".....ಸೀತೆಯರ ಅಗ್ನಿಪ್ರವೇಶ ಪ್ರಸಂಗ"ರಾಮನಿಂದ ರಾವಣ ಹತನಾದ. ಈ ಸಂತಸದ ಸಮಾಚಾರ ಕೇಳಿದ ಸೀತೆ ಇನ್ನೇನು ರಾಮ ತನ್ನನ್ನು ಕರೆದೊಯ್ಯಲು ಬರುತ್ತಾನೆ ಎಂದು ಕಾಯುತ್ತಿದ್ದಳು. ಆಗ ಹನುಮಂತನ ಜೊತೆ ವಿಭೀಷಣ ಮತ್ತು ಅವನ ಮಗಳು ಅನಲೆ ಇವಳ ಬಳಿ ಬಂದರು. ಬಳಿ ಬಂದ ಹನುಮಂತನು " ರಾಮನಿಂದು ರಾವಣನ ಸಂಹಾರ ಮಾಡಿ ವಿಜಯಶಾಲಿಯಾಗಿದ್ದಾನೆ ತಾಯೆ, ಶಿರಸ್ನಾನ ಮಾಡಿ ದಿವ್ಯ ಅಂಗರಾಗ ಲೇಪಿಸಿಕೊಂಡು, ವಸ್ತ್ರಾಭರಣಗಳನ್ನು ಧರಿಸಿ ಭೋಗೀಂದ್ರನ ಅರ್ಧಾಂಗಿಯಂತೆ ಚೆನ್ನಾಗಿ ಅಲಂಕರಿಸಿಕೊಂಡು ಬರುವಂತೆ ರಾಮ ತಿಳಿಸಿದ್ದಾನೆ "ಎಂದನು.
" ನಾನು ಅಸ್ನಾತಳಾಗಿಯೇ ಪತಿದರ್ಶನಕೆ ತೆರಳಲು ಇಚ್ಚಿಸುವೆ"ಎಂದು ಸೀತೆ ಹೇಳಿದಾಗ,
" ಅದು ರಾಮನ ಅಜ್ಞೆ ತಾಯಿ "ಎಂದು ತನ್ನ ಅಸಹಾಯಕತೆಯನ್ನು ತೋರಿದನು
" ಹಾಗಿದ್ದರೆ ಅವನ ಆಜ್ಞೆಯಂತಾಗಲಿ, ಅವನ ಇಚ್ಚೆಯಂತೆ ಬರುವೆನು " ಎಂದು ಹೇಳಿದಳು.ಅನಲೆ ಸೀತೆಯನ್ನು ಅಲಂಕರಿಸಲು ತನ್ನೊಂದಿಗೆ ಕರೆದೊಯ್ದಳು.
ಇತ್ತ ಹನುಮಂತನು ರಾಮನ ಬಳಿ ಬಂದು ಸೀತೆ ಇನ್ನು ಸ್ವಲ್ಪ ಹೊತ್ತಿಗೆ ಅವನಿಚ್ಚೆಯಂತೆ ಬರುವಳೆಂದು ತಿಳಿಸಿದನು.
" ಎಲೈ ಹನುಮಂತ, ಮಹಾರಾಣಿ ಸೀತೆಗೆ ಸಲ್ಲಬೇಕಾದ ಗೌರವ ಮರ್ಯಾದೆಯನ್ನು ತೋರಿ ಅವಳನ್ನು ನಾನು ಸ್ವೀಕರಿಸುವೆ. ಇಡೀ ವಾನರ ಸೈನ್ಯಕ್ಕೆ ಸೀತೆಯ ಆಗಮನ ವಿಚಾರವನ್ನು ತಿಳಿಸು.ತನಗೆ ಹೊಸಬಾಳು ಕೊಟ್ಟ ಮಹಿಮಾನ್ವಿತ ವಾನರರನ್ನು ಸೀತೆ ನೋಡಿ ಕೃತಜ್ಞತೆ ಸಲ್ಲಿಸಲಿ." ಈ ಮಾತುಗಳನ್ನಾಡಿದ ರಾಮನು ತನ್ನಷ್ಟಕ್ಕೆ ತಾನೇ ಯಾವುದೋ ಚಿಂತೆಯಲ್ಲಿ ಮುಳುಗಿದನು.ಅವನ ಮುಖ ಅತ್ಯಂತ ಗಂಭೀರ ಮುಖಭಾವ ತಳೆಯಿತು.
ಸ್ವಲ್ಪ ಸಮಯದಲ್ಲಿಯೇ ವಾನರರೆಲ್ಲಾ ಸೀತೆಯನ್ನು ಕಾಣುವ ಆತುರದಿಂದ ಒಂದೆಡೆ ಸೇರಿದರು.ಸೀತೆ ಬರುತ್ತಿರುವಳೆಂಬ ಮಂಗಳ ಧ್ವನಿ ಕೇಳಿಸಿತು.ಎಲ್ಲರೂ ಹರ್ಷೋದ್ಗಾರ ಮಾಡುತ್ತಿದ್ದಂತೆಯೇ ಪಲ್ಲಕ್ಕಿಯಲ್ಲಿ ಸೀತೆಯನ್ನು ಕರೆತಂದರು. ಸೀತೆಯೊರ್ವಳನ್ನೇ ಕರೆತರುವಂತೆ ರಾಮ ಸೂಚಿಸಿದ. ಪಲ್ಲಕ್ಕಿಯಿಂದ ಇಳಿದ ಸೀತೆಯ ಸುತ್ತಲೂ ಸೇವಕಿಯರು ಲಜ್ಜಾಪಟವನ್ನು ಹಿಡಿದು ಕರೆತಂದರು. ಸೀತೆಯ ದರ್ಶನಕ್ಕಾಗಿ ಕಾತರದಿಂದ ಕಾಯುತ್ತಿದ್ದ ವಾನರರೆಲ್ಲಾ ಚಲ್ಲಾಪಿಲ್ಲಿಯಾಗಿ ಸೀತೆಯ ಬಳಿಗೇ ಓಡಿಬರಲಾರಂಭಿಸಿದರು. ಆದರೆ ಶಿಸ್ತನ್ನು ಕಾಪಾಡುವುದಕ್ಕಾಗಿ ವಿಭೀಷಣನು ತನ್ನ ಕಾವಲು ಭಟರಿಗೆ ಆಜ್ಞೆಯಿತ್ತು ವಾನರರನ್ನು ಹಿಂದೆ ತಳ್ಳುವಂತೆ ಸೂಚಿಸಿದನು. ಆ ಭಟರು ತಮ್ಮ ಕೈಯಲ್ಲಿರುವ ದಂಡಗಳಿಂದ ವಾನರರ ಮೇಲೆ ಬಲಪ್ರಯೋಗ ಮಾಡುತ್ತಿರುವುದನ್ನು ಕಂಡು ರಾಮನಿಗೆ ನಖಶಿಖಾಂತ ಕೋಪ ಬಂದಿತು.
" ಎಲೈ ವಿಭೀಷಣ , ಮೊದಲು ನಿನ್ನ ಭಟರಿಗೆ ದಂಡಗಳನ್ನು ದೂರವಿಡುವಂತೆ ಹೇಳು. ಈ ವಾನರರು ನನ್ನ ಪ್ರೀತಿಪಾತ್ರರು. ಅವರು ನನ್ನವರು. ಸೀತೆಗೇಕೆ ಲಜ್ಜಾಪಟ? ಈ ವಾನರರು ಸೀತೆಯನ್ನು ನೋಡಿದರೆ ಅವಳ ಮರ್ಯಾದೆಗೆ ಕುಂದುಬರುವುದಿಲ್ಲ.ಸ್ವಯಂವರದಲ್ಲಿ, ಯುದ್ಧಭೂಮಿಯಲ್ಲಿ, ಕಷ್ಟಕಾಲದಲ್ಲಿ ಸ್ತ್ರೀಗೆ ಯಾರ ಕಣ್ಣೋಟದ ದೋಷವೂ ತಟ್ಟದು.ಅವಳು ಲಜ್ಜಾಪಟವಿಲ್ಲದೆಯೇ ನನ್ನೆಡೆಗೆ ಬರಲಿ" ಎಂದನು.
ಸೀತೆ ತಾನೊರ್ವಳೇ ರಾಮನ ಬಳಿ ಬರುತ್ತಿರುವಂತೆಯೇ ಅವಳನ್ನು ಕಡೆಗಣ್ಣ ನೋಟದಿಂದ ರಾಮ ನೋಡಿದನು.ಅವಳು ತನ್ನಾಣತಿಯಂತೆ ಸ್ನಾನ ಮಾಡಿ ಶುಭ್ರ ವಸ್ತ್ರ, ಆಭರಣಗಳನ್ನು ಧರಿಸಿ ಬರುತ್ತಿದ್ದುದನ್ನು ನೋಡಿ ಅವನಿಗೆ ಸಮಾಧಾನವಾಯಿತು.ಅವಳು ಮಲಿನ ವಸ್ತ್ರ ಧರಿಸಿ, ಕೃಶಳಾಗಿ,ಎಲ್ಲರ ಅನುಕಂಪಕ್ಕೆ ತುತ್ತಾಗುವಂತೆ ಬಂದಿದ್ದರೆ ತಾನು ಈಗ ಆಡಲು ಉದ್ದೇಶಿಸಿರುವ ಕ್ರೂರ ಮಾತುಗಳನ್ನು ಆಡಲು ಸಾಧ್ಯವಾಗುತ್ತಿತ್ತೇ ? ಈಗಲಾದರೆ ಅವಳೊಡನೆ ಒರಟು ಮಾತಾಡಲು ತನಗೆ ಹಿಂಜರಿಕೆಯಾಗುತ್ತಿಲ್ಲ ಎಂದು ನಿಟ್ಟುಸಿರು ಬಿಟ್ಟನು.ಆದರೆ ಅವಳನ್ನು ಮಾತನಾಡಿಸದೆ ಎತ್ತಲೋ ನೋಡಲಾರಂಭಿಸಿದನು.ಅವನ ಈ ನಡವಳಿಕೆಯನ್ನು ಕಂಡು ಸುಗ್ರೀವ, ಲಕ್ಷ್ಮಣ, ಜಾಂಬವಂತ ಮುಂತಾದವರಿಗೆ ದಿಗ್ಭ್ರಾಂತಿಯೊಡನೆ ಯಾವುದೋ ಭೀತಿ ಮೂಡಿತು.ಎಲ್ಲರ ಕಣ್ಣೋಟವೂ ತನ್ನ ಮೇಲಿರಲು ಎದುರಿಗೆ ನಿಂತ ತನ್ನನ್ನು ರಾಮನು ಏಕೆ ಮಾತನಾಡಿಸುತ್ತಿಲ್ಲವೆಂದು ಸೀತೆ ತಗ್ಗಿಸಿದ ತಲೆಯೆತ್ತಿ ಅವನನ್ನು ನೋಡಿದಳು.ಆದರೆ ತಾನು ಇದುವರೆಗೂ ನೋಡಿದ್ದ ಸೌಮ್ಯ ಮುಖದ ರಾಮನಾಗಿರಲಿಲ್ಲ ಅವನು. ಅವನ ಮುಖದಲ್ಲಿ ರಾವಣನನ್ನು ಕೊಂದ ಹೆಮ್ಮೆ ಅಹಂಕಾರ ತುಂಬಿತ್ತು. ರಾಮನ ಪ್ರತಿಕ್ರಿಯೆಯನ್ನೇ ನಿರೀಕ್ಷಿಸುತ್ತಿದ್ದ ಸಮೂಹ ನಿಶ್ಯಬ್ಧವಾಗಿತ್ತು. ಆ ಅಸಹನೀಯ ನೀರವತೆಯನ್ನು ಮುರಿಯುವಂತೆ ರಾಮನು,
" ಎಲೈ ಸೀತೆ, ಯುದ್ಧಭೂಮಿಯಲ್ಲಿ ಶತ್ರುವನ್ನು ಗೆದ್ದಿದ್ದೇನೆ.ಈ ಯುದ್ಧದಲ್ಲಿ ಹನುಮಂತ, ಸುಗ್ರೀವ, ಲಕ್ಷ್ಮಣ, ವಿಭೀಷಣ, ಮುಂತಾದವರು ನನಗೆ ನೆರವನ್ನಿತ್ತಿದ್ದಾರೆ. ನನ್ನ ಕುಲದ ತೇಜಸ್ಸನ್ನು ಉಳಿಸಲು , ನನ್ನ ಪೌರುಷವನ್ನು ತೋರಲು ನಾನು ಶತ್ರುವನ್ನು ಕೊಂದಿದ್ದೇನೆ. ನಿನ್ನನ್ನು ಪಡೆಯಲಲ್ಲ . ನೀನೀಗ ಸ್ವತಂತ್ರಳು. ನಿನಗಿಷ್ಟ ಬಂದ ಕಡೆ ನಡೆ "ಎಂದು ಚುಚ್ಚುಮಾತಿನಿಂದ ಸೀತೆಯನ್ನು ಅವಮಾನಿಸಿದನು.
ಪತಿಯ ಈ ಭಯಂಕರ ಮಾತುಗಳಿಂದ ಸೀತೆ ದಿಗ್ಭ್ರಾಂತಳಾದಳು. ಆದರೂ ಅವನಿಗೆ ಕೈಮುಗಿದು,
" ನಿನಗೆ ಈ ಮಾತುಗಳು ತರವಲ್ಲ. ಅನಾಗರಿಕರು ಮಾತನಾಡುವಂತೆ ಏಕೆ ಮಾತನಾಡುತ್ತಿರುವೆ? ರಾಕ್ಷಸನು ನನ್ನನ್ನು ಮುಟ್ಟಿದ. ಅಪರಾಧಿ ನಾನಲ್ಲ,ಆ ದೈವವೇ ಅಪರಾಧಿ.
ಆ ರಾಕ್ಷಸನು ನನ್ನ ಮೈಯನ್ನಲ್ಲದೆ ಮನಸ್ಸನ್ನು ಮುಟ್ಟಿದನೇ ?ಬಾಲ್ಯದಲ್ಲಿಯೇ ನನ್ನ ಕೈ ಹಿಡಿದ ನಿನಗೆ ನನ್ನ ಸ್ವಭಾವ ತಿಳಿದಿಲ್ಲವೇ ?ನನ್ನೊಡನೆ ಕಳೆದ ಆ ದಿನಗಳ ಅನುಭವದಿಂದ ನನ್ನ ಭಕ್ತಿ , ಚಾರಿತ್ರ್ಯ , ಶೀಲವನ್ನು ನಿನಗೆ ಅರ್ಥವಾಗದಿದ್ದಮೇಲೆ ನಾ ಕೆಟ್ಟಂತೆಯೇ ಸರಿ. ನಿನ್ನ ಅನುಮಾನಕ್ಕೆ ನನ್ನ ಬಳಿ ಉತ್ತರವಿಲ್ಲ " ಎಂದು ಹೇಳಿ ಸ್ವಲ್ಪ ಹೊತ್ತು ಚಿಂತಿಸಿ, ಒಂದು ನಿರ್ಧಾರಕ್ಕೆ ಬಂದವಳಂತೆ ಲಕ್ಷ್ಮಣನ ಕಡೆಗೆ ತಿರುಗಿ,
" ಎಲೈ ಲಕ್ಷ್ಮಣ ಒಂದು ಚಿತೆಯನ್ನು ಸಿದ್ಧಪಡಿಸು. ತುಂಬಿದ ಸಭೆಯಲ್ಲಿ ಪತಿಯಿಂದ ತಿರಸ್ಕೃತಳಾದ ನನಗೆ ಬೇರೆ ದಾರಿಯಿಲ್ಲ. ಆ ಅಗ್ನಿಯೇ ನನಗಾಸರೆ " ಎಂದಳು.ದಿಕ್ಕು ತೋಚದೆ ಲಕ್ಷ್ಮಣನು ರಾಮನ ಕಡೆ ನೋಡಿದನು. ಅವನ ಕಠೋರ ಮುಖಭಾವ ಸಿತೆ ಹೇಳಿದಂತೆ ಮಾಡು ಎಂದು ಸೂಚಿಸಿತು. ಅಂತೂ ಎಲ್ಲರೂ ನೋಡುತ್ತಿದ್ದಂತೆಯೇ ಒಂದು ಬೃಹತ್ ಚಿತೆ ಸಿದ್ಧವಾಯಿತು. ಸೀತೆ ಮಾತನಾಡದೆ ರಾಮನ ಸುತ್ತ ಒಂದು ಪ್ರದಕ್ಷಿಣೆ ಹಾಕಿ , ದೀರ್ಘದಂಡ ನಮಸ್ಕಾರ ಮಾಡಿ ಅಗ್ನಿಯೆಡೆ ನಡೆದು ಅಗ್ನಿಗೆ ನಮಸ್ಕರಿಸಿ " ಸದಾಕಾಲ ನನ್ನ ಪತಿಯನ್ನೇ ಸ್ಮರಿಸಿದವಳು ನಾನಾದರೆ ನನ್ನನ್ನು ರಕ್ಷಿಸು " ಎಂದು ಹೇಳಿ ಬೆಂಕಿಯನ್ನು ಪ್ರವೇಶಿಸಲುದ್ಯಕ್ತಳಾದಳು.
ಇವೆಲ್ಲವನ್ನೂ ನಿರ್ಲಕ್ಷ್ಯ ದೃಷ್ಟಿಯಿಂದ ನೋಡುತ್ತಿದ್ದ ರಾಮನ ಮುಖ ಇದ್ದಕ್ಕಿದ್ದಂತೇ ಕಾಂತಿಯುತವಾಗಿ ಎಲ್ಲರೂ ನೋಡುತ್ತಿರುವಂತೆಯೇ ರಾಮನು ಆ ಅಗ್ನಿಯೊಳಗೆ ಪ್ರವೇಶಿಸಿಯೇ ಬಿಟ್ಟನು!!ಸ್ವಲ್ಪ ಹೊತ್ತಿನಲ್ಲಿಯೇ ಅಗ್ನಿಯಿಂದ ಪರಿಶುದ್ಧರಾದ ರಾಮ ಮತ್ತು ಸೀತೆಯರು ಕೈ ಕೈಹಿಡಿದು ಬೆಂಕಿಯಿಂದ ಹೊರಬಂದರು.
ದೂರದಲ್ಲಿ ನಿಂತಿದ್ದ ವಿಭೀಷಣ ಪುತ್ರಿ ಅನಲೆ ಓಡಿ ಬಂದು ರಾಮನ ಕಾಲಿಗೆರಗಿ ,
" ನನ್ನನ್ನು ಮನ್ನಿಸು ರಾಮ. ಸೀತೆಯನ್ನು ನೀನು ನಿಂದಿಸುತ್ತಿದ್ದಾಗ ನಾನು ನಿನ್ನನ್ನು ಚೆನ್ನಾಗಿ ಬಯ್ದುಕೊಂಡೆ.
ಪತಿವ್ರತೆಯಾದ ಸೀತೆಯನ್ನು ಬೆಂಕಿಗೆ ತಳ್ಳುವ ನೀನೆಷ್ಟರಮಟ್ಟಿಗೆ ಪರಿಶುದ್ಧ ? ನಿನ್ನನ್ನು ಪರೀಕ್ಷಿಸುವರಾರು ?ಎಂದು ನಿಂದಿಸಿದೆ. ನಿನ್ನನ್ನೇ ಅಗ್ನಿಪರೀಕ್ಷೆಗೆ ಒಡ್ಡಿಕೊಂಡ ನೀನು ಶ್ರೇಷ್ಟನೇ ಸರಿ " ಎಂದಳು. ಅವಳ ಮಾತುಗಳು ಅಲ್ಲಿದ್ದವರೆಲ್ಲರ ಹೃದಯದ ಪ್ರತಿಧ್ವನಿಯಂತಿತ್ತು.ರಾಮನು ಮಾತ್ರ ಈ ಮಾತಿಗೆ ಉತ್ತರಿಸದೆ ನಸುನಗುತ್ತಲಿದ್ದ.
{ ಸೀತೆಯನ್ನು ಅಗ್ನಿಪರೀಕ್ಷೆಗೊಡ್ಡಿದ ರಾಮನ ವ್ಯಕ್ತಿತ್ವ ಯಾವಾಗಲೂ ನನ್ನನ್ನು ಕೊರೆಯುತ್ತಿತ್ತು. ಕುವೆಂಪು ಅವರು ಶ್ರೀರಾಮಾಯಣದರ್ಶನಮ್ ನಲ್ಲಿ ಈ ಪ್ರಸಂಗದ ಚಿತ್ರಣದಲ್ಲಿ ರಾಮನ ವ್ಯಕ್ತಿತ್ವವನ್ನು ಮೇಲಕ್ಕೆತ್ತಿದ್ದು ನನಗೆ ಬಹಳ ಇಷ್ಟವಾಯಿತು. ಆದ್ದರಿಂದ
ಶ್ರೀರಾಮನವಮಿಯಂದು ಶುಭಾಶಯಗಳೊಂದಿಗೆ ಕುವೆಂಪುರವರ ಈ ಭಾಗವನ್ನು ಪರಿಚಯಿಸಿದ್ದೇನೆ}
ಚಂದ್ರಕಾಂತ ಅವರೇ,
ReplyDeleteಸಮಯೋಚಿತ ಹಾಗು ಮಾಹಿತಿಯುಕ್ತ ಲೇಖನಕ್ಕಾಗಿ ಧನ್ಯವಾದಗಳು...
ಶ್ರೀರಾಮನವಮಿಯ ಶುಭಾಶಯಗಳು...
ಚಂದ್ರಕಾಂತರವರೆ...
ReplyDeleteತನ್ನ ಪ್ರಾಣದಷ್ಟು ಪ್ರೀತಿಸುತ್ತಿದ್ದ ಸೀತೆಗೆ ಚುಚ್ಚು ಮಾತು ಆಡುವಾಗ ಶ್ರೀರಾಮ ತನಗೆ ಚುಚ್ಚಿಕೊಂಡ...
ತನ್ನ ಪ್ರೀತಿಯ ಮಡದಿ ಅಗ್ನಿ ಪ್ರವೇಶ ಮಾಡುವಾಗ ತನಗೆ ತಾನೇ ಬೆಂದು ಹೋಗುತ್ತಿದ್ದ...
ಇದು ಒಳಗುಟ್ಟು...
ಆದರೆ....
ಸೀತೆ ನಾರಿ.., ರಾಕ್ಷಸನಿಂದ ಮಾನಸಿಕವಾಗಿ ಹಿಂಸೆ ಪಡೆದು....
ಹದಿನಾಲ್ಕು ವರ್ಷ ಒಂಟಿಯಾಗಿದ್ದವಳಿಗೆ...
ತನ್ನ ಇನಿಯನ ಪ್ರೀತಿ ಸಾಂತ್ವನ ಬೇಕಿರುವಾಗ..
ಅಗ್ನಿಪ್ರವೇಶದ ಸಂದರ್ಭ...
ಚುಚ್ಚುತ್ತದೆ ಅಲ್ಲವಾ...?
ಎಲ್ಲೋ ಒಂದು ಕಡೆ ಶ್ರೀರಾಮ ತಪ್ಪಿದ
ಅನಿಸುತ್ತದೆ....
ಒಳ್ಳೆಯ ಚೆಸ್ ಆಟದ ಹಾಗೆ ..
ತಲೆ ಬಿಸಿ ಮಾಡಿ ಬಿಟ್ಟಿದ್ದೀರಿ...
ನಮ್ಮ ಪುರಾಣ ಕಥನಗಳಲ್ಲಿ ಇರುವಷ್ಟು ವಿಷಯ ಮತ್ತೆಲ್ಲೂ ಕಂಡಿಲ್ಲ
ಇಂದಿಗೂ ಅವು ಪ್ರಸ್ತುತ.. ಅಲ್ಲವಾ?
ಚಂದದ ಬರಹಕ್ಕೆ..
ಅಭಿನಂದನೆಗಳು..
ರಾಮನವಮಿಯ ಶುಭಾಶಯಗಳು...
ಚಂದ್ರಕಾಂತಾ,
ReplyDeleteಸೀತೆಯ ಅಗ್ನಿಪರೀಕ್ಷೆಯನ್ನು ಉಸಿರು ಬಿಗಿ ಹಿಡಿದುಕೊಂಡು ಓದಿದೆ.
ಕುವೆಂಪುರವರ ಧಾಟಿ ಹಾಗೂ ನಿಮ್ಮ ವಿವರಣೆ ತುಂಬಾ ಚೆನ್ನಾಗಿವೆ.
ಹೀಗೆ ರಾವಣನ, ದುರ್ಯೋಧನನ ವ್ಯಕ್ತಿತ್ವವನ್ನೂ ಮೇಲಕ್ಕೆತ್ತಿದೋರು ಇದಾರಲ್ವ. ಅಬ್ದಿಯುಮೋರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ - ಸೀತೆನಾ ಅಪಹರಿಸಿದಾಗ ರಾವಣನ ಕುರಿತು ಹೇಳಿದ ಮಾತು ಅಂತ ನೆನಪು (ಕೃತಿ ನೆನಪಿಲ್ಲ).
ReplyDeleteದುರ್ಯೋಧನಿನೆ ಸುಯೋಧನ ಸಂಭೋಧನೆ..
ಚ೦ದ್ರಕಾ೦ತಾ ಮೇಡಂ,
ReplyDeleteಬಹಳ ದಿನಗಳಿ೦ದ ನಿಮ್ಮ ಬ್ಲಾಗ್ ನಲ್ಲಿ ಹೊಸ ಬರಹ ಕಾಣದೆ ನಿರಾಶನಾಗಿದ್ದೆ. ಈಗ ರಾಮನವಮಿಯ ಸುಸ೦ದರ್ಭದಲ್ಲಿ ಒ೦ದೊಳ್ಳೆಯ ಬರಹದೊ೦ದಿಗೆಕಾಣಿಸಿಕೊಂಡಿದ್ದಿರಿ. ಖುಷಿಯಾಯಿತು. ರಾಮನ ವ್ಯಕ್ತಿತ್ವ ವನ್ನು ಕುವೆ೦ಪು ಅವರ ಶ್ರೀ ರಾಮಾಯಣ ದರ್ಶನಂ ನಲ್ಲಿ ಉಜ್ವಲವಾಗಿ ಅನಾವರಣಗೊಳಿಸಿದ ಬಗೆಯನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ.
".....ಸೀತೆಯರ", ಇದೇನು ....., ಸೀತೆಯರ ಅಂದ್ಕೊಂಡೆ. ಕೊನೆ ಓದಿದ್ಮೇಲೆ ಗೊತ್ತಾಯ್ತು. ಚೆನ್ನಾಗಿದೆ ನೀವಾಯ್ದುಕೊಂಡ ಪ್ರಸಂಗ ಮತ್ತು ನಿಮ್ಮ ಅನುವಾದ. ನಿಮಗೂ ತಡವಾಗಿ ರಾಮನವಮಿಯ ಶುಭ ಹಾರೈಕೆಗಳು.
ReplyDeleteಶಿವು
ReplyDeleteಎಷ್ಟು ಬೇಗ ನನ್ನ ಬರಹ ಓದಿ ಪ್ರತಿಕ್ರಿಯಿಸಿರುವಿರಿ ! ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.
ಪ್ರಕಾಶ್
ReplyDeleteನಿಮ್ಮ ಪ್ರತಿಕ್ರಿಯೆಯೂ ನಿಮ್ಮ ಬರಹದಂತೆ ಕಾವ್ಯದ ಲಕ್ಷಣ ಪಡೆದುಕೊಂಡಿದೆ.
ರಾಮನದೂ ತಪ್ಪಿರಬಹುದೇನೋ ಅಂದಿರುವಿರಿ. ಅದರಲ್ಲಿ ಅನುಮಾನವೇ ಇಲ್ಲ. ನನಗೆ ಗೊತ್ತಿರುವಂತೆ ಐದು ಸಂದರ್ಭಗಳಲ್ಲಿ ರಾಮ ತಪ್ಪಿ ನಡೆದಿದ್ದಾನೆ.
೧. ತಾಟಕಿ ವಧೆ ಮಾಡಿದ್ದು. - ಕ್ಷತ್ರಿಯರು ಹೆಣ್ಣನ್ನು ಕೊಲ್ಲಬಾರದು ಎಂಬ ನಿಯಮವಿದೆ.
೨. ವಾಲಿಯನ್ನು ಬೆನ್ನ ಹಿಂದೆ ನಿಂತು ಕೊಂದಿದ್ದು. ( ಬೆನ್ನ ಹಿಂದೆ ನಿಂತು ಕೊಲ್ಲುವುದು ಹೇಡಿಗಳ ಲಕ್ಷಣ.)
೩. ಸೀತೆಯನ್ನು ಅಗ್ನಿಪ್ರವೇಶದ ನಿಕಷಕ್ಕೆ ಒಡ್ಡಿದ್ದು
೪. ಅಗಸನ ಮಾತು ಕೇಳಿ ತುಂಬು ಗರ್ಬಿಣಿ ಸೀತೆಯನ್ನು ಕಾಡಿಗಟ್ಟಿದ್ದು.ಇದಂತೂ ಅಕ್ಷಮ್ಯ ಅಪರಾಧ. ಅದು ರಾಮನಿಗೂ ಗೊತ್ತಿತ್ತು. ಆದ್ದರಿಂದ ಅವಳಿಗೆ ತಿಳಿಸದೆಯೇ ಕಾಡಿಗೆ ಕಳಿಸಿದ್ದು.
೫. ಶಂಬೂಕನೆಂಬ ಶೂದ್ರ ತಪಸ್ವಿಯನ್ನು ಕೊಂದಿದ್ದು.
ಇನ್ನೂ ಎಷ್ಟು ಪ್ರಸಂಗಗಳು ಬಿಟ್ಟು ಹೋಗಿದೆಯೋ ತಿಳಿಯದು!
ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು
ಸುನಾಥ್ ಸರ್
ReplyDeleteನಮಸ್ಕಾರ. ನಿಮ್ಮ ಪ್ರತಿಕ್ರಿಯೆ ಬಹಳ ಅಮೂಲ್ಯ. ಆದರೆ ನೀವಂದುಕೊಂಡಂತೆ ನನ್ನ ಬರಹ ಅಷ್ಟೊಂದು ಚೆನ್ನಾಗಿಲ್ಲ. ಕುವೆಂಪು ಅವರ ಕೃತಿಯಲ್ಲಿ ಚಿತ್ರಿತವಾಗಿರುವುದು ಅತ್ಯಂತ ಸೊಗಸಾಗಿ ಸೂಕ್ಷ್ಮವಾಗಿದೆ. ಬರಹ ಬಹಳ ಧೀರ್ಘವಾಗಿ ಎಲ್ಲಿ ಯಾರೂ ಓದುವುದಿಲ್ಲವೇನೋ!! ಎಂದು ತುಂಬಾ ಸಂಗ್ರಹಿಸಿದ್ದೇನೆ. ಆದರೂ ಅದು ನಿಮ್ಮನ್ನು ಉಸಿರು ಬಿಗಿ ಹಿಡಿದುಕೊಂಡು ಓದುವಂತೆ ಮಾಡಿದೆಯೆಂದರೆ ಅದು ನನಗೆ ಒಳ್ಳೆಯ complimenತ್ಏ ಸರಿ
ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆಗೆ ವಂದನೆಗಳು
ಸಿಂಚನಾ
ReplyDeleteನನ್ನ ಬ್ಲಾಗಿಗೆ ನಿಮಗೆ ಸ್ವಾಗತ.ಎಲ್ಲಾ ಭಾಷೆಗಳಲ್ಲಿಯೂ ಪ್ರತಿನಾಯಕರ ಒಳ್ಳೆಯ ಗುಣಗಳನ್ನು ಗುರುತಿಸುವ ಪ್ರಕ್ರಿಯೆ ನಡೆದಿದೆ.ನೀವು ಹೇಳಿದಂತೆ ರಾವಣನನ್ನು ಮಹಾನುಭಾವನಂತೆ ಚಿತ್ರಿಸಿರುವ " ಅಬ್ಧಿಯುಂ ಒರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ " ನಾಗಚಂದ್ರಕವಿಯ ಪಂಪರಾಮಾಯಣ ಕಾವ್ಯದ್ದು. ಜೈನ ರಾಮಾಯಣಗಳಲ್ಲಿ ರಾವಣನನ್ನು ಮಹಾನುಭಾವನಂತೆ ಚಿತ್ರಿಸಿದ್ದಾರೆ.( ಅದರ ಬಗ್ಗೆಯೂ ಒಂದು ಬರಹ ಬರೆಯ ಬೇಕೆಂದಿರುವೆ ! )
ಕುವೆಂಪು ಅವರ ರಾಮಾಯಣದಲ್ಲಿ ರಾವಣನ ಪಾತ್ರ ಅತ್ಯಂತ ಸೊಗಸಾಗ್ ಮೂಡಿಬಂದಿದೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಪರಾಂಜಪೆಯವರೆ
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಸಾಮಾನ್ಯರಿಗೆ ತಿಳಿದಿರದ , ಭಿನ್ನ ದೃಷ್ಟಿಕೋನಗಳಿರುವ ಪುರಾಣ ಕಥೆಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ಬರಹಗಳನ್ನು ಸಿದ್ಧಗೊಳಿಸುತ್ತಿದ್ದೇನೆ
ಪಾಲ ಅವರೆ
ReplyDeleteಬೇಕೆಂದೇ ಆ ಶೀರ್ಷಿಕೆ ಕೊಟ್ಟೆ. ಕೇವಲ "ಸೀತೆಯ ಅಗ್ನಿಪರೀಕ್ಷೆ" ಎಂದರೆ ಯಾರೂ ಓದುವುದಿಲ್ಲವೆಂಬ ಭಯ !!. ರಾಮನ ಹೆಸರು ಸೇರಿಸಿದರೆ ಸ್ವಾರಸ್ಯ ಕೆಡುವುದೆಂಬ ಭಯ!! ಹೀಗಾಗಿ ... ಸೀತೆಯರ ಎಂದೇ ಶೀರ್ಷಿಕೆ ಕೊಟ್ಟೆ!
ಬರಹ ಇಷ್ಟವಾಗಿದ್ದಕ್ಕೆ ಧನ್ಯವಾದಗಳು
hello madam,
ReplyDeleteರಾಮನವಮಿಗೆ ಒಳ್ಳೆಯ ಲೇಖನ ಹಾಕಿರುವಿರಿ. ಎಲ್ಲರಿಗು ರಾಮನ ಮೇಲೆ ಕಡಿಮೆ ಅಗುತ್ತಿರುವ ಭಕ್ತಿ revive ಮಾಡಿದ ಹಾಗಾಯ್ತು ;)
ಪುರಾಣದ ಪಾತ್ರಗಳನ್ನು ಉದ್ದರಿಸುವವರು ’ವಿಲನ್’ ಪಾತ್ರಗಳನ್ನು ಮೇಲೆತ್ತಿದರೆ ಓದಲು ಒಂಥರ ಖುಶಿ ಸಿಗುತ್ತದೆ. ಉದಾ: ಮಂಥರೆ, ರಾವಣ, ದುರ್ಯೋಧನ... ಆದರೆ ’ಹೀರೊ’ ಗಳ ತಪ್ಪು ಸರಿಮಾಡಿದರೆ ಅಂಥ ಖುಶಿ ಸಿಗದು. ಏಕೆ ಹೀಗೆಂದು ಗೊತ್ತಿಲ್ಲ. ಅದೇನು ಹುಡುಗು(ಗಿ) ಬುದ್ಧಿಯೋ, ಸ್ತ್ರೀವಾದವೋ, ego ಪ್ರಾಬ್ಲಮ್ಮೋ ಅಥವ ನಮ್ಮಲ್ಲೆ ಅಡಗಿರುವ ಡಾರ್ಕರ್ ಸೈಡೋ ತಿಳಿಯದು.
ಯಾವ bias ಇಲ್ಲದೆ ಓದಿದರೆ ನಿಮ್ಮ ಲೇಖನ ಬಹಳ ಚೆನ್ನಾಗಿದೆ. ಹಳೆಗನ್ನಡ ಓದುವ ಪ್ರಯಾಸವಿಲ್ಲದೆ ಕುವೆಂಪು ರವರ ರಾಮಾಯಣದ ಒಂದು ಎಪಿಸೋಡ್ ದರ್ಶನ ಮಾಡಿಸಿರುವಿರಿ:)
This comment has been removed by the author.
ReplyDeleteಗೀತಾ
ReplyDeleteನಾವು ಏನೇ ಬರೆದರೂ ಒಬ್ಬರ ಮೇಲಿರುವ ಮೂಲಭೂತ ಅಭಿಪ್ರಾಯ ಹೆಚ್ಚಿಗೆ ಬದಲಾಗದು.!
ಪುರಾಣಗಳಲ್ಲಿ ಚಿತ್ರಿತವಾಗಿರು ಪಾತ್ರಗಳ ಅಂತರಂಗದಲ್ಲಿರುವ ಒಳ್ಳೆಯ ಗುಣಗಳನ್ನು ತೋರಿಸಿದರೆ ಅದು ಆ ಪಾತ್ರಗಳನ್ನು ‘ ಮೇಲೆ’ ಎತ್ತಿದ್ದಂತಲ್ಲ , ಅವರಲ್ಲಿ ಇರುವ ಗುಣವನ್ನು ತೋರಿಸಿದಂತೆ ಮಾಡಿದ ಹಾಗಾಗುತ್ತದೆ ಅಷ್ಟೆ.
ನನ್ನ ಮೂಲಭೂತ ಪ್ರಶ್ನೆ ಏನೆಂದರೆ ಹೀರೋಗಳಲ್ಲಿ ಲೋಪ ದೋಷಗಳು ಯಾಕಿರಬಾರದು ? ಎಂದು.ಆ weaknessಗಳಿಂದ ಹೊರಬರುವ ಪ್ರಯತ್ನ ಮಾಡಿದ ಪಾತ್ರಗಳಿದ್ದರೆ ನನಗೆ ಖುಷಿ ಸಿಗುತ್ತದೆ!
ಏನೇ ಆಗಲಿ ನಿನ್ನ ಬಿಚ್ಚು ಮನಸ್ಸಿನ ಅಭಿಪ್ರಾಯ ನನಗೆ ಬಹಳ ಇಷ್ಟವಾಯಿತು!
ಕುವೆಂಪು ಅವರ ಶ್ರೀರಾಮಾಯಣದರ್ಶನಂ ಓದಲು ಕಬ್ಬಿಣದ ಕಡಲೆಯೇನಲ್ಲ.ವರ್ಣನೆಗಳು ಜಾಸ್ತಿ ಅಷ್ಟೆ.
ಮೇಡಮ್,
ReplyDeleteನಿಮ್ಮ ಮೊದಲ ಸಾಲು ಖಂಡಿತ ಸರಿ.
ಕೆಲವು ಸಂಧರ್ಭಗಳಲ್ಲಿ ಇರುವ ಗುಣ ತೋರಿಸುವುದು ನಿಜ.ಏಕೆಂದರೆ ನಮ್ಮ ಪುರಾಣಗಳಲ್ಲಿ ಪೂರ ಕೆಟ್ಟದ್ದು ಏನೂ /ಯಾರೂ ಇಲ್ಲ! (ಪಾಶ್ಚಿಮಾತ್ಯರ school of thoughtನಲ್ಲಿ ಇರುವಂತೆ). ಏನೊ ಶಾಪದಿಂದಲೋ, ಸಣ್ಣ ತಪ್ಪಿಗೋ ಸ್ವಲ್ಪ grey shade ಕೊಟ್ಟಿರುತ್ತಾರೆ. ಕಡೆಗೆ ಎಲ್ಲಾರಿಗು ಮುಕ್ತಿ ಸಿಕ್ಬಿಡತ್ತೆ!
ಆದರೆ ರಾಮಾಯಣದಲ್ಲಿ ರಾಮ ಬೆಂಕಿಗೆ ಬೀಳಲಿಲ್ಲ.ಇದು ಹೊಸದಾಗಿ ಸೇರಿಸಿರುವ twist ತಾನೆ? ’ವಾಲ್ಮೀಕಿಯ ರಾಮ’ನ ಗುಣ - ಜನರ ಕಣ್ಣಲ್ಲಿ ಒಳ್ಳೆಯವನಾಗಿರುವುದು, ಮರ್ಯಾದೆ ಮೆರೆಸುವುದು! ’ಕುವೆಂಪುರವರ ರಾಮ’ನ ಗುಣ ಕರುಣೆ, ಒಲುಮೆ ಮೆರೆಸುವುದು. ಇದು ಮೇಲೆತ್ತಿದ ಹಾಗಾಗಲಿಲ್ಲವೆ?....
ಓಹ್!! ಯಾಕೋ ಜಾಸ್ತಿ ಪಿಟೀಲು ಕುಯ್ತಾ ಇದೀನಿ..ಸಾರಿ ಮೇಡಮ್...ಹಿಹಿಹಿ
ಚಂದ್ರ ಕಾಂತ ಮೇಡಮ್,
ReplyDeleteರಾಮನು ಅಗ್ನಿಪರೀಕ್ಷೆಗೆ ಒಳಗಾಗಿದ್ದು ನನಗೇ ಗೊತ್ತೇ ಇರಲಿಲ್ಲ...
ಸೀತಾ ದೇವಿಯ ಅಗ್ನಿಪರೀಕ್ಷೆಯ ಸಮಯದಲ್ಲಿ ಆಗುವ ಎಲ್ಲ ಘಟನೆಗಳನ್ನು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ...ಮನಸ್ಸಿನ ಪಾವಿತ್ರ್ಯತೆಯ ಬಗ್ಗೆ ಇದು ಅತ್ಯುತ್ತಮ ಅವಲೋಕನ...
ಮತ್ತೆ ನಾನು ಈಗ ತಡವಾಗಿ ಬರುತ್ತಿರುವ ಕಾರಣ ಕೆಲಸದ ಒತ್ತಡ...ಅದರೂ ಎಷ್ಟೇ ತಡವಾದರೂ ಇಂಥ ವಿಚಾರಗಳನ್ನು ನೆನಪಿಸಿಕೊಳ್ಳಲು ಬಂದೇ ಬರುತ್ತೇನೆ.....
ಧನ್ಯವಾದಗಳು...
ಗೀತಾ
ReplyDeleteನಿನ್ನ ವಿಚಾರಗಳು , ಚರ್ಚೆ ಮಾಡುವ ರೀತಿ ನನಗೆ ತುಂಬಾ ಇಷ್ಟ. ಮನುಷ್ಯ ಕೆಟ್ಟವನಾಗಿರುವುದೂ, ಒಳ್ಳೆಯವನಾಗಿರುವುದೂ ಹಾಗೂ ಮುಕ್ತಿ ಸಿಕ್ಕಿಬಿಡುವುದು--ಇವೆರಡೂ ಬೇರೆ ಬೇರೆ ವಿಚಾರಗಳು. ಪಾಶ್ಚಾತ್ಯ ಸಾಹಿತ್ಯ ಎಂದಾಗ ನಿನು ಯಾವುದರ ಬಗ್ಗೆ ಹೇಳುತ್ತಿರುವೆಯೋ ತಿಳಿಯಲಿಲ್ಲ. ಆದರೆ ಗ್ರೀಕ್ ಸಾಹಿತ್ಯದಲ್ಲಿ ಬರುವ ದೇವತೆಗಳು ಅದೆಷ್ಟು ಸಣ್ಣತನ, ಸೇಡು ಮುಂತಾದ ಗುಣಗಳನ್ನು ಪಡೆದಿರುತ್ತಾರೆಂದರೆ ಅವರು ಅಪ್ಪಟ ಮನುಷ್ಯರ ಹಾಗೆ ಕಾಣುತ್ತಾರೆ!!
ರಾಮಾಯಣ , ಮಹಾಭಾರತಗಳು -ಎಷ್ಟು ಅಗೆದರೂ ಮುಗಿಯದ ಚಿನ್ನದ ಗಣಿಗಳಂತವು. ವಾಲ್ಮೀಕಿ ಮತ್ತು ವ್ಯಾಸರು ಬರೆದ ಕಾವ್ಯಗಳನ್ನು ನಾವು ಮೂಲ ಕಾವ್ಯ ಎನ್ನುತ್ತೇವೆ. ಅದನ್ನು ಆಧರಿಸಿ ನೂರಾರು ಇತರ ರಾಮಾಯಣ ಮಹಾಭಾರತಗಳು ಬಂದಿವೆ.ಉದಾ: ಬೌದ್ದ ರಾಮಾಯಣ, ಜೈನ ರಾಮಾಯಣ, ತುಳಸಿ ರಾಮಾಯಣ, ಅದ್ಭುತ ರಾಮಾಯಣ ಮುಂತಾದವು.
ಇವೆಲ್ಲ ರಾಮಾಯಣಗಳಲ್ಲೂ ಕವಿ ಕತೆಯನ್ನು ಸ್ವಲ್ಪ ಭಿನ್ನವಾಗಿ ರಚಿಸುತ್ತಾ ಹೋಗುತ್ತಾನೆ. ಆದರೆ ಮೂಲ ಚೌಕಟ್ಟು ( ರಾವಣ ಸೀತೆಯನ್ನು ಅಪಹರಿಸುವುದು, ರಾಮ ರಾವಣನನ್ನು ಕೊಲ್ಲುವುದು, ಸೀತಾ ರಾಮರು ಸುಖವಾಗಿರುವುದು ...) ಹಾಗೇ ಇರುತ್ತದೆ.
ನಿನ್ನ ಕುತೂಹಲ ತಣಿಸಲು ಒಂದು ವಿಷಯ ಹೇಳುವೆ. ೪.೪.೦೯ರ ಶನಿವಾರದ ಕನ್ನಡಪ್ರಭದ ಚುಕ್ಕಿ/ಸಖಿಯ ಮಕ್ಕಳಕತೆ ವಿಭಾಗದಲ್ಲಿ " ಸಹಸ್ರಮುಖ ರಾವಣನ ಸಂಹಾರ" ಎಂಬ ಕತೆ ಇದೆ ಓದು. ಅಂತರ್ಜಾಲದಲ್ಲಿಯೇ ಓದಬಹುದು. (ಅದನ್ನೂ ನಾನೇ ಬರೆದಿರುವುದು) ಅದರಲ್ಲಿ ರಾಮನ ಇನ್ನೊಂದು ಮುಖ ನೋಡಬಹುದು.
ನನಗೆ ಕುವೆಂಪು ಅವರ ಈ ಭಾಗ ಏಕೆ ಇಷ್ಟ ಎಂದರೆ ಯಾವಾಗಲೂ ಉತ್ತಮ ದೊರೆ ಎನ್ನಿಸಿಕೊಳ್ಳುವುದರಲ್ಲೇ ತೃಪ್ತಿ ಪಟ್ಟುಕೊಳ್ಳುವ ರಾಮ {ರಾಜಾರಾಮ} ಒಮ್ಮೆಯಾದರೂ , ಸೀತೆಯ ಪ್ರೀತಿಪಾತ್ರ ಗಂಡ [ಸೀತಾರಾಮ] ಎನಿಸಿಕೊಳ್ಳುವಂತೆ ಚಿತ್ರಿಸಿದ್ದಾರಲ್ಲಾ ಅದಕ್ಕೆ!
ಆಯಾ ಪಾತ್ರಗಳು ಬೇರೆ ಬೇರೆ ಸಂದರ್ಭಗಳಲ್ಲಿ ಹೇಗೆ ವರ್ತಿಸಿರಬಹುದು ಎಂದು ಕವಿ ಊಹಿಸಿಕೊಂಡು ಪಾತ್ರಗಳಿಗೇ ಸ್ವಾತಂತ್ರ್ಯ ಕೊಟ್ಟಾಆಗ ಇಂತಹ ಹೊಸ ಹೊಸ ರಾಮಾಯಣ,ಭಾರತಗಳು ಹುಟ್ಟುತ್ತವೆ.ಇದನ್ನು ಮೂಲ ಕಥೆಯ ಬದಲಾವಣೆ ಎನ್ನುತ್ತೇವೆ.
ಶಿವು ಅವರೆ
ReplyDeleteಮೂಲ ವಾಲ್ಮೀಕಿ ರಾಮಾಯಣದಲ್ಲಿ ರಾಮ ಅಗ್ನಿಪರೀಕ್ಷೆಗೆ ತನ್ನನ್ನು ಒಡ್ಡಿಕೊಳ್ಳುವುದಿಲ್ಲ. ಕುವೆಂಪು ಅವರು ತಮ್ಮ ರಾಮಾಯಣದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದ್ದರೆ. ಅದರಲ್ಲಿ ಇದೂ ಒಂದು.ಮನಸ್ಸಿನ ಪಾವಿತ್ರ್ಯ ಎಲ್ಲಕ್ಕಿಂತ ಮುಖ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.
ಬಿಡುವಿಲ್ಲದ ಕೆಲಸದ ಮಧ್ಯೆ ಮತ್ತೊಮ್ಮೆ ಬಂದದ್ದಕ್ಕೆ ವಂದನೆಗಳು.
ಮೇಡಂ,
ReplyDeleteನಿಮ್ಮ ಪ್ರತಿಕ್ರಿಯೆಯಲ್ಲಿ, ಬರಹದಲ್ಲಿ, ಜೀವನಾನುಭವ ಚೆನ್ನಾಗಿ ಚಿತ್ರಿಸುತ್ತೀರ. ವಾಲ್ಮೀಕಿ ರಾಮಾಯಣ ಬರೆದ ಕಾಲದಲ್ಲಿ, ರಾಜನ ಜವಾಬ್ಧಾರಿಯ ಕೋನದಲ್ಲಿ "ಅಗ್ನಿ ಪರೀಕ್ಷೆ" ಸೀತೆಗೆ ಆಗ್ತಾ ಇರೋ ಅನ್ಯಾಯ ಅಂತ ಅನ್ನಿಸಿರಲಿಲ್ಲವೇನೋ.
"ನಾಗಚಂದ್ರಕವಿಯ ಪಂಪರಾಮಾಯಣ" ಶಾಲೇಲಿ ಓದಿದ ಕಾವ್ಯ, ನೆನಪಿಸಿದ್ದಕ್ಕೆ ವಂದನೆಗಳು. ಸುಮಾರು ೧೨ ವರ್ಷದ ಹಿಂದೆ ಓದಿದ್ದು, ಹೆಸರು ನೆನಪಿರದಿದ್ದರೂ ಅದರ ಭಾವಾರ್ಥವನ್ನು ಮನದಲ್ಲುಳಿಯುವಂತೆ ವಿವರಿಸಿದ ನಮ್ಮ ಟೀಚರ್ ಬಗ್ಗೆ ತುಂಬಾ ಅಭಿಮಾನ ಮೂಡ್ತಾ ಇದೆ.
ಬರಹ ದೊಡ್ಡದಾಗತ್ತೆ ಅಂತ ಅನುಮಾನಿಸಬೇಡಿ, ಇಷ್ಟೊಳ್ಳೆ ಬರಹಗಳನ್ನೋದೋದು ನಮ್ಮ ಅದೃಷ್ಟ.
ಸಿಂಚನ
ReplyDeleteನಿಮ್ಮ ಪ್ರತಿಕ್ರಿಯೆ ನನ್ನ ಮನಸ್ಸಿನ ಭಾವನೆಗಳಿಗೆ ಹತ್ತಿರವಾಗಿದೆ.
ನನಗೂ ಬಾಲ್ಯದಲ್ಲಿ ಒಳ್ಳೆಯ ಕನ್ನಡ ಟೀಚರ್ ಗಳು ಸಿಕ್ಕಿದ್ದರು. ಅವರ ಸ್ಫೂರ್ತಿಯಿಂದಲೇ ನನಗೆ ಪುರಾಣ ಕಥನಗಳಲ್ಲಿ ಹೆಚ್ಚು ಆಸಕ್ತಿ ಮೂಡಿದ್ದು.
ನಾಗಚಂದ್ರ ಕವಿಯ ‘ ಅಬ್ದಿ...’ ಕಾವ್ಯ ಭಾಗವನ್ನು ಪಿಯುಸಿ ಮಕ್ಕಳಿಗೆ ನಾಲ್ಕೈದು ವರ್ಷ ಪಾಠ ಮಾಡಿದ್ದೇನೆ. ಅದಕ್ಕೆ ಹಿನ್ನೆಲೆಯಾದ ಕಾವ್ಯ ಭಾಗವನ್ನು ಮುಂದೆ ಪರಿಚಯಿಸುವೆ. ಹೀಗೆಯೇ ನನ್ನ ಬರಹಗಳಿಗೆ ಪ್ರಾಮಾಣಿಕೆ ಪ್ರತಿಕ್ರಿಯೆ ನೀಡಿ.
hello madam,
ReplyDeleteಅಂತರ್ಜಾಲದಲ್ಲಿ ೦೪/೦೪/೦೯ ರ ಕನ್ನಡ ಪ್ರಭ ನೋಡಿದೆ. ಆದರೆ ಸಖಿ ವಿಭಾಗ ಖಾಲಿಯಾಗಿದೆ :(
ಮತ್ತು ನಾನು ಹೇಳಿದ್ದು ಪಾಶಿಮಾತ್ಯರ ಧರ್ಮದ ಬಗ್ಗೆ (’ಧರ್ಮ’ ಎಂದು ಬಿಟ್ಟರೆ ವಾದ ಎಲ್ಲೆಲ್ಲೋ ಹೋಗಿ ವಿವಾದವಾಗಿ ಬಿಡುತ್ತೆ ಅದಕ್ಕೆ ’school of thought' ಅಂದೆ ಮತ್ತು ಸಾಹಿತ್ಯ ವಿಚಾರಗಳಲ್ಲಿ ನಾನು ಸೊನ್ನೆಗೆ ಬಹಳ ಹತ್ತಿರ..ಹಹಹ). ಅವರಲ್ಲಿ ಇರುವಂತೆ ನಮ್ಮ ಪುರಾಣಗಳಲ್ಲಿ "ಸೈತಾನ್" ಅಥವ "evil" ನ ಕಲ್ಪನೆಯಿಲ್ಲ. ಅವರ ’evil' ಎಂದರೆ ಅದರಲ್ಲಿ ಒಳ್ಳೆಯತನ ಚೂರೂ ಇರಲು ಸಾಧ್ಯವೇ ಇಲ್ಲ. ದೈವಶಕ್ತಿ "evil' ಅನ್ನು ನಿರ್ನಾಮ ಮಾಡಿಬಿಡುತ್ತೆ. ನಮ್ಮದು ಎಲ್ಲ ಚಕ್ರದ ಹಾಗೆ...ಕೊನೆಯಲ್ಲಿ ಕೆಟ್ಟದ್ದು ಒಳ್ಳೆಯದಾಗುತ್ತದೆ. ತಪ್ಪು ಮಾಡಿದವರಿಗೆ ಅದರ ಅರಿವಾಗುತ್ತದೆ, ಪಶ್ಚಾತ್ತಾಪ, ಪರಿಹಾರ ಇದ್ದೇ ಇರುತ್ತ್ತದೆ. ಇದು ನನ್ನ observationನ್ನು.
ನಿಮ್ಮ ವಿವರಣೆಗೆ ಕಾಯುತ್ತಿರುವೆ.
ಮತ್ತು ಇನ್ನು ಹೆಚ್ಚು ಚರ್ಚಿಸುವುದಿಲ್ಲ....ಏಕೆಂದ್ರೆ ನಿಮ್ಮ ವಿಚಾರಕ್ಕೆ ಮನಸೋತು ರಾಮಭಕ್ತೆ ಅಗಿಬಿಡುವೆನೆಂಬ ಭಯ! (ಈಗಾಗಲೆ ’ಸೀತಾರಾಮ’ನ ಬಗ್ಗೆ ಸ್ವಲ್ಪ soft corner ಬಂದು ಬಿಟ್ಟಿದೆ ;))
ಗೀತಾ
ReplyDeleteನಿನ್ನ ಉತ್ತರಗಳು ಬಹಳ ಚೈತನ್ಯದಿಂದ ಕೂಡಿರುತ್ತವೆ.
ನೀನು ಹೇಳಿದಂತೆ ನಮ್ಮಲ್ಲಿ Evil ಅಥವಾ ಸೈತಾನನ ಕಲ್ಪನೆ ಇಲ್ಲದಿದ್ದರೂ ಅದಕ್ಕೆ ಸುಮಾರು ಸಂವಾದಿಯಾಗಿ ‘ ರಾಕ್ಷಸ’ ಪದವಿದೆ.ಅವರಲ್ಲಿಯೂ ಎಷ್ಟೋ ಬಾರಿ ಕೆಡುಕು ಕಡೆಗೆ ಒಳ್ಳೆಯದಕ್ಕೆ ಜಾಗ ಬಿಟ್ಟು ಕೊಡುತ್ತದೆ.
ನೀನು ರಾಮಭಕ್ತೆಯಾಗಲು ನಾನು ಬಿಡುವುದಿಲ್ಲ!!ಏಕೆಂದರೆ ಈ ದಿನ ನಾನು ರಾಮನ ಅಹಂಕಾರ ಮುರಿಯುವ ಕತೆಯನ್ನು ಬ್ಲಾಗ್ ಗೆ ಹಾಕುವೆ. ಆದರೆ ಯಾರು ಆ ಅಹಂಕಾರ ಮುರಿಯುತ್ತಾರೆಂಬುದು suspense!