ರಾವಣನನ್ನು ಕೊಂದು ಸೀತಾ ಲಕ್ಷ್ಮಣರೊಡನೆ ಅಯೋಧ್ಯೆಗೆ ಹಿಂತಿರುಗಿದ ರಾಮನನ್ನು ಪ್ರತಿಯೊಬ್ಬರೂ - ಮುನಿಗಳು, ಸಾಮಂತ ರಾಜರೂ, ಪ್ರಜೆಗಳೂ ಬಾಯಿತುಂಬಾ ಹೊಗಳಲಾರಂಬಿಸಿದರು. ಒಮ್ಮೆ ಕೆಲವು ಮುನಿಗಳು ತಮ್ಮ ಶಿಷ್ಯರೊಡನೆ ರಾಮನ ಆಸ್ಠಾನಕ್ಕೆ ಬಂದು ಅವನನ್ನು ಹೊಗಳುತ್ತಾ
" ರಾಮ ಅತ್ಯಂತ ಪರಾಕ್ರಮಶಾಲಿಯಾದ ದಶಕಂಠ ರಾವಣನನ್ನು ಕೊಂದ ನಿನ್ನಂತಹ ವೀರರೂ ಶೂರರೂ ಈ ಲೋಕದಲ್ಲಿಯೇ ಇಲ್ಲ. ನಿನ್ನಿಂದಲೇ ನರರೂ ಸುರರೂ ನಿಶ್ಚಿಂತರಾಗಿರುವುದು"
ಎನ್ನುತ್ತಿದ್ದಂತೆಯೇ ,ಸೀತೆ
" ಮುನಿಗಳೇ ನೀವು ಹೊಗಳಿದ್ದರಲ್ಲಿ ಅತಿಶಯೋಕ್ತಿ ಇಲ್ಲ. ಆದರೆ ನೀವೆಲ್ಲ ತಿಳಿದಂತೆ ಅತ್ಯಂತ ಪರಾಕ್ರಮಶಾಲಿಯಾದ ರಾವಣನಿಗಿಂತಲೂ ಶೂರನಾದ ಮತ್ತೊಬ್ಬ ರಾವಣನಿದ್ದಾನೆ. ಅವನೇ ಸಹಸ್ರಶಿರ ರಾವಣ. ಹೆಸರಿಗೆ ತಕ್ಕಂತೆ ಅವನಿಗೆ ಸಹಸ್ರ ತಲೆಗಳಿವೆ. "
ಎನ್ನುತ್ತಿದ್ದಂತೆಯೇ ಎಲ್ಲರೂ ಸೀತೆಯನ್ನು ಸ್ವಲ್ಪ ಅನುಮಾನದ ದೃಷ್ಟಿಯಿಂದ ನೋಡಲಾರಂಬಿಸಿದರು.
ಕೂಡಲೆ ಸೀತೆ " ನಾನು ಸುಳ್ಳು ಹೇಳುತ್ತಿರುವೆನೆಂದು ಭಾವಿಸದಿರಿ. ನಾನು ಹೇಳುತ್ತಿರುವುದೆಲ್ಲಾ ಸತ್ಯ. ನನ್ನ ಬಾಲ್ಯದಲ್ಲಿ ಮುನಿಗಳಿಂದ ದಶಕಂಠ ರಾವಣ ಹಾಗೂ ಸಹಸ್ರಶಿರರಾವಣರ ಬಗ್ಗೆ ಕೇಳಿದ್ದೆ. ಆಗ ಅದನ್ನು ನಾನು ನಂಬಿರಲಿಲ್ಲ. ಆದರೆ ದಶಕಂಠ ರಾವಣನನ್ನು ನೋಡಿದ ಮೇಲೆ ಇನ್ನೊಬ್ಬ ರಾವಣ ಇರಬಹುದೆಂಬ ನಂಬಿಕೆ ಮೂಡಿದೆ.ಜೊತೆಗೆ ಆ ಮುನಿ ತಾನು ಸ್ವತಃ ಅವನನ್ನು ನೋಡಿದ್ದಾಗಿ ಹೇಳಿದ್ದ. ಪುಷ್ಕರ ಎಂಬ ದ್ವೀಪದಲ್ಲಿರುವ ಅವನು ದೇವಾನುದೇವತೆಗಳನ್ನು ತನ್ನ ದಾಸರನ್ನಾಗಿಸಿಕೊಂಡಿದ್ದಾನೆ. ಅವನ ಶೌರ್ಯ ಅಪರಿಮಿತವಾದದ್ದು. ದಶಕಂಠ ರಾವಣನನ್ನು ಕೊಲ್ಲಲೇ ನನ್ನ ಅರಸ ರಾಮ ಎಷ್ಟೊಂದು ಕಷ್ಟ ಎದುರಿಸಬೇಕಾಯಿತು. ಇನ್ನು ಈ ರಾವಣನನ್ನು ಸಂಹರಿಸಲು ಹೇಗೆ ತಾನೇ ಸಾಧ್ಯ?: ಎಂದಳು.
ಅವಳ ಮಾತುಗಳನ್ನು ಕೇಳಿ ಮುನಿಗಳು ನಿಜವಿರಬಹುದೆಂದು ಭಾವಿಸಿದರು. ಆದರೆ ರಾಮನಿಗೆ ಮಾತ್ರ ಅಪಾರ ಕೋಪ ಬಂದಿತು. ಕಣ್ಣುಗಳು ಕೆಂಡದುಂಡೆಗಳಾದುವು. ರೋಷದಿಂದ ಎದ್ದು ನಿಂತು
" ಇಂತಹ ಭೀಕರ ರಾಕ್ಷಸನನ್ನು ಕೊಲ್ಲಲು ಸಾಧ್ಯವಿದೆಯೋ ಇಲ್ಲವೋ ತೋರಿಸುವೆನು. ಯುಧ್ಧಕ್ಕೆ ಸಿದ್ದರಾಗಿ" ಎಂದನು.
ಅತಿ ಶೀಘ್ರದಲ್ಲಿಯೇ ರಾಮನು ಸೀತೆ ಹಾಗೂ ತನ್ನ ಸೈನ್ಯದೊಡನೆ ಪುಷ್ಕರ ದ್ವೀಪಕ್ಕೆ ಹೊರಟನು.ಆ ದ್ವೀಪದ ಬಳಿ ಬಂದು ಇವರು ಸಿಂಹನಾದ ಮಾಡಿದಾಗ ಅಲ್ಲಿಯ ರಾಜ ಸಹಸ್ರಶಿರರಾವಣನಿಗೆ ಈ ನರವಾನರರು ಯಾರೆಂಬುದೇ ಅರ್ಥವಾಗಲಿಲ್ಲ. ತಮ್ಮ ದ್ವೀಪವನ್ನು ನೋಡಲು ಬಂದವರಿರಬಹುದೆಂದುಕೊಂಡ. ಹಾಗೆ ಬಂದವರಾದರೆ ಇಷ್ಟೊಂದು ದೊಡ್ದ ಸೈನ್ಯವೇಕೆ? ಎಂದು ಚಿಂತಿಸುತ್ತಿರುವಾಗಲೇ ಅಶರೀರವಾಣಿಯೊಂದು,
"ಬಂದವರು ನಿನ್ನ ವೈಭವ ನೋಡಲು ಬಂದಿಲ್ಲ. ದಶಕಂಠ ರಾವಣನನ್ನು ಕೊಂದ ಸಾಕ್ಷಾತ್ ಶ್ರೀರಾಮನೇ ನಿನ್ನ ಸಂಹಾರಕ್ಕಾಗಿ ಬಾರಿ ಸೈನ್ಯದೊಡನೆ ಬಂದಿದ್ದಾನೆ. ಮರೆಯ ಬೇಡ ಅವನು ದೈವಾಂಶಸಂಭೂತನು "
ಎಂದು ಹೇಳಿತು.ಈ ಮಾತುಗಳನ್ನು ಕೇಳಿ ಆ ರಾವಣನ ಕೋಪ ಮುಗಿಲಿಗೇರಿತು.ಕೂಡಲೇ ತನ್ನ ಸೈನ್ಯಕ್ಕೆ ಯುದ್ಧ ಮಾಡಲು ಆಜ್ಞೆ ಮಾಡಿದನು. ವಿಭೀಷನ ಕಡೆಯ ರಾಕ್ಷಸರೂ, ನರರೂ ಉತ್ಸಾಹದಿಂದ ಯುದ್ಧ ಪ್ರಾರಂಬಿಸಿದರು.ಅತ್ತ ಆ ರಾವಣನ ಸೈನ್ಯವೂ ಅಷ್ಟೇ ಉತ್ಸಾಹದಿಂದ ಯುದ್ಧ ಮುಂದುವರಿಸಿತು. ಎರಡೂ ಕಡೆಯ ಸೈನಿಕರೂ ಪ್ರಾಣದ ಹಂಗು ತೊರೆದು ಹೋರಾಡತೊಡಗಿದರು. ಸರಿಸಮಾನ ಹೋರಾಟದಿಂದ ಜಯಲಕ್ಷ್ಮಿ ಯಾರಕಡೆಗೂ ಬಾಗಲಿಲ್ಲ. ಆದರೆ ರಕ್ತಪಾತ ಮಾತ್ರ ಮಿತಿಮೀರಿತು. ಯಾವುದೇ ಏರಿಳಿತವಿಲ್ಲದ ಈ ಯುದ್ಧ ಎರಡೂ ಕಡೆಯ ಸೈನಿಕರಲ್ಲಿ ಮತ್ತಷ್ಟು ರೋಷ ಕೆರಳಿಸಿತು. ಕ್ರಮೇಣ ರಾವಣನ ಸೈನ್ಯ ಮೇಲುಗೈ ಸಾಧಿಸುತ್ತಾ ರಾಮನ ಕಡೆಯ ನರಸೇನೆ ಹಾಗೂ ರಾಕ್ಷಸ ಸೇನೆಯನ್ನು ಸೋಲಿಸಿತು. ರಾವಣನ ಸೈನಿಕರು ವಿಜಯೋತ್ಸಾಹದಿಂದ ಉನ್ಮತ್ತರಾಗಿ ಶತ್ರುಪಾಳಯದತ್ತ ಮತ್ತಷ್ಟು ಮುನ್ನುಗ್ಗಿದರು. ಈ ಹಂತದಲ್ಲಿ ಅವರಿಗೆ ಆಶ್ಚರ್ಯವಾಗುವ ರೀತಿಯಲ್ಲಿ ಕಪಿಸೈನ್ಯ ಎದುರಾಯಿತು. ನಿರೀಕ್ಷೆಗೂ ಮೀರಿ ಆ ಸೈನ್ಯ ರಾಕ್ಷಸರ ಮೇಲೆ ದಾಳಿ ಮಾಡಿತು. ದೀರ್ಘ ಹೋರಾಟದನಂತರ ಸಹಸ್ರಶಿರರಾವಣನ ಸೈನ್ಯ ಸಂಪೂರ್ಣ ನೆಲಕಚ್ಚಿತು. ಈ ಅನಿರೀಕ್ಷಿತ ವಿಜಯವನ್ನು ನೋಡಿ ಆಕಾಶದಲ್ಲಿ ನೆರೆದಿದ್ದ ದೇವತೆಗಳು ಸಂತೋಷದಿಂದ ಮೂಕವಿಸ್ಮಿತರಾದರು.
ಯಃಕಶ್ಚಿತ್ ಕೋತಿಗಳಿಂದ ತಮ್ಮ ಸೈನ್ಯ ಸೋತ ವಿಷಯ ಕೇಳಿ ರಾವಣನು ಕೆರಳಿ ಕೆಂಡವಾಗಿ ತಾನೇ ರಣಭೂಮಿಗೆ ಬಂದನು. ಅಲ್ಲಿಯ ದೃಶ್ಯ ನೋಡಿ ಅವನ ಕೋಪ ತಣ್ಣಗಾಯಿತು. ನರ ವಾನರರ ಬಗ್ಗೆ ಕೇವಲ ಕಿವಿಯಿಂದ ಕೇಳಿದ್ದ ಅವನು ಈಗ ಸ್ವತಃ ಕಣ್ಣಾರೆ ಕಪಿಗಳನ್ನು , ನರ ಸೈನ್ಯವನ್ನುನೋಡಿ
" ಇವರು ನನಗೆ ಸರಿಸಮಾನರೆ? ಇವರ ಮೇಲೆ ಕೈಮಾಡಿದರೆ ಜನರು ನನ್ನನ್ನು ನೋಡಿ ಜರೆಯುತ್ತಾರೆ. ಸುಮ್ಮನಿದ್ದು ಹಿಂತಿರುಗಿದರೆ ಆಡಿಕೊಂಡು ನಗುತ್ತಾರೆ. ಏನು ಮಾಡಲಿ ? "
ಎಂದು ಚಿಂತಿಸಿ ಒಂದು ನಿರ್ಧಾರಕ್ಕೆ ಬಂದನು.ಇವರನ್ನು ಯುದ್ಧದಲ್ಲಿ ಗಾಸಿಗೊಳಿಸಿದರೆ ನನಗೇನು ಲಾಭ ? ಇವರಿಗೆ ಸರಿಯಾದ ಶಾಸ್ತಿ ಮಾಡುವೆನು , ಎಂದು ರಾಮನ ಸೈನ್ಯದ ಮೇಲೆ ವಾಯುವ್ಯಾಸ್ಟ್ರ ಪ್ರಯೋಗಿಸಿದನು. ನೋಡನೋಡುತ್ತಿದ್ದಂತೆಯೇ ಆ ಅಸ್ತ್ರದ ಪ್ರಭಾವದಿಂದ ರಾಮನ ಸೈನ್ಯವಿಡೀ ಬಿರುಗಾಳಿಗೆ ಸಿಕ್ಕ ತರಗೆಲೆಗಳಂತೆ ಹಾರಿ ಸಮುದ್ರದಾಚೆ ತಮ್ಮ ಸ್ವಸ್ಥಾನದಲ್ಲಿ ಬಿದ್ದಿತು. ಅವರೆಲ್ಲರೂ ಯುದ್ಧದಲ್ಲಿ ಸೋತು ಸುಸ್ತಾಗಿ ಪುಷ್ಕರ ದ್ವೀಪದಿಂದಾಚೆಗೆ ಈಜಿಕೊಂಡು ಹೋಗುವ ಶ್ರಮವನ್ನು ರಾವಣ ತಪ್ಪಿಸಿದನೋ ಎಂಬಂತೆ ಆ ದೃಶ್ಯವಿತ್ತು. ಈಗ ರಾವಣನ ಎದುರಿಗೆ ಕೇವಲ ರಾಮ,ಸೀತೆಮತ್ತು ಋಷಿಗಳು ಮಾತ್ರ ಉಳಿದರು . ಈ ವಿಚಿತ್ರ ಬೆಳವಣಿಗೆಯಿಂದ ಅಚ್ಚರಿಗೊಂಡ ರಾಮನು ಸೀತೆಯ ಕಡೆ ನೋಡಿದರೆ ಅವಳು ಮುಗುಳ್ನಗುತ್ತಿದ್ದಾಳೆ!!.ಮುನಿಗಳು ಹೆದರುತ್ತಿದ್ದಾರೆ.
ಬಹುಬೇಗ ರಾಮನು ತನ್ನ ಅಚ್ಚರಿಯನ್ನು ಬದಿಗೊತ್ತಿ ತನ್ನ ಬಿಲ್ಲನ್ನು ಹೆದೆಗೇರಿಸಿ ಒಮ್ಮೆ ಧನುಷ್ಟಂಕಾರ ಮಾಡಿದನು.ಆ ದ್ವನಿಗೆ ರಾಕ್ಷಸರು ಹೆದರಿದರೂ ಸಹಸ್ರಮುಖನು ಮಾತ್ರ ಹೆದರದೆ ತನ್ನವರನ್ನು ಹುರಿದುಂಬಿಸಿ ಯುದ್ಧ ಪ್ರಾರಂಬಿಸಿದನು.ಅವನ ಮತ್ತು ರಾವಣನ ನಡುವೆ ಸಮಬಲದ ಹೋರಾಟ ಸಾಗಿತು.ರಾಮನು ಬಿಟ್ಟ ಬಾಣಗಳಿಗೆ ಅವನ ಬಳಿ ಒಂದು ಪ್ರತ್ಯಸ್ತ್ರ ಇದ್ದೇ ಇರುತ್ತಿತ್ತು. ಕಡೆಗೆ ರಾಮನು ಇವನನ್ನು ಹೇಗಾದರೂ ಸೋಲಿಸಲೇಬೇಕೆಂದು ರಾವಣನನ್ನು ಕೊಂದ ದಿವ್ಯಾಸ್ತ್ರ(ರಾಮಬಾಣ) ಪ್ರಯೋಗಿಸಿದನು. ಅದು ವೇಗವಾಗಿ ಬೆಂಕಿಯುಗುಳುತ್ತಾ ರಾವಣನ ಬಳಿ ಬಂತು. ಇನ್ನೇನು ಅವನ ಶಿರಗಳು ನೆಲಕ್ಕುದುರಿದುವು ಎನ್ನುವಷ್ಟರಲ್ಲಿ ಸಹಸ್ರಶಿರನು ಮಿಂಚಿನಂತೆ ಆ ಬಾಣವನ್ನು ಮುರಿದು ಮತ್ತೊಂದು ತೀಕ್ಷ್ಣ ಬಾಣವನ್ನು ಪ್ರಯೋಗಿಸಿದನು. ಆ ಬಾಣವು ವೇಗವಾಗಿ ಬಂದು ರಾಮನ ಎದೆಗೆ ತಾಗಿ ಅವನು ನೆಲಕ್ಕುರುಳಿದನು. ದೇವತೆಗಳ ಹಾಹಾಕಾರ ಹೇಳತೀರದು. ಮುನಿಗಳಂತೂ ರಾಕ್ಷಸನ ಬಾಯಿಗೆ ಬಿದ್ದೆವೆಂದು ಮರುಗಿದರು. ಯಾರಮುಖದಲ್ಲಿಯೂ ನಗುವಿಲ್ಲದಿದ್ದರೂ ಸೀತೆ ಮಾತ್ರ ಮುಗುಳ್ನಗುತ್ತಿದ್ದಳು.ಆ ತಪಸ್ವಿಗಳು ಸೀತೆಯ ಮುಖ ನೋಡಿ
"ಅಮ್ಮ, ನೀನು ಹೇಳಿದ್ದು ನಿಜ. ಈ ರಕ್ಕಸ ಮಹಾನ್ ಶೂರ. ಅವನನ್ನು ಯಾರು ಗೆಲ್ಲಲೂ ಸಾಧ್ಯವಿಲ್ಲ. ರಾಮನಿಗೇ ಆಗಲಿಲ್ಲ. ಇನ್ನು ನಮಗೆ ನೀನೇ ಗತಿ. ನಿನ್ನನ್ನು ಎಲ್ಲರೂ ಆದಿಶಕ್ತಿ ಎನ್ನುತ್ತಾರೆ. ಬಹುಶಃ ನೀನೇ ನಮ್ಮರಕ್ಷಕಿ. ಯಾವವಿಧದಲ್ಲಾದರೂ ನಮ್ಮನ್ನು ಕಾಪಾಡು"
ಎಂದು ಬೇಡಿಕೊಂಡರು.
ಅವರು ಸೀತೆಯನ್ನು ಹೊಗಳಿ ಬೇಡಿಕೊಳ್ಳುತ್ತಿರುವಂತೆಯೇ ಸೀತೆಯ ರೂಪ ಬದಲಾಯಿತು.
ತಲೆ ಕೂದಲು ಕೆದರಿತು, ಕಣ್ಣು ಕೆಂಪಾಯಿತು, ಸೌಮ್ಯ ಮುಖ ಉರಿಮುಖವಾಯಿತು.ಕೋರೆಹಲ್ಲು ಮೂಡಿ ನಾಲಗೆ ನೀಳವಾಯಿತು.ನಾಲ್ಕು ತೋಳುಗಳು,ಕೊರಳಲ್ಲಿ ರುಂಡಮಾಲೆ, ಕೈಯಲ್ಲಿ ಎಲುಬಿನ ಒಡವೆ - ಒಟ್ಟಿನಲ್ಲಿ ಮಹಾಕಾಳಿಯಂತೆ ಕಾಣುತ್ತಿದ್ದ ಅವಳು ಹಾರಿ ರಾವಣನೊಡನೆ ಹೋರಾಡಿದಳು.ಆದರೆ ಅವಳ ಯುದ್ಧವನ್ನು ಯಾರೂ ನೋಡಲಾಗಲಿಲ್ಲ.ಕಣ್ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ರಾವಣನ ಸಾವಿರ ತಲೆಗಳೂ ನೆಲಕ್ಕುದುರಿದ್ದವು.ಆದರೆ ಸೀತೆಯ ಮಹಾಕಾಳಿಯ ರೋಷ ಕಡಿಮೆಯಾಗಿರಲಿಲ್ಲ. ಕೂಡಲೇ ಬ್ರಹ್ಮಾದಿ ದೇವತೆಗಳು ಮತ್ತು ಮುನಿಗಳು ಅವಳನ್ನು ಸ್ತುತಿಸಿ ಶಾಂತಗೊಳಿಸಿದರು. ನಂತರ ಸೀತೆಯ ಇಚ್ಚೆಯಂತೆ ರಾಮನನ್ನು ಎಬ್ಬಿಸಿದರು. ಎಚ್ಚೆತ್ತ ರಾಮನು
" ಎಲ್ಲಿ ಆ ದುಷ್ಟ ರಾವಣ? ನನ್ನ ಬಾಣ ಮುರಿಯುವಷ್ಟು ಧೈರ್ಯವೇ ಅವನಿಗೆ? "
ಎಂದು ಹೇಳುತ್ತಾ ಹುಬ್ಬು ಗಂಟಿಕ್ಕಿ ಬಿಲ್ಲನ್ನು ಎತ್ತಿಕೊಂಡು.ಎದುರಿಗೆ ನೋಡಿದರೆ ಸೀತೆಯ ಮಹಾಕಾಳಿ ಅವತಾರ. ಕೂಡಲೇ ಅವನ ಕೈಯಲ್ಲಿದ್ದ ಬಿಲ್ಲು ತಾನೇತಾನಾಗಿ ಜಾರಿ ಕೆಳಗೆ ಬಿತ್ತು. ಮುನಿಗಳು ಅವನಿಗೆ ಎಲ್ಲಾ ವಿವರಗಳನ್ನು ತಿಳಿಸಿದರು.ಆಗ ರಾಮನಿಗೆ ಸೀತೆಯ ಶಕ್ತಿಯ ಆಳ ತಿಳಿಯಿತು.ಆದರೆ ಪ್ರಜೆಗಳಿಗೆ, ಸೈನಿಕರಿಗೆ, ಇನ್ಯಾರಿಗೂ ರಾವಣನನ್ನು ಕೊಂದವಳು ಸೀತೆ ಎಂದು ತಿಳಿಯಲಿಲ್ಲ.
ಎಲ್ಲರೂ ಯುದ್ಧಭೂಮಿಯಿಂದ ಹಿಂತಿರುಗಿದರು
ಹಿಂದಿರುಗಿ ಅಯೋಧ್ಯೆಗೆ ಮರಳಿದಾಗ ಅವನ ಶೌರ್ಯವನ್ನು ಜನರು ಹಾಡಿಹೊಗಳುತ್ತಿದ್ದರೆ , ರಾಮನು ನಾಚಿಕೆಯಿಂದ ಸೀತೆಯ ಮುಖ ನೋಡಿದ. ಅವಳು ಮಾತ್ರ ಎಂದಿನಂತೆ ಸೌಮ್ಯವಾಗಿ ಮುಗುಳ್ನಗುತ್ತಿದ್ದಳು.ರಾಮನ ಅಹಂಕಾರ ಮರೆಯಾಯಿತು. ಅಂದಿನಿಂದ ರಾಮನು ಯಾರ ಮುಂದೂ ದಶಕಂಠ ರಾವಣನನ್ನು ಕೊಂದ ಪ್ರತಾಪವನ್ನು ಕೊಚ್ಚಿ ಕೊಳ್ಳುತ್ತಿರಲಿಲ್ಲ.!!
(ಅದ್ಭುತ ರಾಮಾಯಣದಿಂದ ಆಯ್ದ ಭಾಗ)

ಚಂದ್ರಕಾಂತರವರೆ...
ReplyDeleteಬಹಳ ಸುಂದರವಾಗಿದೆ..
ಸೀತೆಯ ಪರಾಕ್ರಮ ಇಷ್ಟವಾಯಿತು...
ದೇವನಾದ ರಾಮನಿಗೂ ಅಹಂಕಾರ ಇರುತ್ತದೆ ಎಂದಾಯ್ತು...
ನೀವು ಚಿತ್ರಿಸಿದ ಸೀತೆ ಇಷ್ಟವಾಗುತ್ತಾಳೆ...
ಸುಂದರ ಕಥೆಗೆ
ಅಭಿನಂದನೆಗಳು...
ಪ್ರಕಾಶ್ ಅವರೆ
ReplyDeleteಇಷ್ಟು ಬೇಗ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಈ ರಾಮಾಯಣದಲ್ಲಿನ ಸೀತೆ ಯಾರಿಗಾದರೂ ಇಷ್ಟವಾಗುವಂತಹವಳು. ಅನವಶ್ಯಕವಾಗಿ ಕಂಡುಬರದ ಅವಳ ಧೈರ್ಯ ರಾಮನ ಅಹಂಕಾರ ಮುರಿದ ನಂತರ ಮತ್ತೆ ಮರೆಯಾದದ್ದು ನನಗೆ ಬಹಳ ಇಷ್ತ.
ಚಂದ್ರಕಾಂತ ಮೇಡಮ್,
ReplyDeleteರಾಮಾಯಣದ ಹೊಸ ವಿಚಾರಗಳು ನನಗೆ ಕುತೂಹಲ ಕೆರಳಿಸುತ್ತಿವೆ...ನಾವು ಓದಿದ ರಾಮಾಯಣಕ್ಕಿಂತ ವಿಭಿನ್ನವಾದ ಕೆಲವು ವಿಚಾರಗಳನ್ನು ಈ ಮೂಲಕ ತಿಳೀಸುತ್ತಿರುವಿರಿ....
ನನಗೆ ಇನ್ನಷ್ಟು ತಿಳಿಯವ ಆಸೆಯಾಗುತ್ತಿದೆ...
ಕಾಯುತ್ತೇನೆ...ಮೇಡಮ್,
ಧನ್ಯವಾದಗಳು...
ಸೀತೆಯ ಮಹತ್ವವನ್ನು ತಿಳಿಸುವ ಈ ಅದ್ಭುತ ರಾಮಾಯಣ ನನಗೆ ಮೆಚ್ಚಿಕೆಯಾಯಿತು.
ReplyDeleteತಿಳಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.
ಮೇಡಂ,
ReplyDeleteನಿಮ್ಮ ಬರವಣಿಗೆ ಚೆನ್ನಾಗಿದೆ.
"ಅದ್ಭುತ ರಾಮಾಯಣ" ಯಾವ ಕಾಲದ್ದು, ಬರೆದೋರ ಬಗ್ಗೆ ಚಿಕ್ಕ ಟಿಪ್ಪಣಿ ಕೊಟ್ಟಿದ್ದರೆ ಅನುಕೂಲವಾಗುತ್ತಿತ್ತು.
ಈ ಕಥೆ ಓದಿದ ಕೂಡಲೆ ನನಗನಿಸಿದ್ದು, ಸೀತೆ ಈ ಕೆಲಸ ಹತ್ತು ತಲೆಯ ರಾವಣ ಅವಳನ್ನ ಕದ್ದೊಯ್ಯುವಾಗ ಯಾಕೆ ಮಾಡಲಿಲ್ಲ ಅಂತ. ರಾಮನಿಂದಲೇ ರಾವಣನ ಕೊನೆಯಾಗಬೇಕಿತ್ತು ಅನ್ನೋ ವಾದ ಬಿಟ್ಟು ಬೇರೆ ಯೋಚನೆ ಇದ್ದರೆ ತಿಳಿಸಿ.
ಇನ್ನೊಂದು ಅನಿಸಿಕೆ, ಸಾವಿರ ತಲೆಯ ರಾವಣ ಸೀತೆಗಾಗಲಿ ರಾಮನಿಗಾಗಲೀ ಏನೂ ಮಾಡಿಲ್ಲ. ಸುಮ್ಮನೆ ಸೀತೆಯ ವ್ಯಕ್ತಿತ್ವವನ್ನು ವೈಭವೀಕರಿಸಲಿಕ್ಕೋಸ್ಕರ ಅವನನ್ನು ಹೋಗಿ ಕೊಂದು ಬಂದಿದ್ದು ಸರಿ ಕಾಣಲಿಲ್ಲ. ಪ್ರಪಂಚದಲ್ಲಿ ನನ್ನನ್ನ ಬಿಟ್ಟು ಉಳಿದವರೆಲ್ಲಾ ಕೆಟ್ಟವರು ಅಂತ ಕಾಣಿಸೋದು ಸಹಜವೇನೋ!
ರಾಮನ ಅಹ೦ಭಾವ, ಸೀತೆಯ ಮಹಾಕಾಳಿ ಅವತಾರ, ಸಹಶ್ರಶಿರ ರಾವಣನ ಸ೦ಹಾರ, ಇದರೊಳಗೆ ಅಡಗಿರುವ ನೀತಿಯನ್ನು ತಮ್ಮ ಎ೦ದಿನ ವಿಶಿಷ್ಟ ಶೈಲಿಯಲ್ಲಿ ಅನಾವರಣಗೊಳಿಸಿದ್ದೀರಿ. ಚೆನ್ನಾಗಿದೆ.
ReplyDeleteಶಿವು
ReplyDeleteನಾನು ಬರೆದ ಈ ಭಾಗ ತಮಗೆ ಇಷ್ಟವಾದದ್ದಕ್ಕೆ ಧನ್ಯವಾದಗಳು.
ವಾಲ್ಮೀಕಿ ಬರೆದ ರಾಮಾಯಣ ಮತ್ತು ವ್ಯಾಸರು ಬರೆದ ಮಹಾಭಾರತಗಳನ್ನು ಮೂಲಕೃತಿಗಳೆಂದು ಪರಿಗಣಿಸುತ್ತಾರೆ
ಈ ಮೂಲ ಕೃತಿಗಳ ಕತೆಯನ್ನು - ವಿಭಿನ್ನ ದೃಷ್ಟಿಕೋನಗಳಿಂದ ಬೇರೆ ಬೇರೆ ಕವಿಗಳು ಬೇರೆ ಬೇರೆ ಕಾಲದಲ್ಲಿ ರಚಿಸಿದ್ದಾರೆ.
ಅವುಗಳಲ್ಲಿ ಕೆಲವನ್ನು ಉದಾಹರಿಸಬೇಕೆಂದರೆ ಜೈನರಾಮಾಯಣ, ಬೌದ್ಧ ರಾಮಾಯಣ ,ತುಳಸಿರಾಮಾಯಣ ,ತಮಿಳಿನ ಕಂಬರಾಮಾಯಣ , ಅದ್ಭುತ ರಾಮಾಯಣ ಮುಂತಾದವುಗಳು.
ಅದರಲ್ಲಿ ನಾನು ಬೇರೆ ಬೇರೆ ರಾಮಾಯಣಗಳ ಪರಿಚಯ ಮಾಡಿಸಲು ಪ್ರಯತ್ನಿಸುತ್ತಿದ್ದೇನೆ.
ಸುನಾಥ್ ಸರ್
ReplyDeleteನಿಮಗೂ ಇದು ಹೊಸಕತೆ ಅನಿಸಿದ್ದರೆ ನನಗೆ ಬಹಳ ಸಂತೋಷ!! ನಿಜಕ್ಕೂ ವಿವಿಧ ರೀತಿಯ ರಾಮಾಯಣ ಮತ್ತು ಮಹಾಭಾರತಗಳು ನನಗೆ ಮೊದಲಿನಿಂದಲೂ ಕುತೂಹಲ ಕೆರಳಿಸುವಂತದ್ದು.ಅದನ್ನು ಬ್ಲಾಗ್ ಓದುಗರಿಗೆ ಪರಿಚಯಿಸುವ ಪ್ರಯತ್ನ ನನ್ನದು.ಈ ಲೇಖನವನ್ನು ಇಷ್ಟು ಬೇಗ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಸಿಂಚನ
ReplyDeleteಮತ್ತೊಮ್ಮೆ ನಿಮಗೆ ಸ್ವಾಗತ.ಅದ್ಭುತರಾಮಾಯಣ ಮೂಲ ಸಂಸ್ಕೃತದಲ್ಲಿದೆ. ಇದನ್ನು ಮೂಲದಲ್ಲಿ ವಾಲ್ಮೀಕಿ ಮಹರ್ಷಿಗಳು ಭಾರದ್ವಾಜಮುನಿಗೆ ಹೇಳಿದಂತೆ ಇದೆ.
ಈ ಕೃತಿಯನ್ನು ಕನ್ನಡದಲ್ಲಿ ಮುದ್ದಣ ಕವಿ ರಚಿಸಿದ್ದಾನೆ.ಆದರೆ ಅದು ಅಕ್ಷರಶಃ ಕನ್ನಡದ ಅನುವಾದವಲ್ಲ. ತನ್ನ ಸ್ವಂತಿಕೆಯಿಂದ ಸೊಗಸಾದ ಗದ್ಯ ಕೃತಿಯನ್ನು ರಚಿಸಿದ್ದಾನೆ.ಈ ಕೃತಿಯಲ್ಲಿ ಬರುವ ಒಂದು ಭಾಗ ಈ ಕತೆ.
ಇವೆಲ್ಲವೂ ಪುರಾಣ ಕಾವ್ಯಗಳಾಗಿರುವುದರಿಂದ ಇವುಗಳಲ್ಲಿ ನಂಬಲು ಆಗದಮ್ತಹ ಅನೇಕ ಪ್ರಸಂಗಗಳಿರುತ್ತವೆ. ಅಂತವುಗಳಲ್ಲಿ ರಾವಣನಿಗೆ ಹತ್ತುತಲೆಯೆಂದೂ , ಸೀತೆಯ ಅಗ್ನಿಪ್ರವೇಶವೆಂದೂ , ರಾಮನು ಕಲ್ಲಾದ ಅಹಲ್ಯೆಗೆ ಶಾಪವಿಮೋಚನೆ ಮಾಡಿದನೆಂದೂ ಹೇಳುವ ಪ್ರಸಂಗಗಳನ್ನು ಉದಾಹರಿಸಬಹುದು.
ಈ ಭಾಗದಲ್ಲಿ ಕವಿ ಮುಖ್ಯವಾಗಿ ಹೇಳ ಹೊರಟಿರುವುದು ಅಹಂಕಾರ ಎಂತಹ ಮನುಷ್ಯನನ್ನೂ ಹಾಳುಮಾಡುತ್ತದೆ ಎಂಬ ಅಂಶವನ್ನು. ಹಾಗೆಯೇ ಹೆಣ್ಣು ನೋಡಲು ಸೌಮ್ಯವಾಗಿದ್ದರೂ ಸಂದರ್ಭ ಬಂದರೆ ಗಂಡನನ್ನು ಸರಿ ದಾರಿಗೆ ತರುವ ಶಕ್ತಿ ಅವಳಿಗಿರುತ್ತದೆ ಎಂಬ ಅಂಶವನ್ನೂ ಅನಿಸುತ್ತದೆ.ಇಲ್ಲಿ ಹತ್ತುತಲೆ ಹಾಗು ಸಹಸ್ರತಲೆಗಳು ದಶಕಂಠ ರಾವಣನಿಗಿಂತ ಸಹಸ್ರಶಿರನು ಹೆಚ್ಚು ಬಲಿಷ್ಟ ಎಂಬುದನ್ನು ಸೂಚಿಸಲಿಕ್ಕೆ ಬಳಸಿದ ಸಂಕೇತ ಎಂದು ಭಾವಿಸಬಹುದೇನೋ ! ಪುರಾಣಗಳಲ್ಲಿ ಕವಿಗೆ ಇಷ್ಟು ಬದಲಾವಣೆ ಮಾಡಲು ಸ್ವಾತಂತ್ರ್ಯವಿರುತ್ತದೆ.
ಇವಿಷ್ಟೂ ನನ್ನ ಅಭಿಪ್ರಾಯಗಳು.
ಪರಾಂಜಪೆಯವರೆ
ReplyDeleteನಾನು ಇಷ್ಟುದ್ದ ವರ್ಣಿಸುವುದನ್ನು ನೀವು ಅಡಕವಾಗಿ ಸ್ಪಷ್ಟವಾಗಿ ಹೇಳಿಬಿಡುತ್ತೀರಿ. ಹೌದ ನೀವು ಹೇಳಿರುವ ಅಂಶಗಳೇ ಇದರಲ್ಲಿರುವುದು.
ಪರಾಂಜಪೆಯವರೆ
ReplyDeleteಹೌದು ಎಂದು ತಿದ್ದಿಕೊಳ್ಳಿ. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು
ಮುದ್ದಣ - http://kn.wikipedia.org/wiki/%E0%B2%AE%E0%B3%81%E0%B2%A6%E0%B3%8D%E0%B2%A6%E0%B2%A3
ReplyDeleteತೀರಾ ಇತ್ತೀಚೆಗೆ ಬರ್ದಿದ್ದು ಹಾಗಿದ್ರೆ.
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಇನ್ನೊಮ್ಮೆ ವಂದನೆ
hello madam,
ReplyDeleteಇದಂತು ನಿಜವಾಗಿ ’ಅದ್ಭುತ’ ಕಥೆ. ತುಂಬಾ ಚೆನ್ನಾಗಿದೆ :)
ಚಂದ್ರಕಾಂತರವರಿಗೆ,
ReplyDeleteತುಂಬಾ ತಡವಾಯ್ತು, ಕ್ಷಮಿಸಿ. ನನಗೂ ಈ ಎರಡು ಸೀತೆಯ ಪ್ರಸಂಗಗಳು ಹೊಸದು. ನೀವು ವಿವರಿಸಿದ ಶೈಲಿ ತುಂಬಾ ಚೆನ್ನಾಗಿ ಬಂದಿದೆ. ಪೌರಾಣಿಕ ಕಥೆಗಳು ನನಗೂ ತುಂಬಾ ಇಷ್ಟ. ಹೆಚ್ಚು ಹೆಚ್ಚು ಕಥೆಗಳು ನಿಮ್ಮಿಂದ ನಿರೀಕ್ಷಿಸುವೆ.
ಧನ್ಯವಾದಗಳು.
ಭಾರ್ಗವಿ
ReplyDeleteನಿಮ್ಮ ಪ್ರತಿಕ್ರಿಯೆ ಇಲ್ಲದೆ ಆಶ್ಚರ್ಯವಾಗಿತ್ತು. ಆದರೆ ನಿಮಗಿಷ್ಟವಾಗಿದ್ದು ಕೇಳಿ ಖುಷಿಯಾಯಿತು.
ಹಲೋ ಮೇಡಂ,
ReplyDeleteರಾಮಾಯಣ ಮತ್ತು ಮಹಾಭಾರತದ ನಮಗೆ ಗೊತ್ತಿಲ್ಲದ ಕಥೆಗಳನ್ನು ಒಂದೊಂದಾಗಿ ನಿಮ್ಮ ಬತ್ತಳಿಕೆಯಿಂದ ತೆಗೆದು ಬಿಡುತ್ತಿದ್ದೀರಿ. ಖುಶಿಯಾಯಿತು. ಸಿಂಚನವರು ಹೇಳಿರುವಂತೆ ಹತ್ತುತಲೆ ರಾವಣನನ್ನು ಸೀತೆಯೇ ಕೊಲ್ಲಬಹುದಿತ್ತಲ್ಲ? ಯಾಕೆ ಕೊಲ್ಲಲಿಲ್ಲ? ಬಹುಶಃ ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಅಸಹಾಯಕನಾದಾಗ ಹೆಣ್ಣು ಕಾರ್ಯೋನ್ಮುಖಳಾಗುತ್ತಾಳೆಂದಿರಬಹುದೆ?
ಸಿಂಚನ
ReplyDeleteನೀವು ಅಭಿಪ್ರಾಯಪಟ್ಟಂತೆ ಮುದ್ದಣ ಕವಿ ಇತ್ತೀಚಿನವನೇ. ಆದರೆ ಸಂಸ್ಕೃತ ಮೂಲ ಅದ್ಭುತರಾಮಾಯಣ ಬಹಳ ಹಳೆಯದ್ಯ್. ಭಾರದ್ವಾಜ ಮುನಿಗೆ ವಾಲ್ಮೀಕಿ ಹೇಳಿದ ಕತೆ ಅದು. ನಿಮ್ಮ ಸೂಕ್ಷ್ಮ ನೋಟಕ್ಕೆ ಧನ್ಯವಾದಗಳು.
ಭಾರ್ಗವಿ
ReplyDeleteನಿಮ್ಮ ಮಾತುಗಳೇನೋ ನನಗೆ ಭಿನ್ನ ಪರಂಪರೆಯ ಮತ್ತಷ್ಟು ರಾಮಾಯಣ ಕತೆಗಳನ್ನು ಬರೆಯಲು ಪ್ರೇರೇಪಿಸುತ್ತಿವೆ.. ಆದರೆ ಎಲ್ಲಿ ರಾಮಾಯಣಕ್ಕೇ ಸೀಮಿತವಾಗುವೆನೋ ಎಂಬ ಭಯವೂ ಇದೆ.ಹೀಗಾಗಿ ಮಧ್ಯೆ ಮಧ್ಯೆ ಇತರ ಲೇಖನಗಳನ್ನೂ ಬರೆದು ರಾಮಾಯಣ ಕತೆಗಳನ್ನು ಪರಿಚಯಿಸುವೆ.
ಗೀತಾ
ReplyDeleteಅದ್ಭುತ ರಾಮಾಯಣ ಇಷ್ಟವಾಗಿದ್ದಕ್ಕೆ ಧನ್ಯವಾದಗಳು:)
ಉದಯ್
ReplyDeleteರಾಮಾಯಣದ ಯಾವ ಕತೆಯೂ ನನ್ನ ಬತ್ತಳಿಕೆಯಿಂದ ಬಂದದ್ದಲ್ಲ. ಅಂತಹ ಹೆಮ್ಮೆಯೂ ನನ್ನಲ್ಲಿಲ್ಲ. ಎಲ್ಲೆಲ್ಲೋ ಇರುವುದನ್ನು ಸ್ವಲ್ಪ ಸ್ವಲ್ಪ ಹೆಕ್ಕಿ ಕೊಡುವುದಷ್ಟೇ ನನ್ನ ಕೆಲಸ.
ಸಿಂಚನ ಅವರಿಗೆ ಉತ್ತರಿಸಿದ ಭಾಗ ಓದಿದರೆ ನಿಮ್ಮ ಅನುಮಾನ ಪರಿಹಾರವಾಗಬಹುದು.
ಕಥೆ ತುಂಬಾ ಚೆನ್ನಾಗಿದೆ.
ReplyDeleteಇಷ್ಟು ತಡ ಏಕೆ ಎಂದೂ ಹೇಳಿಬಿಡುತ್ತೇನೆ. ನನ್ನ ಕೆಲಸ ಸ್ವಲ್ಪ ಜಾಸ್ತಿಯೇ ಆಗಿಬಿಟ್ಟಿತ್ತು. ಕಥೆಯನ್ನೇನೋ ಮಧ್ಯೆ ಮಧ್ಯೆ ಓದುತ್ತಿದೆ, ಆದರೆ, ಕಾಮೆಂಟ್ ಬರೆಯುವುದು ಬೇಡವೆಂದು ತಡೆದೆ. ಈಗಷ್ಟೆ, ಇನ್ನೊಂದು ಸಾರಿ ಕಥೆ ಓದಿದೆ.
ನಮ್ಮ ಪುರಾಣಗಳಲ್ಲಿ, ರಾಮಾಯಣ, ಮಹಾಭಾರತ ಎಲ್ಲದರಲ್ಲಿಯೂ, ಕಡೆಯಲ್ಲಿ ಈ ರೀತಿಯ ಟ್ವಿಸ್ಟುಗಳು ಕಾಣುತ್ತದೆಯಲ್ಲವೇ? ನನಗೆ ಇದು ಬಹಳ ಇಷ್ಟ. ಒಂದು ರೀತಿ ಸೆಮಿನಾರ್ ಆದಮೇಲೆ ನಡೆಸುವ ಚರ್ಚೆಯ ರೀತಿ! ಕೇವಲ ಒಬ್ಬನ ಸಾಹಸವನ್ನು ಕೊಂಡಾಡುವುದೇ ಕಥೆಯ ಮುಖ್ಯ ಉದ್ದೇಶವಲ್ಲ, ಎಂದು ಇವು ಹೇಳುತ್ತಿರುವಂತೆ ಇದೆ.
ಹಾಗೆಯೆ, ಈ ಕಥೆಯಲ್ಲಿ ಬಂದಿರುವ ಹಲವಾರು ವರ್ಣನೆಗಳು ನನಗೆ ಇಷ್ಟವಾಯಿತು.
ಹೇಮಾ
ReplyDeleteನಿನ್ನ ವಿಚಾರಪೂರ್ಣ ಕಾಮೆಂಟ್ ಇಷ್ಟವಾಯಿತು. ಎಷ್ಟೋ ಬಾರಿ ಓದಿದ ಕೂಡಲೆ ಕಾಮೆಂಟ್ ಬರೆಯುವುದಕ್ಕಿಂತ ನಿಧಾನವಾಗಿ ಬರೆಯುವುದರಿಂದ ಹೆಚ್ಚು ಅಂಶಗಳ ಕಡೆ ಗಮನ ಹರಿಸಲು ಸಾಧ್ಯವಾಗುತ್ತದೆ.ಕಥೆಯ ಕಡೆಯ ಟ್ವಿಸ್ಟ್ ಅನ್ನು ಸೆಮಿನಾರ್ ನಂತರದ ಚರ್ಚೆಗೆ ಹೋಲಿಸಿದ್ದು ತುಂಬಾ ಇಷ್ಟವಾಯಿತು. ನೀನು ಹೇಳಿದ ಇನ್ನೊಂದು ಅಂಶವೂ ಅನೇಕರ ಅನುಮಾನಗಳಿಗೆ ಉತ್ತರದಂತಿದೆ! ( ಕೇವಲ ಒಬ್ಬನ ಸಾಹಸವನ್ನು ಕೊಂಡಾಡುವುದೇ ಕಥೆಯ ಮುಖ್ಯ ಉದ್ದೇಶವಲ್ಲ)
ನೀನು ಕಥೆ ಇಷ್ಟ ಪಟ್ಟಿದ್ದಕ್ಕೆ Thanks!!
ಚಂದ್ರಕಾಂತ ಅವರೆ,
ReplyDeleteತುಂಬಾ ತಡವಾಗಿ ಓದಿದೆ. ಕಾರಣ ಮಾನಸಕ್ಕೆ ಬಿಡುವು ಕೊಟ್ಟದ್ದಲ್ಲದ್ದೇ ಸ್ನೇಹಕೂಟಕ್ಕೂ ಸ್ವಲ್ಪ ಬಿಡುವು ಕೊಟ್ಟುಬಿಟ್ಟಿದ್ದೆ. ಆದರೆ ತಡವಾದರೂ ಸರಿ ಒಂದೊಳ್ಳೆಯ ನೀತಿಯನ್ನು ಸಾರುವ ಕಥಾ ಪ್ರಸಂಗವನ್ನು ಓದುವ ಅವಕಾಶ ತಪ್ಪಲಿಲ್ಲ. ಈ ಪ್ರಸಂಗವನ್ನು ನಾನು ಈವರೆಗೂ ಕೇಳಿರಲೇ ಇಲ್ಲ! ತಿಳಿಸಿಕೊಟ್ಟದ್ದಕ್ಕೆ ತುಂಬಾ ಧನ್ಯವಾದಗಳು.
ಅಂತೆಯೇ ಇದರ ಹಿಂದಿನ ಕಥೆಯಾದ ಸೀತೆಯ ಅಗ್ನಿ ಪ್ರವೇಶದ ಪ್ರಸಂಗವೂ ತುಂಬಾ ಮೆಚ್ಚುಗೆಯಾಯಿತು. ಕುವೆಂಪು ಅವರ ವಿಶಾಲ ದೃಷ್ಟಿಕೋನ ಮೆಚ್ಚುವಂತದ್ದು. ಹೀಗೇ ಬರೆಯುತ್ತಿರಿ. ಬಿಡುವಾದಾಗ ಬರುತ್ತಿರುವೆ.
ತೇಜಸ್ವಿನಿ
ReplyDeleteನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಯಿತು. ನೀವು ಪೂರ್ತಿ ಮಾಯವಾಗಿಯೇಹೋದಿರೇನೋ ಅನ್ನಿಸಿತ್ತು. ಸದ್ಯ! ಒದುವುದಕ್ಕೆ ಬಿಡುವು ಕೊಟ್ಟಿಲ್ಲವಲ್ಲ.
ನೀವು ಹೇಳಿದಂತೆ ಈ ಕಾತೆಯ ನೀತಿ ನನಗೂ ಇಷ್ಟವಾಯಿತು. ಏಕೆಂದರೆ ಇದನ್ನು ಎಲ್ಲ ಕಾಲಕ್ಕೂ ಅನ್ವಯಿಸಿಕೊಳ್ಳಬಹುದು ನೋಡಿ!
ನಿಜ ಕುವೆಂಪು ಅವರ ವಿಶಾಲ ದೃಷ್ಟಿಕೋನ ಅವರ ರಾಮಾಯಣದರ್ಶನಮ್ ನಲ್ಲಿ ಅನೇಕ ಕಡೆಗಳಲ್ಲಿ ವ್ಯಕ್ತವಾಗಿದೆ.ಆಗಾಗ ಬರುತ್ತಿರಿ. ಧನ್ಯವಾದಗಳು.
ಚಂದ್ರಕಾಂತ ಮೇಡಂ,
ReplyDeleteನನಗೆ ಈ ವಿಷಯ ಅರಗಿಸಿಕೊಳ್ಳಲಾಗುತ್ತಿಲ್ಲ, ನನ್ನ ಅಲ್ಪ ತಿಳುವಳಿಕೆ ಕಾರಣ ವಿರಬಹುದು. ರಾಮನನ್ನು ಪರಮ ಪುರುಷ ಅಥ್ವಾ ಪುರುಷರಲ್ಲಿ ಶ್ರೇಷ್ಠ ಎಂದೆಲ್ಲಾ ಬಿಂಬಿಸಿರುವರು ಎಡವಿದರೇ? ಅಥವಾ ಮಹಾ ಪುರುಷನೂ ಕಡೆಗೆ ಮಾನವ ಸಹಜ ಅಹಂಗೆ ದಾಸನಾಗಬಲ್ಲ ಎಂದು ತೋರಿಸಲೋ..? ಅಥವಾ ನಶಿಸುತ್ತಿದ್ದ ಸ್ತ್ರೀ ಬಗೆಗಿನ ಗೌರವ ಗಳನ್ನು ಜಾಗೃತಗೊಳಿಸಲು ರಚನೆಯಾದದ್ದೋ..? ಇವೆಲ್ಲಾ...ಮಂಥನದತ್ತ ಎಲ್ಲರನ್ನೂ ದೂಡುವುದು ಸಹಜ. ಇಲ್ಲಿ ಇನ್ನೊಂದು ಅಂಶ ತಿಳಿದುಕೊಳ್ಳಬಯಸುತ್ತೇನೆ...ಈ ಕೃತಿ ಯಾರದ್ದು...ನಿಮ್ಮ ಮುಂದಿನ ಪೋಸ್ಟ್ ನಲ್ಲಿ ಇದರ ಬಗ್ಗೆ ಬರೆದರೆ ಒಳ್ಳೆಯದು...ಒಟ್ಟಿನಲ್ಲಿ...ಒಳ್ಳೆಯ POST.
ಜಲನಯನ
ReplyDeleteನಿಮಗೆ ಯಾವ ವಿಷಯ ಅರಗಿಸಿಕೊಳ್ಳಲು ಆಗಲಿಲ್ಲ? ರಾಮನಿಗೆ ಅಹಂಕಾರ ಬಂತೆಂಬುದೇ ಅಥವಾ ಅವನ ಆ ಗುಣವನ್ನು ಅಹಂಕಾರ ಎಂದು ಕರೆದ ಕಾರಣವೋ ?ನನಗೆ ಅನ್ನಿಸುವುದನ್ನು ಸರಳವಾಗಿ ಹೇಳುವೆ.
ನಮ್ಮ ಮಹಾಕಾವ್ಯಗಳು (ರಾಮಾಯಣ , ಮಹಾಭಾರತ)ನಮ್ಮ ಜನರ ನಡುವಿನಿಂದಲೇ ಹುಟ್ಟಿಕೊಂಡಿರುವಂಥವು. ಸಮಾಜ ಎಂದ ಮೇಲೆ ಸಾಮಾನ್ಯ ಮನುಷ್ಯ ಎಂದ ಮೇಲೆ ಅವನಲ್ಲಿ ಒಳ್ಳೆಯ ಹಾಗೂ ಕೆಟ್ಟ ಗುಣಗಳೆರದೂ ಇರುತ್ತವೆ. ಯಾವ ಮನುಷ್ಯ ತನ್ನ ದೋಷಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತಾನೋ ಅವನು ಶ್ರೇಷ್ಟ ಪುರುಷ ಅನ್ನಿಸಿಕೊಂಡು ಕಡೆಗೆ ದೇವರಾಗುತ್ತಾನೆ.
ಈ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡರೆ ರಾಮನ ಅಹಂಕಾರ ಅಸಹಜವೆನ್ನಿಸುವುದಿಲ್ಲ.ನೀವು ಹೇಳಿದ - ಮಹಾ ಪುರುಷನೂ ಮಾನವ ಸಹಜ ಅಹಒಗೆ ದಾಸನಾಗಬಲ್ಲ- ನೂರಕ್ಕೆ ನೂರು ನಾನೊಪ್ಪುವ ಮಾತು.
ಇಂತಹ ಅಹಂಕಾರ ಭಂಗವನ್ನು ಅರ್ಜುನ , ಭೀಮ ಹನುಮಂತ ಮುಂತಾದ ಮಹಾಪುರುಷರ ಕಥೆಗಳಲ್ಲೂ ಕಾಣುತ್ತೇವೆ.
ಈ ಕೃತಿಯ ಬಗ್ಗೆ ಸಿಂಚನ ಅವರ ಪ್ರಶ್ನೆಗೆ ಉತ್ತರಿಸಿದ್ದೇನೆ. ಆದರೂ ನೀವು ಹೇಳಿದಂತೆ ಮುಂದಿನ ಪೋಸ್ಟ್ ನಲ್ಲಿ ವಿವಿಧ ರೀತಿಯ ರಾಮಾಯಣಗಳ ಕಿರು ಪರಿಚಯ ಮಾಡಿಕೊಡುವೆ.
ಒಳ್ಳೆಯ ಪೋಸ್ಟ್ ಎಂದಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆ ನಿರಂತರವಾಗಿರಲಿ
ಚಕಾ ಮೇಡಂ
ReplyDeleteಇಲ್ಲಿ ನನಗೆ ತಿಳಿದ ಅಂಶ ಎಂದರೆ..ಇವು ಮಾನವ ನಿರ್ಮಿತ ಕಥೆಗಳಾದರೂ..ಇವಕ್ಕೆ ಬಹು ವಿಶಿಷ್ಟ ಸ್ಥಾನ ಕೊಡಲಾಗಿದೆ, ಕಾರಣ ಬಹುಶಃ ಇವುಗಳಿಂದಲೇ ಮಾನವ ತನ್ನ ಮೌಲ್ಯ ಮಾಪನ ಮತ್ತು ಬದುಕುಗಳನ್ನು ರೂಪಿಸಲು ಸಹಕಾರಿಯಾಗಲೆಂದು...ಅಲ್ಲವೇ..? ಅವತಾರಗಳೂ ಮಾನವ ರೂಪದಲ್ಲೇ ಆದುವು ಆದ ಕಾರನಾ ಮಾನವ ಸಹಜ ದ್ವೇಷ, ಮಾತ್ಸರ್ಯ ಅಹಂ ಇತ್ಯಾದಿ ಅವರಲ್ಲಿ ಬಂದವು ಎನ್ನಿವ ನಿಮ್ಮ ತರ್ಕ ಅಕ್ಷರಶಃ ಒಪ್ಪುವಂತಹುದು..ಆದರೆ ಅವನ್ನೆಲ್ಲಾ ಗೆದ್ದು ಪರಮಪುರುಷ ಮಹಾತ್ಮ ನಂತರ ಪರಮಾತ್ಮ ಆದವರು ಅವರು ಎನ್ನುವುದೂ ತರ್ಕಬದ್ದವೇ..ಆದರೆ ನಾನು ಕೇಳಿರುವ ಕೆಲವು ಪೌರಾಣಿರ ಕಥೆಗಳಲ್ಲಿ ದೇವರುಗಳಲ್ಲೂ ಈ ಲೋಪಗಳು ಇದ್ದವು ಎಂದಿದೆಯಲ್ಲ ಏಕೆ?? ಇದಕ್ಕೆ ಹೇಗೆ ನಿಮ್ಮ ತರ್ಕ..??
sorry ಕೆದಕಿ--ರಾಡಿ ಮಾಡುತ್ತಿಲ್ಲವಲ್ಲಾ..?