಸ್ತ್ರದಂತೆ ಕಂಡಿದ್ದರೆ ಆಶ್ಚರ್ಯವೇನು? ಆ ಇಡೀ ರಾತ್ರಿ ಶಶಿಗೆ ಸಂತೋಷದಿಂದ ನಿದ್ದೆ ಬರಲಿಲ್ಲ. ನಿದ್ದೆ ಬಂದಿದ್ದರೂ ಅದರ ತುಂಬಾ ಸುಂದರ ಕನಸುಗಳೇ ತುಂಬಿದ್ದವು. ಮರುದಿನ ಎಲ್ಲರೆದುರಿಗೆ ಅಣ್ಣ ಫ್ರಾಕ್ ಕೊಡುವುದನ್ನೇ ಅವಳ ಮನಸ್ಸು ನೆನಪಿಸಿಕೊಂಡು ಪುಲಕಗೊಳ್ಲುತ್ತಿದೆ.ಅಂತೂ ಆ ಬೆಳಗು ಮೂಡಿತು. ತಲೆಗೆ ಎಣ್ಣೆಸ್ನಾನವೂ ಆಯಿತು. ರಾಯರು ಪೂಜೆ ಮುಗಿಸಿ ಮಂಗಳಾರತಿ ಕೊಡುವ ಶುಭ ಗಳಿಗೆಯೂ ಬಂದಿತು. ಅವರ ಮನೆಯ ಮತ್ತೊಂದು ಪದ್ಧತಿ ಎಂದರೆ ರಾಯರು ಪೂಜೆ ಮುಗಿಸಿ ಮಂಗಳಾರತಿ ಕೊಡುವಾಗ ಎಲ್ಲರೂ ಹಾಜರಿರಲೇಬೇಕು. ಆ ದಿನದ ಆಕರ್ಷಣೆ ಶಶಿ! ಮೊದಲೇ ಮುದ್ದಾಗಿದ್ದ ಹುಡುಗಿ ರಹಸ್ಯ ಸಂತೋಷದಿಂದ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದಳು. ಅಣ್ಣ ಕೊಟ್ಟ ಬಳೆ, ಸರಗಳು ಅವಳನ್ನು ಅಲಂಕರಿಸಿದ್ದವು. ರಾಯರು ಅವಳನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಎಂದಿನಂತೆ ದೇವರಿಗೆ ನೈವೇದ್ಯಕ್ಕೆ ಇಟ್ಟಿದ್ದ ದ್ರಾಕ್ಷಿ ಕೊಟ್ಟು ಅವಳ ತಲೆ ನೇವರಿಸಿ ಬಟ್ತೆ ತುದಿಗೆ ಅರಿಶಿನ ಹಚ್ಚಿದ್ದ ಹೊಸ ಬಟ್ಟೆ ಕೊಟ್ಟು ಹಾಕಿಕೊಳ್ಳುವಂತೆ ಹೇಳಿದರು. ಅವಳು ಹೂ ಎಂದು ತಲೆ ಆಡಿಸಿದರೂ ಅವಳ ಕಣ್ಣು ಅಣ್ಣನ ಮೇಲೇ ಇತ್ತು. ಅವನು ಅವಳನ್ನು ನೋಡಿ ನಕ್ಕ. ಅವಳು ನಿರೀಕ್ಷಿಸಿದಂತೆ ಅವನ ಕೈಯಲ್ಲಿ ಫ್ರಾಕ್ ಇರಲಿಲ್ಲ. ಓಹೊ ಅಪ್ಪನ ಎದುರಿಗೆ ಕೊಡಲು ಹಿಂಜರಿಯುತ್ತಿದ್ದಾನೆ! ಕಡೆಗೆ ಆವನ ಬಳಿ ಹೋಗಿ ತರುವುದೆಂದು ತೀರ್ಮಾನಿಸಿದಳು.
ನಂತರ ಎಲ್ಲರೂ ಒಟ್ಟಾಗಿ ಕುಳಿತು ಹಬ್ಬದೂಟ ಮಾಡಿದರು.ಅಷ್ಟರಲ್ಲಿ ಶಶಿಯ ಗೆಳತಿ ಜಯಾ ಬಂದು ಅವಳನ್ನು ತನ್ನ ಮನೆಗೆ ಕರೆದು ಕೊಡುಹೋದಳು. ಮತ್ತೆ ಮನೆಗೆ ಬಂದಾಗಲೇ ಅವಳಿಗೆ ಅಣ್ಣ ತಂದ ಫ್ರಾಕ್ ನೆನಪಾಗಿದ್ದು. ಓಡುವ ನಡಿಗೆಯಲ್ಲಿ ಅಣ್ಣನ ಕೋಣೆಯ ಬಳಿ ಬಂದಾಗ ಒಳಗೆ ಅಮ್ಮ ಮತ್ತು ಅಣ್ಣ ಮಾತನಾಡುತ್ತಿದ್ದುದು ಕಿವಿಗೆ ಬಿತ್ತು.
"ಮೂರ್ತಿ, ಏನೋ ಇದು, ನಾಳೆ ಊರಿಗೆ ಹೋಗ್ಬೇಕು, ಆದರೂ ಸಾಮಾನೆಲ್ಲ ಈ ತರ ಹರಡಿಕೊಂಡಿದ್ದೀಯಲ್ಲ, ಇದೇನೋ ಇದು! ಯಾರದೋ ಈ ಫ್ರಾಕು!"
ಶಶಿ ತಲೆ ಚಚ್ಚಿಕೊಂಡಳು. ಅಮ್ಮನಿಗೆ ಗೊತ್ತಾಗೋದು ಬೇಡ್ವೆ? ಅದು ನನಗಲ್ಲದೆ ಇನ್ಯಾರಿಗೆ? ಅರೆ ಇದೇನು ಅಣ್ಣ ಬೇರೇನೋ ಹೇಳುತ್ತಿದ್ದಾನೆ.
" ಬೆಂಗಳೂರಿನಲ್ಲಿ ನನಗೆ ಹಾಸ್ಟೆಲ್ ಸೀಟ್ ಕೊಡಿಸಿದರಲ್ಲಾ ಕೃಷ್ಣ ಸ್ವಾಮಿ , ಅವರ ಹೆಂಡತಿ ದುಡ್ದುಕೊಟ್ಟು ಅವರ ಮಗಳು ಸೀಮಾಗೆ ಬಾಂಬೆಯಿಂದ ಫ್ರಾಕ್ ತರೋಕೆ ಹೇಳಿದ್ದರು"
" ಹೌದಪ್ಪ, ಅವರು ಇಲ್ಲದೇ ಇದ್ದಿದ್ದರೆ ಅಥವಾ ಅವರು ಸಹಾಯ ಮಾಡದೆಇ ದ್ದಿದ್ದರೆ ನಿನಗ ಫ್ರೀ ಹಾಸ್ಟೆಲ್ ಎಲ್ಲಿ ಸಿಗುತ್ತಿತ್ತು? ಅವರ ಸೀಮಾ ನಮ್ಮ ಶಶಿ ವಾರಿಗೆ ಹುಡುಗಿ ಅನ್ನಿಸುತ್ತೆ ಅಲ್ವಾ?"
"ಶಶಿಗಿಂತ ಒಂದು ವರ್ಷ ಚಿಕ್ಕವಳು. ಆದರೆ ನಮ್ಮ ಶಶಿಯಷ್ಟು ಬಣ್ಣಾನೂ ಇಲ್ಲ ಲಕ್ಷಣಾನೂ ಇಲ್ಲ."
" ನಮ್ಮ ಶಶಿಗೂ ಇಂಥಾ ಒಂದು ಫ್ರಾಕ್ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು.. ಅಂದ ಹಾಗೆ ಈ ಫ್ರಾಕ್ ಶಶಿ ಕಣ್ಣಿಗೆ ಬೀಳದ ಹಾಗೆ ನೋಡ್ಕೋ. ಆಮೇಲೆ ಹುಟ್ಟು ಹಬ್ಬದ ದಿನ ಅವಳು ಅಳೋ ಹಾಗೆ ಆಗುತ್ತೆ. " '
ಬಾಗಿಲಿನಿಂದಾಚೆ ನಿಂತು ಕೇಳುತ್ತಿದ್ದ ಪುಟ್ಟ ಶಶಿಯ ಕಣ್ಣುಗಳಲ್ಲಿ ಧಾರಕಾರ ಕಂಬನಿ ಸುರಿಯುತ್ತಿತ್ತು. ಅದರ ಬಗ್ಗೆ ಕಟ್ಟಿದ್ದ ಸುಂದರ ಕನಸಿನ ಗೋಪುರ ಕುಸಿಯಿತು.
ಮೂವತ್ತು ವರ್ಷಗಳ ಹಿಂದಿನ ಆ ದಿನ, ಆ ಫ್ರಾಕ್ ಈಗಲೂ ಶಶಿಯ ಕಣ್ಮುಂದೆ ಬರುತ್ತದೆ. ಈಗವಳು ಶ್ರೀಮತಿ ಶಶಿ ರಾವ್, ಶ್ರೀಮಂತ ಉದ್ಯಮಿಯ ಪತ್ನಿ. ಮನೆಯಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಆದರೂ... .
"ಅಮ್ಮಾ" ಮಗಳು ರಶ್ಮಿಯ ಕೂಗು.
" ಏನು ಮಾಡ್ತಾ ಇದ್ದೀಯಾ? ಅಪ್ಪ ನಮಗೆಲ್ಲಾ ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ತಂದಿದ್ದಾರೆ . ಬಾಮ್ಮ ನೋಡೋಣಾ."
ಅಷ್ಟರಲ್ಲಿ ಅಲ್ಲಿಗೆ ಬಂದ ರಾವ್ ಕೈಯಲ್ಲಿ ತನಗಿಷ್ಟವಾದ ಕಡು ನೀಲಿವರ್ಣದ ಮೈಸೂರ್ ಸಿಲ್ಕ್ ಸೀರೆ ಕಂಡಿತು.
ಅದನ್ನು ನೋಡಿ ತನ್ನ ಮನಸ್ಸಿಗೆ ಸಂತೋಷವಾಯಿತು. ಆದರೂ ಆಗ ತನ್ನ ಮನದಲ್ಲಿ ಉಕ್ಕಿ ಹರಿದ ಸಂತಸ ಈಗಿಲ್ಲ. ಶಶಿಯ ಮುಖ ನೋಡುತ್ತಲೇ ಅವರಿಗೆ ಎಲ್ಲಾ ಅರ್ಥವಾಯಿತು.
" ಕೆಲವರಿಗೆ ಬಾಲ್ಯದ ಘಟನೆಗಳನ್ನು ನೆನೆಪಿಸಿಕೊಳ್ಳುವುದೆಂದರೆ ತುಂಬಾ ಇಷ್ಟ. ಆದರೆ ಭೂತಕಾಲದ ನೆನಪು, ಭವಿಷ್ಯದ ಕನಸು ವರ್ತಮಾನದ ಸಂತೋಷವನ್ನು ಮರೆಸುವಂತಾಗಬಾರದು." ಎಂದು ಶಶಿಯನ್ನು ನೋಡುತ್ತಾ ರಶ್ಮಿಗೆ ಹೇಳಿದಾಗ ಅವಳಿಗೆ ಏನೂ ಅರ್ಥವಾಗಲಿಲ್ಲ. ತನ್ನ ಕೈಯಲ್ಲಿದ್ದ ಗಿಫ್ಟ್ ನ್ನು ಬಿಚ್ಚಿ ನೋಡುವುದರಲ್ಲಿ ಮಗ್ನಳಾಗಿ ವರ್ತಮಾನದ ಸಂತೋಷ ಸವಿಯಲು ತೊಡಗಿದ್ದಳು.
ಶಶಿಯ ಸೂಕ್ಷ್ಮ ಮನಸ್ಸಿನ ಪರಿಚಯ ರಾವ್ ಗೆ ಚೆನ್ನಾಗಿಯೆ ಇತ್ತು. ಈಗ ಪತಿಯ ಮಾತುಗಳು ಶಶಿಯನ್ನು ಮತ್ತಷ್ಟು ಗೊಂದಲಕ್ಕೆ ದೂಡಿತು. ತಾನು ಇಷ್ಟಪಡುತ್ತಿರುವುದು ಬಾಲ್ಯದ ಆ ಘಟನೆಯೇ ಅಥವಾ ಆ ನೆನಪೇ? ಎರಡೂ ಬೇರೆಯೇ? ಅವಳ ಮನಸ್ಸು ಗೊಂದಲದ ಗೂಡಾಯಿತು. ಕಣ್ಣೆದುರಿದ್ದ ರೇಷ್ಮೆ ಸೀರೆ ತನ್ನತ್ತ ಕೈಚಾಚು ಎಂದು ಕರೆದಂತಾಯಿತು. ಇಷ್ಟು ದಿನ ತನ್ನೆದುರಿದ್ದ ಸುಂದರ ವರ್ತಮಾನವನ್ನು ನಿರ್ಲಕ್ಷಿಸಿದ್ದು ಎಷ್ಟರ ಮಟ್ಟಿಗೆ ಸರಿ? ಎಂದು ಚಿಂತಿಸುವಂತಾಯಿತು. ಸದಾ ಕಲ್ಪನಾಲೋಕದಲ್ಲಿಯೇ ಮುಳುಗಿರುವ ಯುವಕರಿಗೂ , ನೆನಪಿನ ಚಿಪ್ಪಿನಲ್ಲಿಯೇ ಮುಳುಗಿ ಕೊರುಗುತ್ತಿರುವ ತನ್ನಂತವರಿಗೂ ಏನು ವ್ಯತ್ಯಾಸ? ಇಬ್ಬರೂ ವರ್ತಮಾನದ ಗಳಿಗೆಯನ್ನು ಮರೆಯುತ್ತಿದ್ಡೇವೆ. ಇನ್ನು ಮುಂದೆ ತನ್ನ ನೆನಪುಗಳು ತನ್ನನ್ನಾಳಲು ಬಿಡಬಾರದೆಂದು ನಿರ್ಧರಿಸಿ ಸೀರೆಯನ್ನು ಕೈಗೆತ್ತಿಕೊಂಡು ಪತಿಯತ್ತ ದೃಷ್ಟಿ ಬೇರಿದಳು. ರಾವ್ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
-----------------
ಹಲವು ಕವಲುಗಳು
1 hour ago

ಚಂದ್ರ ಕಾಂತರವರೆ...
ReplyDeleteನಿಮ್ಮ ಬರಹಕ್ಕೆ ನಾನು ಕಾದು ಕುಳಿತಿರುತ್ತೇನೆ..
ಈ ಸಾರಿ ಬಹಳ ತಡ ಮಾಡಿದಿರಿ..
ಬಾಲ್ಯದ ಭಾವನಾ ಲೋಕಕ್ಕೆ ಕರೆದೊಯ್ದು ಬಿಟ್ಟಿದ್ದೀರಿ..
ನನ್ನ ಬಾಲ್ಯದ ಘಟನೆಗಳ ಬಗೆಗೆ ಬರೆಯೋಣ ಅನ್ನಿಸಿ ಬಿಡ್ತು.
ಇದು ನಮ್ಮದೇ ಅನುಭವ ಅನ್ನಿಸುವ ಹಾಗಿದೆ..
ಮುಗ್ಧ ಮಗು ಶಶಿಯ ಭಾವನೆಗಳು ತುಂಬಾ ಚಂದವಾಗಿ ಬಂದಿದೆ..
ಧನ್ಯವಾದಗಳು...
ಚಂದ್ರಕಾಂತರವರೆ,
ReplyDeleteನೆನಪು ಸವಿ ಸವಿ !!!?? ಚಂದದ ಬರಹ. ಆ ಚಿಕ್ಕಂದಿನಲ್ಲಿಯ ಆಸೆ ಮತ್ತೆ ಬರಲು ಸಾಧ್ಯವಿಲ್ಲವೇನೋ ಅನಿಸುತ್ತೆ.ಬೇಕಾದಾಗ ,ಬೇಕಾಗುವ ಮುಂಚೆನೇ ಎಲ್ಲಾ ತೆಗೆದುಕೊಳ್ಳುವಾಗ ಆ ಮುಗ್ಧ ಆಸೆ ಎಲ್ಲಿಂದ ಬರುತ್ತೆ. ಒಳ್ಳೆಯ ನೀತಿ, ನೆನಪುಗಳು ತನ್ನನ್ನಾಳಲು ಬಿಡಬಾರದು, ಇಷ್ಟ ಆಯ್ತು. ಶಶಿ ಮನೆಯಲ್ಲಿ ಹಬ್ಬಕ್ಕೆ ಬಟ್ಟೆ ಸಂಭ್ರಮ ನೋಡಿ ನಮ್ಮಜ್ಜಿ ನೆನಪಾದರು.ನಮ್ಮಜ್ಜಿಗೆ ಹೆಣ್ಣುಮಕ್ಕಳೆಂದರೆ ಪ್ರಾಣ. ಹಬ್ಬಕ್ಕೆ ಬಟ್ಟೆ ತರೋದು ಲೇಟ್ ಆದರು ತರೋದೆ ಇಲ್ವೇನೋ ಅನ್ನೋ ರೀತಿ ಮಗನಿಗೆ (ನಮ್ಮ ತಂದೆ) ಕ್ಲಾಸ್ ತಗೊಳೋರು.ನೀತಿ ಪಾಲಿಸಲು ಟ್ರೈ ಮಾಡ್ತೀನಿ:).
nanagu nanna baalya nenapaaytu :)
ReplyDelete@ ಸಿಮೆಂಟು ಮರಳಿನ...
ReplyDeleteಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ ಒಂದು ಅತ್ಯಮೂಲ್ಯ ಆಸ್ತಿ. ಬರವಣಿಗೆ ಇಷ್ತವಾಗಿದ್ದಕ್ಕೆ ಧನ್ಯವಾದಗಳು.
@ ಭಾರ್ಗವಿ
ನೆನಪುಗಳು ನಮ್ಮನ್ನಾಳಲು ಬಿಡಬಾರದು ಎಂದಿರುವೆ ನಿಜ. ಆದರೆ ಅದು ಎಲ್ಲರಿಗೂ ಅನ್ವಯಿಸದು. ಬದುಕಿನ ವೃದ್ಧಾಪ್ಯದಲ್ಲಿರುವವರಿಗೆ, ವರ್ತಮಾನದಲ್ಲಿ ಬದುಕೇ ಇಲ್ಲದವರಿಗೆ ಭೂತಕಾಲದ ನೆನಪುಗಳೇ ಬುತ್ತಿ. ಅಲ್ಲವೇ ಭಾರ್ಗವಿ.
ಈ ಕತೆಯ ಶಶಿಯ ಅನುಭವ ನನ್ನ ಅನುಭವಕ್ಕೆ ಹತ್ತಿರವಾಗಿದೆ.
@ ಲಕ್ಷ್ಮಿ
ಎಲೈ ಹುಡುಗಿ ನೀನು ಬಾಲ್ಯದ ಬಗ್ಗೆ ಮಾತನಾಡುವಷ್ಟು ಇನ್ನೂ ದೊಡ್ಡವಳಾಗಿಲ್ಲವಮ್ಮಾ! ಇನ್ನೊಂದು ಹತ್ತು ವರ್ಷ ಹೋದರೆ ಆಗ ನಿನ್ನ ಬಾಲ್ಯ ನೆನಪಿಗೆ ಯೋಗ್ಯ ವಸ್ತುವಾಗುತ್ತದೆ:))
hello madam,
ReplyDeleteಕಥೆ ಬಹಳ ನೈಜವಾಗಿದೆ. ಶಶಿ ಯ ಜೊತೆ ನಮ್ಮನ್ನು ಅಳಿಸಿಬಿಟ್ರಿ.. :( strikes a chord...
ನೆನಪು ಮರಿಬೇಕೊ / ಬೇಡ್ವೊ ಗೊತ್ತಿಲ್ಲ...ಆದ್ರೆ ಈಗ ಅಳಿಸಿದ ತಪ್ಪಿಗೆ ನಗಿಸುವ ಮತ್ತೊ೦ದು ಕಥೆ ಬರೀಲೇ ಬೇಕು ನೀವು...
ಚಂದ್ರಕಾಂತ ಅವರೆ,
ReplyDelete"ಸವಿನೆನಪುಗಳು ಬೇಕು ಮರೆಯದೀ ಬದುಕು"- ಹೌದು ನಮ್ಮನ್ನು ರೋಮಾಂಚನಗೊಳುಸುವ, ಹುರಿದುಂಬಿಸುವ, ಹೊಸ ಕನಸುಗಳನ್ನು ಹುಟ್ಟುಹಾಕುವ ನೆನಪುಗಳನ್ನಷ್ಟೇ ಮತ್ತೆ ಮತ್ತೆ ನೆನೆಯಬೇಕು. ಇಲ್ಲದೇ ಹೋದರೆ ಬದುಕು ನಿಂತ ನೀರಾಗಬಹುದು ಅಲ್ಲವೇ?
ಉತ್ತಮ ಕಥಾವಸ್ತುವಿನ ಜೊತೆ ಮನಸೆಳೆವ ನಿರೂಪಣಾ ಶೈಲಿಯನ್ನು ಹೊಂದಿರುವ ಕಥೆ ಒಳ್ಳೆಯ ಸಂದೇಶವನ್ನೂ ನೀಡುತ್ತಿದೆ. ನಿಮ್ಮಿಂದ ಮತ್ತಷ್ಟು ಬರಹಗಳ ನಿರೀಕ್ಷೆಯಲ್ಲಿರುವೆ.
ಧನ್ಯವಾದಗಳು.
@ ಗೀತಾ
ReplyDeleteನಿನ್ನ ಪ್ರತಿಕ್ರಿಯೆ ನನಗೆ ಬಹಳ ಖುಶಿ ಕೊಟ್ಟಿತು.ನಿನ್ನ ಮನಸ್ಸೂ ಶಶಿಯೊಂದಿಗೆ ಮಿಡಿದಿರುವುದು ನಿಜಕ್ಕೂ ಸಾರ್ಥಕ ಪ್ರಭಾವ.ನೀನೇ ಹೇಳಿರುವಂತೆ ನಿನ್ನನ್ನು ಅಳಿಸಿದ ತಪ್ಪಿಗೆ ಗಹಗಹಿಸಿ ನಗುವಂತಹ ಎಂದು ಹೇಳಲಾರೆ ಆದರ್ಯ್ ಮುಗುಳ್ನಗೆ ಮೂಡಿಸುವಂತಹ ಬರವಣಿಗೆಯನ್ನೇ ಬರೆಯುವೆ. " ನೀನು ಕೇಳುವುದು ಹೆಚ್ಚೋ ? ನಾನು ಬರೆಯುವುದು ಹೆಚ್ಚೋ ? "
ನೋಡಿದೆಯಾ ನನ್ನ ಪ್ರತಿಕ್ರಿಯೆ ನೋಡಿ ಏನೋ ನೆನಪಾಗಿ ನೀನು ನಕ್ಕೆಯಲ್ಲವೇ ?
@ ತೇಜಸ್ವಿನಿ
ReplyDeleteನೀವು ಹೇಳುವುದು ಸರಿ ಮನಸ್ಸನ್ನು ಹುರಿದುಂಬಿಸುವ ನೆನಪುಗಳನ್ನು ನೆನೆಯಬೇಕು. ಆದರೆ ಈ ನೆನಪು ಬಹಳ ವಿಚಿತ್ರವಾದದ್ದಲ್ಲವೇ ? ಹಿಂದೆಂದೋ ಆದ ನೋವು , ಅವಮಾನ, ನಿರಾಶೆ- ಇವುಗಳು ಮನಸ್ಸಿನ ಮೂಲೆಯಲ್ಲಿ ಹೊಂಚುಹಾಕಿಕೊಂಡು ಕುಳಿತಿದ್ದು ಬೇಡವೆಂದರೂ ನಮ್ಮನ್ನು ಬೇಟೆಯಾಡುತ್ತದಲ್ಲವೇ ?
ನನ್ನ ಬರವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ ವಸ್ತು, ನಿರೂಪಣಾ ಶೈಲಿ ಎಲ್ಲವನ್ನೂ ಮೆಚ್ಚಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು. ನಿಮ್ಮಂತವರ ಪ್ರೋತ್ಸಾಹವಿದ್ದರೆ ಮತ್ತಷ್ಟು ಬರವಣಿಗೆಯ ಕೃಷಿ ಮಾಡುವೆ.
ಅಂದಹಾಗೆ ಕೆಂಡಸಂಪಿಗೆಯಲ್ಲಿ ನನ್ನ ’ ಬಯ್ತ್ತದತೊರೆ’ಯನ್ನು ದಿನದ ಬ್ಲಾಗ್ ಲ್ಲಿ ಪರಿಚಯಿಸಿದ್ದಾರೆ. ನಾನೇ ಹೇಳಿಕೊಳ್ಳುವುದು ಸರಿಯಲ್ಲ. ಆದರೂ ನಿಮ್ಮೊಂದಿಗೆ ಸಂತಸ ಹಂಚಿಕೊಳ್ಳಬೇಕೆನಿಸಿತು...
ಚಂದ್ರಕಾಂತ ಅವರೆ,
ReplyDeleteಇವತ್ತು ಬೆಳಗ್ಗೆ ಅಷ್ಟೇ ನೋಡಿದೆ ನಿಮ್ಮ ಬ್ಲಾಗ್ ಅನ್ನು ಕೆಂಡ ಸಂಪಿಗೆಯಲ್ಲಿ. ತುಂಬಾ ಸಂತೋಷವಾಯಿತು. ಶುಭಾಶಯಗಳು. ಸಂತೋಷ ಹಾಗೂ ದುಃಖ ಎರಡೂ ಭಾವನೆಗಳನ್ನು ಆಪ್ತರಲ್ಲಿ ಹಂಚಿಕೊಳ್ಳಲೇ ಬೇಕು ಯಾಕೆ ಗೊತ್ತೆ?
ದುಃಖವನ್ನು ಆಪ್ತರಲ್ಲಿ, ಆತ್ಮೀಯರಲ್ಲಿ ಹಂಚಿಕೊಂಡಾಗ ಅದರ ತೀವ್ರತೆ, ಭಾರ ಕಡಿಮೆಯಾಗಿ ಹಗುರಾಗುತ್ತೇವೆ. ಅಂತೆಯೇ ಸಂತಸವನ್ನು ಹಂಚಿಕೊಂಡಾಗ ಅದರ ನಲಿವು ಅವರಿಗೂ ಹಬ್ಬಿ, ನಮ್ಮ ಸಂತೋಷ ಇಮ್ಮಡಿಯಾಗುತ್ತದೆ. :)
@ ತೇಜಸ್ವಿನಿ
ReplyDeleteನೀವು ಹೇಳುವುದು ಎಷ್ಟು ನಿಜ. ಸುಖವಾಗಲಿ ದುಃಖವಾಗಲಿ ಹಣ್ಚಿಕೊಂದಾಗ ನಮ್ಮ ಮನಸ್ಸು ಹಗುರವಾಗುತ್ತದೆ. ಆದರೆ ದುಃಖ ಹಂಚಿಕೊಳ್ಳುವುದು ಎಷ್ಟು ಕಷ್ಟವಲ್ಲವೆ ತೇಜಸ್ವಿನಿ.
ಈಗ ನಿಮ್ಮ ಆರೋಗ್ಯ ಹೇಗಿದೆ? ಅದಿತಿ ಪುಟ್ಟಿ ಹೇಗಿದ್ದಾಳೆ?
hm.....madam
ReplyDeleteನೀವು telepathy ಮಾಡುತ್ತೀರ ಅನ್ಸುತ್ತೆ! :D
ನಿಮ್ಮ ನಗಿಸುವ ಬರಹಕ್ಕೆ ಕಾಯುತ್ತಿರುವೆ :)
hello madam....
ReplyDelete"ಕೆ೦ಡ ಸಂಪಿಗೆ" ನೋಡಿದೆ, ಆದ್ರೆ font problem ಏನೂ ಓದಲು ಆಗಲಿಲ್ಲ :(
ಫಾಂಟ್ ತೊಂದರೆಯಿಂದ ಕೆಂಡಸಂಪಿಗೆಯಲ್ಲಿ ಬ್ಲಾಗ್ ನೋಡಲು ಆಗಲಿಲ್ಲ...
ReplyDeleteಕಥೆ ಬಹಳ ಚೆನ್ನಾಗಿದೆ. ಮೊದಲರ್ಧ ಹತ್ತು ದಶಕದ ಹಿಂದಿನದ್ದಾದರೆ, ಇನ್ನರ್ಧ ಈವಾಗಿನದ್ದು, ಒಂದು ರೀತಿಯ ಟ್ರಾನ್ಸಿಷನ್!
@ ಗೀತಾ
ReplyDeleteನನಗೆ ಟೆಲಿಪತಿ ಗೊತ್ತಿರಬಹುದೇನೋ ಎಂದಿರುವೆ. ಇದಕ್ಕಿಂತ ಒಳ್ಳೆಯ ಮಾತು ಬೇಕಿಲ್ಲ.
@ ಗೀತಾ ಮತ್ತು ಮುತ್ತುಮಣಿ
ನೀವು ಯಾವಾಗಲೂ ಕೆಂಡಸಂಪಿಗೆ ನೋಡುವುದಿಲ್ಲವೆ ? ನಿಮ್ಮಲ್ಲಿ ಬರಹ ಮತ್ತು ನುದಿ ಎರಡೂ fontಗಳಿವೆ ಎಂದುಕೊಂಡಿರುವೆ. ಆದರೂ ಏಕೆ ಸರಿಯಾಗಿ ಬರುತ್ತಿಲ್ಲವೋ ? ಒಮ್ಮೊಮ್ಮೆ ನನಗೆ ಕನ್ನಡಪ್ರಭ ಓದಬೇಕಾದರೆ ಈ ಸಮಸ್ಯೆ ಎದುರಾಗುತ್ತಿತ್ತು.
@ ಮುತ್ತುಮಣಿ
ಯಾವಾಗ ನಾವು ನೆನಪಿಗೆ ಜಾರುತ್ತೇವೋ ಆಗ ಆ ಕಾಲದ್ದು ಈ ಕಾಲದ್ದು ಎರಡೂ ಇರುತ್ತದೆ.ಮೊದಲರ್ಧ ಹತ್ತು ದಶಕದ ಹಿಂದಿನದಲ್ಲ ಮೂರು ದಶಕದ ಹಿಂದಿನದು :))ಯಾವುದು ಸಹಜ ಎನಿಸಿತು?
ನನಗೇನೋ ಹತ್ತು ವರ್ಷ ಹಿಂದಿನದ್ದೇ ಸಹಜ ಎನಿಸಿತು... ಅಥವಾ ಕಲ್ಪನೆಗೆ ನಿಲುಕಿತು...?
ReplyDeleteನಾನು ಹೇಳಿದ್ದು ನಿನಗೆ ಸರಿಯಾಗಿ ಅರ್ಥ ಆಗಿಲ್ಲ. ನೀನು ಹತ್ತು ದಶಕ ( 10*10)ಎಂದು ಬರೆದಿದ್ದೆ. ಅದು ಕಣ್ತಪ್ಪೋ ಕೈ ತಪ್ಪೋ ಇರಬೇಕು .ನೀನು ಹೇಳಹೊರಟಿರುವುದು ಒಂದು ದಶಕ ಅಲ್ಲವೇ ?ನಿನ್ನ ವಯಸ್ಸಿನಲ್ಲಿ ನಿಂತು ನೋಡಿದರೆ ಹತ್ತು ವರ್ಷದ ಹಿಂದಿನದು ಸಹಜ ಅನಿಸುವುದು ಸಹಜ!!
ReplyDeleteಚಂದ್ರಕಾಂತರವರೆ,
ReplyDeleteಮೊದಲ ಬಾರಿಗೆ ನಿಮ್ಮ ಬ್ಲಾಗಿಗೆ ಬಂದೆ. ಈ ಕತೆ ಓದಿದೆ. ಚೆನ್ನಾಗಿದೆ. ಮಗು ಶಶಿಯ ಭಾವನೆಗಳು ಚೆನ್ನಾಗಿ ಮೂಡಿಬಂದಿವೆ. ಮುಂದೆ ನಿಮ್ಮ ಬ್ಲಾಗಿಗೆ ಬರುತ್ತಿರುತ್ತೇನೆ. ಮತ್ತು ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ. ನಾನು ಚಾಯಾಗ್ರಾಹಕ. ನನ್ನ ಬ್ಲಾಗಿಗೆ ಬೇಟಿಕೊಡಿ. ಅಲ್ಲಿರುವ ಚಿತ್ರಗಳು ಮತ್ತು ಲೇಖನಗಳು ನಿಮಗಿಷ್ಟವಾಗಬಹುದು.
@ ಶಿವು ಕೆ.
ReplyDeleteಇದೀಗ ತಾನೆ ನಿಮ್ಮ ಬ್ಲಾಗ್ ನೋಡಿ ಬರುತ್ತಿದ್ದೇನೆ. ನೀವು ಕೇವಲ ಛಾಯಾಗ್ರಾಹಕರಲ್ಲ ನುಡಿಚಿತ್ರಕಾರರೂ ಹೌದೆನಿಸುವಂತೆ ಸುಂದರವಾಗಿ ಚಿತ್ರದ ಸೌಂದರ್ಯ ಜೀವಾಳ ಎಲ್ಲವನ್ನೂ ನಿರೂಪಿಸಿರುವಿರಿ. ನನ್ನ ಬ್ಲಾಗಿಗೆ ಬಂದು ಕತೆ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಹೊಸವರುಷದ
ReplyDeleteಶುಭಕಾಮನೆಗಳು...
ನಿಮ್ಮೆಲ್ಲ...
ಆಸೆ,, ಆಕಾಂಕ್ಷೆಗಳು...
ಈಡೇರಲಿ...
ಶುಭ ಹಾರೈಕೆಗಳು...
ಹೌದು ನಾನು ಹೇಳ ಹೊರಟಿದ್ದು ಒಂದು ದಶಕವೇ, ಅದು ಮೈಂಡಲ್ಲಿ ಮಿಸ್ಟೇಕ್! ಕೈ ತಪ್ಪಲ್ಲ, ಹತ್ತು ವರ್ಷ-ಒಂದು ದಶಕ ಎರಡೂ ಸೇರಿ, ಹತ್ತು ದಶಕ ಆಗಿಬಿಟ್ಟಿದೆ!
ReplyDeleteಹೋ ಹಾಗಾದರೆ, ನನಗೆ ಸಹಜ ಅನ್ನಿಸಿದ್ದು ಮೂರು ದಶಕ ಹಿಂದಿನದ್ದು. :)
ReplyDelete@ ಇಟ್ಟಿಗೆ ಸಿಮೆಂಟ್ ಅವರಿಗೆ
ReplyDeleteಧನ್ಯವಾದಗಳು.ನಿಮಗೆ ಹಾಗು ನಿಮ್ಮ ಮನೆಯವರಿಗೆಲ್ಲಾ ಹೊಸ ವರ್ಷದ ಶುಭಾಶಯಗಳು.
ಈ ವರ್ಷವೂ ನಿಮ್ಮ ಬರವಣಿಗೆಗೆ ಹೆಚ್ಚು ಪ್ರೋತ್ಸಾಹದಾಯಕವಾಗಲಿ
@ಮುತ್ತುಮಣಿ
ನಿನ್ನ ಉತ್ತರ ಇನ್ನೂ ನನಗೆ confusing ಅನ್ನಿಸುತ್ತಿದೆ. ನಿನಗೆ ಸಹಜ ಎನಿಸಿದ್ದು ಮೂವತ್ತು ವರ್ಷ ಹಿಂದಿನದೋ ಹತ್ತು ವರ್ಷ ಹಿಂದಿನದೋ ?
ಚಂದ್ರಕಾಂತ ಅವರೇ, ಕತೆ ಚೆನ್ನಾಗಿದೆ. ಹಳೆಯ ನೆನಪೊಂದು ಪುನಃ ಹಸಿರಾಯಿತು ಇದನ್ನು ಓದಿ. ನಾ ಚಿಕ್ಕವನಿದ್ದಾಗ ನನ್ನ ಹುಟ್ಟುಹಬ್ಬಕ್ಕೆ ಎರಡು ಕಾಮಿಕ್ಸ್ ಪುಸ್ತಕ ಕೊಡಿಸುವೆನೆಂದು ನನ್ನ ಪರಿಚಿತ ಹಿರಿಯರೊಬ್ಬರು ಹೇಳಿದ್ದರು. ಅದು ಮಾತಾಗಿ ಮಾತ್ರ ಉಳಿಯಿತು. ನನ್ನ ಮನಸಿನಲ್ಲಿ ಅಂದು ಪುಸ್ತಕ ಉಡುಗೊರೆಯಾಗಿ ಸಿಗುತ್ತದೆಂಬ ಖುಷಿ ಪೂರ್ಣಗೊಳ್ಳಲೇ ಇಲ್ಲ. ಇಂದು ನಾನು ಎಷ್ಟು ಪುಸ್ತಕ ಕೊಂಡರೂ ಅಂದು ಮೂಡಿದ್ದ ಖುಷಿ ಸಿಗೋಲ್ಲ. ಆ ಚಿಕ್ಕಂದಿನ ದಿನಗಳೇ ಹಾಗೆ, ಬಲು ಬೇಗ ಅಳು, ಬಲು ಬೇಗ ನಗು. ಮುಗ್ಧ ಪ್ರಪಂಚ. ಸುಖಾನ್ತ್ಯಗೊಳ್ಳುವ ಚಲನಚಿತ್ರದಂತೆ ಎಲ್ಲವೂ ರಂಗುರಂಗಿನ ಮೋಡಿಯ ಆಟ.
ReplyDelete